ರಾಣೇಬೆನ್ನೂರ20: ವಿಠ್ಠಲ ರುಕುಮಾಯಿ ದಿಂಡಿ ಉತ್ಸವ, ಭಾವಸಾರ ಕ್ಷತ್ರಿಯ ದೈವ ಮಂಡಳಿ ಮತ್ತು ಯುವಕ ಮಂಡಳಿ ಹಾಗೂ ಭಜನಾ ಮಂಡಳಿ ಇವರ ಆಶ್ರಯದಲ್ಲಿ 40ನೇ ವರ್ಷದ ದಿಂಡಿ ಉತ್ಸವ ಕಾರ್ಯಕ್ರಮವು ಜು.22 ರಿಂದ ಜು.24 ರವರೆಗೆ 3 ದಿನಗಳ ಕಾಲ ಕೋಟೆ ರೋಡ್ನಲ್ಲಿರುವ ಯಮನೂರು ಗಲ್ಲಿಯ ವಿಠ್ಠಲ ಮಂದಿರದಲ್ಲಿ ನಡೆಯಲಿದೆ.
ಜು.22 ರಂದು ರಾತ್ರಿ.8.30ಕ್ಕೆ (ಗ್ರಂಥ) ಪೋತಿ ಸ್ಥಾಪನೆ ಮತ್ತು ಭಜನಾ ಕಾರ್ಯಕ್ರಮಗಳು ಜರುಗಲಿವೆ. ಜು.23 ರಂದು ಏಕಾದಶಿ, ಜು.24 ರಂದು ಬೆ.8 ಗಂಟೆಗೆ ವಿಠ್ಠಲ ರುಕುಮಾಯಿ ಮೂತರ್ಿಯ ಪಾಲಕಿ ಉತ್ಸವ ಹಾಗೂ ನಗರ ಪ್ರದಕ್ಷಣೆ ನಂತರ ಮಧ್ಯಾಹ್ನ.2ಗಂಟೆಗೆ ಅನ್ನಸಂತರ್ಪಣೆ ನಡೆಯುವುದು.
ಹೊಳಲಿನ ದೊಂಡಿಬಾ ಟಿಕಾರೆ ಮತ್ತು ಹುಬ್ಬಳ್ಳಿಯ ವೆಂಕಟೇಶರಾವ್ ಸರ್ವದೆ, ದಾವಣಗೇರಿಯ ವಿಶ್ವನಾಥ ಜಿಂಗಾಡೆ, ತಿಪ್ಪೇಶ ಗಣಾಚಾರಿ, ಶ್ರೀಕಾಂತ ಜಿ.ಪಿ, ಸವಣೂರಿನ ನಾಮದೇವ ರಾಶಿಂಕರ ಸಂಗಡಿಗರಿಂದ ಕೀರ್ತನೆ ಮತ್ತು ಪ್ರವಚನ ನಡೆಯುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಭಾವಸಾರ ಕ್ಷತ್ರಿಯ ಸಮಾಜವು ಪ್ರಕಟಣೆಯಲ್ಲಿ ತಿಳಿಸಿದೆ.