ಬೆಂಗಳೂರು, ಏ.8,ಕೊರೊನಾ ಸೋಂಕು ನಿಯಂತ್ರಿಸಲು ದೇಶವ್ಯಾಪಿ ಲಾಕ್ ಡೌನ್ ಆದೇಶ ಜಾರಿಯಾದ ಹಿನ್ನೆಲೆಯಲ್ಲಿ ಜಾತ್ರೆ, ಜಯಂತಿ ಮೇಲೂ ಅದರ ಕರಾಳ ಛಾಯೆ ಆವರಿಸಿದೆ. ಬುಧವಾರ ಹನುಮ ಜಯಂತಿ ಪ್ರಯುಕ್ತ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹನುಮ ಜಯಂತಿಯ ಶುಭಾಷಯಗಳನ್ನು ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಷಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದಿದ್ದಾರೆ.ಇನ್ನು, ಜನರಿಗೆ ಕೊರೊನಾ ಜಾಗೃತಿಯ ಬಗ್ಗೆ ಸಂದೇಶ ನೀಡಿರುವ ಅವರು, ಮನೆಯಲ್ಲೇ ಇರಿ, ಹುಷಾರಾಗಿರಿ ಎಂದು ಮನವಿ ಮಾಡಿದ್ದಾರೆ.ಇನ್ನು, ಹನುಮನ ಭಕ್ತರು ಮನೆಯಲ್ಲೇ ಇದ್ದುಕೊಂಡು ಮನದಲ್ಲಿ ಹನುಮರ ಸ್ಮರಣೆ ಮಾಡುವ ಮೂಲಕವೇ ತಮ್ಮ ದೈವವನ್ನು ಸ್ಮರಿಸುತ್ತಿದ್ದಾರೆ.