ಲೋಕದರ್ಶನ ವರದಿ
ದಾಂಡೇಲಿ: ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಬುಧವಾರ ನಡೆದ ಚುನಾವಣೆಯಲ್ಲಿ ಸದಸ್ಯ ಶ್ರೀ ಅಶೋಕ ಪಾಟೀಲ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದಾರೆ. ಕಳೇದ ಮೂರು ತಿಂಗಳಿಂದ ಪ್ರಭಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಂಘದ ನಿಯಮಕ್ಕೆ ಬದ್ದರಾಗಿ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿ ಆಡಳಿತದಲ್ಲಿ ಚುರುಕು ಮುಟ್ಟಿಸಿದ್ದರು. ಇವೆಲ್ಲವು ನಿನ್ನೆ ನಡೆದ ಚುನಾವಣೆಯಲ್ಲಿ ಇವರ ಅವಿರೋಧ ಆಯ್ಕೆಗೆ ನೇರವಾದವು.
ಶ್ರೀ ಸಾಗರ ಎಸ್.ಮಿರಾಶಿ ರಿಟನರ್ಿಂಗ್ ಅಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಭಂಧಕರ ಕಛೇರಿ ಕಾರವಾರ ಇವರ ನೇತೃತ್ವದಲ್ಲಿ ಸಹಕಾರಿ ಸಂಘಗಳ ನಿಯಮಗಳ ಅನುಸಾರ ಚುನಾವಣೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ವ್ಯವಸ್ಥಾಪಕಿ ಶ್ರೀಮತಿ ವಿಜಯಲಕ್ಷ್ಮೀ ಹೋಸಮಠ ಸಂಘದ ಸದಸ್ಯರಾದ ಎಸ್.ಎ. ಕೊನಾಪುರಿ, ಚಂದ್ರಯ್ಯ ಅಂದಾಕಾರಿಮಠ, ಬಸಯ್ಯ ಹೀರೆಮಠ, ಶರಣಪ್ಪ ಮುರಳಿ, ಮಹದೇವ ತಮ್ಮನವರ, ಸಂಗಮೇಶ ಹೀರೆಮಠ, ಪರವೀನ ಯರಗೆಟ್ಟಿ, ಮಂಜುನಥ ಸುಂಕದ, ಸಿಬ್ಬಂದಿಗಳಾದ ರವಿ ಹಾಗೂ ದೀಪಾ ಉಪಸ್ಥಿತರಿದ್ದರು.