ಬೆಂಗಳೂರು, ಫೆ 11,ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ಭಾವಿ ಪತ್ನಿಗೆ ರಿಂಗ್ ಹಾಕಿದ್ದು, ಮತ್ತೊಂದು ಜೋಡಿಯೂ ಸದ್ಯದಲ್ಲೇ ಹಾರ ಬದಲಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬಂದಿವೆ. ಇತ್ತೀಚೆಗಷ್ಟೇ ‘ಲವ್ ಮಾಕ್‍ಟೇಲ್’ನಂತಹ ಸುಮಧುರ ಪ್ರೇಮಕಥೆಯನ್ನು ತೆರೆಗೆ ನೀಡಿರುವ ಜೋಡಿಯೇ ಲವ್ ನಲ್ಲಿ ಬಿದ್ದಿರೋದು ಹೌದು, ಈ ಚಿತ್ರದ ನಾಯಕ, ನಾಯಕಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ್ ನಾಗರಾಜ್ ಗೆ ಲವ್ ಆಗಿದ್ಯಂತೆ ಹೀಗಂತ ಸ್ವತಃ ಕೃಷ್ಣ ಅವರೇ ‘ಲವ್ ಮಾಕ್ ಟೇಲ್’ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡರು ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲಿಗೆ ಇವರಿಬ್ಬರೂ ಜೋಡಿಯಾಗಿ ನಟಿಸಿದ್ದರು ಬಳಿಕ ಚಂದ್ರಲೇಖ ರಿಟರ್ನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು
ಅಂದ ಹಾಗೆ ಇವರಿಬ್ಬರ ಲವ್ ಇವತ್ತಿನದಲ್ಲ, 5 ವರ್ಷಗಳಷ್ಟು ಹಳೆಯದು ಇವರಿಬ್ಬರ ಪ್ರೀತಿಗೆ ಮನೆಯವರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದ್ದು, ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಕೂಡ ಇದೆಯಂತ. 1989 ರಲ್ಲಿ ಹಾಸನದಲ್ಲಿ ಜನಿಸಿದ ಮಿಲನಾ ನಾಗರಾಜ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ. 2013 ರಲ್ಲಿ ತೆರೆಕಂಡ `ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದಿಂದ ನಾಯಕನಟಿಯಾಗಿ ಚಿತ್ರರಂಗ ಪ್ರವೇಶಿಸಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಬೃಂದಾವನ' ಚಿತ್ರದಲ್ಲಿ ನಟಿಸಿದರು ಒಂದು ಮಲಯಾಳಂ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಡಾರ್ಲಿಂಗ್ ಕೃಷ್ಣ ಅಂತಲೇ ಜನಪ್ರಿಯರಾಗಿರುವ ಸುನಿಲ್ ನಾಗಪ್ಪ ಕೂಡ ಜಾಕಿ, ಹುಡುಗರು, ಮದರಂಗಿ, ನಮ್ ದುನಿಯಾ ನಮ್ ಸ್ಟೈಲ್, ರುದ್ರತಾಂಡವ, ಚಾರ್ಲಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ಲವ್ ಮಾಕ್ ಟೇಲ್ ಇವರದೇ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಆದಷ್ಟು ಬೇಗ ಜೋಡಿಯಾಗಿ ಸುಖವಾಗಿರಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ.