ದಾಂಡೇಲಿ ನ್ಯಾ. ಅಜೀತ ನಾಯ್ಕ ಭೀಕರ ಕಗ್ಗೋಲೆ


ದಾಂಡೇಲಿ 28: ನಗರದ ಇತಿಹಾಸದಲ್ಲಿ ಎಂದು ಕಂಡು ಕೆಳರಿಯದಂತ ಘನ ಘೋರ ಭೀಭಿತ್ಯ್ಸ ಭೀಕರ ಕಗ್ಗೋಲೆ, ದಾಂಡೇಲಿಯ ಹಿರಿಯ ನ್ಯಾಯವಾದಿ, ಮಾಜಿ ನಗರಸಭೆ ಅಧ್ಯಕ್ಷ, ತಾಲೂಕು ರಚನಾ ಸಮಿತಿಯ ಅಧ್ಯಕ್ಷ ಹಾಗೂ ಅಗ್ರಗಣ್ಯ ನಾಯಕ ಅಜೀತ ಎಮ್ ನಾಯ್ಕ(57) ಕೊಲೆಗುಡುಕನ ಮಚ್ಚಿನ ಏಟಿಗೆ ಅತ್ಯಂತ ದಾರುಣ ಸಾವು ಶುಭ ಶುಕ್ರವಾರದ ಅಶುಭ ಗಳಿಗೆಯಲ್ಲಿ ದಾಂಡೇಲಿ ನಗರದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಯಿತು.

ಎಂದಿನಂತೆ ತಮ್ಮ ಕಛೇರಿಯಲ್ಲಿ ಕಾರ್ಯ ನಿರತರಾಗಿದ್ದ ನ್ಯಾಯವಾದಿ ಅಜೀತ ಎಮ್ ನಾಯ್ಕ ರಾತ್ರಿ ಸುಮಾರು 9.00ಘಂಟೆಗೆ ತಮ್ಮ ಕಛೇರಿಯ ಕೆಲಸ ಮುಗಿಸಿ ಮನೆಗೆ ತೆರಳಲು ತಯಾರಾಗುತ್ತಿದ್ದಾರೆ, ಇತ್ತ ಯಮ ಸ್ವರೂಪಿ ಕಿರಾತಕ ಹೊಂಚುಹಾಕಿ ಹೊರಗೆ ನಿಂತಿದ್ದಾನೆ ಎಂದು ಅವರಿಗೆ ತಿಳಿದಿಲ್ಲ. ಸುಮಾರು 9.10ಕ್ಕೆ ಕಛೇರಿಗೆ ಬೀಗ ಜಡೆದು ಕೆಳಗೆ ಇಳಿದು ಬಂದಿದ್ದಾರೆ ಅವರ ಆಪ್ತರಾದಂತವರು ಸಹ ಅವರ ಜೊತೆಯಲ್ಲಿದ್ದಾರೆ. 

ಇನ್ನೊಂದು ಕಡೆ ದುಷ್ಟ ಕಿರಾತಕ ಸಮಯ ಕಳಿಯುತ್ತಿದ್ದಂತೆ ಮಚ್ಚು ಝಳಕಿಸಲು ಚಡಪಡಿಸುತ್ತಿದ್ದಾನೆ, ಸಮಯ ಉರುಳುತ್ತಿದೆ ಅಜೀತ ನಾಯ್ಕರವರು ಕಾರಿನತ್ತ ಹೆಜ್ಜೆ ಹಾಕುತ್ತಿದ್ದಾರೆ ಇತ್ತ ಹೊಂಚು ಹಾಕಿ ಕುಳಿತ್ತಿದ್ದ ಆಗುಂತಕ ಹತ್ತಿರ ಬರಲಾರಂಬಿಸಿದ್ದಾನೆ ಸೆಕೆಂಡಗಳು ಉರುಳಲಾರಂಭಿಸುತ್ತವೆ ಇನ್ನೇನು ಅಜೀತ ನಾಯ್ಕ ತಮ್ಮ ಕಾರಿನ ಬಳಿ ತಲುಪಲಿದ್ದಾರೆ ಅಷ್ಟರಲ್ಲಿ ಕಿರಾತಕ ಕೊಲೆಗುಡುಕ ಹತ್ತಿರ ಬರ ತೊಡಗುತ್ತಾನೆ ಇತ್ತ ಅಜೀತ ನಾಯ್ಕರವರು ತಮ್ಮ ಕಾರಿನ ಬಾಗಿಲು ತೆಗೆಯಲು ಕೈ ಇಡುತ್ತಿದ್ದಂತೆ ಹಿಂದಿನಿಂದ ತೀರ ಹತ್ತಿರ ಬಂದ ಕಿರಾತಕ ಅಜೀತ ನಾಯ್ಕರವರ ಕುತ್ತಿಗೆ ಮೇಲೆ ಮಚ್ಚನ್ನು ಬಿಸಿದ್ದಾನೆ ತಕ್ಷಣ ಅಜೀತ ನಾಯ್ಕರವರು ನೆಲಕ್ಕೆ ಕುಸಿದಿದ್ದಾರೆ. 

ಹಿಮ್ಮುಖವಾಗಿ ನಿಂತಿದ್ದ ಆಪ್ತರು ಶಬ್ದ ಬಂದ ತಕ್ಷಣ ಹಿಂತಿರುಗಿ ನೋಡಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ ಅಜೀತ ನಾಯ್ಕರವರ ಬಳಿ ಧಾವಿಸಿ ಬಂದಿದ್ದಾರೆ ಆದರೆ ಅವರ ಕೈ ಕಾಲುಗಳಲ್ಲಿ ನಡುಕ, ನಾಲ್ಕು ಹೆಜ್ಜೆ ಮುಂದೆ ಹೋಗಿದ್ದ ಕಿರಾತಕ ಕೊಲೆಗುಡುಕ ಪುನಃ ಬಂದು ಮತ್ತೆ ಅಜೀತ ನಾಯ್ಕರವರ ಮೇಲೆ ಕ್ಷಣ ಮಾತ್ರದಲ್ಲಿ ಮಚ್ಚು ಬಿಸಿ ನಡೆದುಕೊಂಡೆ ಕತ್ತಲಲ್ಲಿ ಮಾಯವಾಗಿದ್ದಾನೆ ಒಂದಲ್ಲ ಎರಡಲ್ಲ ನಾಲ್ಕೈದು ಬಾರಿ ಮಚ್ಚನ್ನು ಬಿಸಿದ್ದಾನೆ ಅಕ್ಕಪಕ್ಕದಲ್ಲಿ ನಿಂತಿದ್ದ ಜನರ ಜಂಘಾಬಲವೆ ಅಡಗಿದೆ ಏನೋ ಎಂಬಂತ ಅನುಭವ ಸಾವರಿಸಿ ಕೊಂಡ ಕೆಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜೀತ ನಾಯ್ಕರನ್ನು ಅವರ ಕಾರಿನಲ್ಲಿಯೇ ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೆ ರಾತ್ರಿ ಸುಮಾರು 9.15ಕ್ಕೆ ಪ್ರಾಣಪಕ್ಷಿ ಹಾರಿ ಹೋಗಿರಬಹುದೆಂದು ತಿಳಿದು ಬಂದಿದೆ.

ಆಸ್ಪತ್ರಗೆ ದಾಖಲಿಸುತ್ತಿದ್ದಂತೆ ಗಡಿಬಿಡಿಗೊಂಡ ದಾದಿಯರಲ್ಲಿ ತಲ್ಲಣ ಅತ್ತ ಮೊಬೈಲ್ನಲ್ಲಿ ಅಜೀತ ನಾಯ್ಕರವರ ಸಾವಿನ ಸುದ್ಧಿ ಕಾಡ್ಗಿಚ್ಚಿನಂತೆ ನಗರದಾದ್ಯಂತ ವ್ಯಾಪಿಸಿ ಬಿಟ್ಟಿತು, ಇನ್ನೊಂದು ಕಡೆ ಎಲ್ಲರ ಮೊಬೈಲ್ಗಳಲ್ಲಿ ಅಜೀತ ನಾಯ್ಕರವರ ಬಣ್ಣ ಬಣ್ಣದ ವಾಟ್ಸ್ ಆಫ್ ಮೆಸೆಜಗಳು ನುಗ್ಗಿ ಬರತೊಡಗಿದವು ಅಷ್ಟರಲ್ಲೇ ಆಸ್ಪತ್ರೆಯಲ್ಲಿ ಪೋಲಿಸರ ಪ್ರವೇಶ ಆರಂಭವಾಯಿತು ಕ್ಷಣ ಮಾತ್ರದಲ್ಲೆ ಪೋಲಿಸ ವಾಹನದ ಸದ್ದು ನಗರದಾದ್ಯಂತ ಕೆಳಿಬರತೊಡಗಿತು. 

ಸುದ್ಧಿ ಹರಡುತ್ತಿದ್ದಂತೆ ತಂಡೋಪ ತಂಡವಾಗಿ ಜನರು ಸರಕಾರಿ ಆಸ್ಪತ್ರೆ ಧಾವಿಸ ತೊಡಗಿದರು ಎಲ್ಲರಲ್ಲಿಯೂ ಧಿಗ್ಬ್ರಮೆ, ಗಲಿಬಿಲಿ ಸಾವಿರಾರು ಜನರು ಹಾಗೂ ನಗರದ ಗಣ್ಯಾತಿ ಗಣ್ಯರು ಶ್ರೀ ಅಜೀತ ನಾಯ್ಕರ ದುರಂತಮಯ ಸಾವಿಗೆ ಕಂಬನಿ ನೀಡಿಯ ತೊಡಗಿದರು ಶುಭ ಶುಕ್ರವಾರದಂದು ಅಶುಭಗಳಿಗೆಯಲ್ಲಿ ನಗರದ ಅಗ್ರ ಗಣ್ಯ ನಾಯಕನ ಅಂತ್ಯವಾಗಿ ದಾಂಡೇಲಿ ನಗರದ ಇತಿಹಾಸ ಪುಟಗಳಲ್ಲಿ ಎಂದು ಅಳಿಸಲಾಗದಂತಹ ಕಪ್ಪು ಚುಕ್ಕೆಯಾಗಿ ಸೇರಿ ಹೋಯಿತು.

ಪೋಲಿಸರು ಈಗಾಗಲೇ ತಲೆಮರಿಸಿಕೊಂಡಿರುವ ಕೊಲೆಗಾರನನ್ನು ಹಿಡಿಯಲು ವ್ಯಾಪಕ ಬಲೆ ಬಿಸಿದ್ದಾರೆ ಜೊತೆಗೆ ನಗರಾದ್ಯಂತ ಅಳವಡಿಸಿರುವ ಸಿಸಿ ಕ್ಯಾಮರಾ ಗಮನಿಸಲಾಗುತ್ತಿದೆ, ಹಲವರನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದೆ ಕೊಲೆಗಾರನನ್ನು ಅತೀ ಶೀಘ್ರದಲ್ಲಿ ಬಂಧಿಸುವುದಾಗಿ ನಗರದ ಡಿ.ಎಸ್.ಪಿ ಶ್ರೀ ಮಹಾದೇವ ಪ್ರಸಾದ ಹೇಳಿದ್ದಾರೆ.