ಲೋಕದರ್ಶನ ವರದಿ
ಮುಧೋಳ 9: ನೃತ್ಯ ಪ್ರಾಚೀನ ಪರಂಪರೆಯ ಕಲೆ, ಹಾವ, ಭಾವ, ದೈಹಿಕ ವ್ಯಾಯಾಮದ ನೃತ್ಯಕ್ಕೆ ಹಿಂದೆ ರಾಜಾಶ್ರಯ ಇತ್ತು.ಸಕರ್ಾರ,ಸಂಘ-ಸಂಸ್ಥೆಗಳು ಇಂತಹ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ರನ್ನ ಶುಗರ್ಸ್ ಅಧ್ಯಕ್ಷ ಆರ್.ಎಸ್.ತಳೇವಾಡ ಹೇಳಿದರು.
ನಗರದ ರನ್ನ ಸಾಂಸ್ಕೃತಿಕ ಸಭಾಭವನದಲ್ಲಿ ನೂಪುರ ನೃತ್ಯ ವಿದ್ಯಾಮಂದಿರದ ಆಶ್ರಯದಲ್ಲಿ ನಡೆದ ನೃತ್ಯ ವೈಭವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿ ಕಮಲಾ ನಿರಾಣಿ ಮಾತನಾಡಿ,ಸಕರ್ಾರದ ಯಾವುದೇ ಸಹಾಯ ಸಹಕಾರವಿಲ್ಲದೇ ಈ ಕಲೆಯನ್ನು ಬೆಳೆಸುತ್ತಿರುವ ನೂಪುರ ನೃತ್ಯ ವಿದ್ಯಾಮಂದಿರದ ವಿದುಷಿ ಶ್ರೀಮತಿ ಜಯೇಶ್ವರಿ ಎಂ.ನಾಯಕ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ತಿಳಿಸಿದ ಅವರು ನೃತ್ಯದಲ್ಲಿ ಅವರ ಅನುಭವ, ಶೃದ್ಧೆಯಿಂದ ನಮ್ಮ ತಾಲೂಕಿನ ನೂರಾರು ವಿದ್ಯಾಥರ್ಿನಿಯರಿಗೆ ಭರತನಾಟ್ಯ, ಕಥಕ, ಕುಚಪುಡಿ ನೃತ್ಯ ಹಾಗೂ ಕನರ್ಾಟಕ ಸಂಗೀತವನ್ನು ಸಂಸ್ಥೆಯ ಮೂಲಕ ಕಲಿಸಿ ಅವರನ್ನು ಸಾಧನೆಗೈಯುವ ಮಟ್ಟಕ್ಕೆ ಪರಿಣಿತರನ್ನಾಗಿ ಮಾಡಿದ್ದಾರೆ ಎಂದರು.
ಪತ್ರಕರ್ತ ಅಶೋಕ ಕುಲಕಣರ್ಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ,ವಕೀಲರ ಸಂಘದ ಅಧ್ಯಕ್ಷ ಸುರೇಶ ಮಾಸರಡ್ಡಿ,ಪ್ರಗತಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಬಸವರಾಜ ಮಾನೆ, ಲೋಕಾಪೂರದ ಉದ್ಯಮಿ ಎಚ್.ವ್ಹಿ.ಚಿಕ್ಕೂಡ, ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಪತ್ರಕರ್ತರಾದ ಮಹಾಂತೇಶ ಕರೆಹೊನ್ನ, ಗಣಪತಿರಾವ ಮಾನೆ, ಉದಯ ಕುಲಕಣರ್ಿ, ಗಣೇಶ ಮೇತ್ರಿ,ಬಿ.ಎಚ್.ಬೀಳಗಿ, ಜಗದೀಶ ಜೀರಗಾಳ ಮುಂತಾದವರು ಉಪಸ್ಥಿತರಿದ್ದರು.
ಉದ್ಯಮಿ ಕಮಲಾ ನಿರಾಣಿ ಹಾಗೂ ಪ್ರಗತಿ ಶಿಕ್ಷಣ ಸಂಸ್ಥೆಯ ಪ್ರಕಾ ಬಸವರಾಜ ಮಾನೆ ಅವರನ್ನು ನೂಪುರ ನೃತ್ಯ ವಿದ್ಯಾಮಂದಿರದ ಸಂಸ್ಥೆಯ ವತಿಯಿಂದ ಶಾಲೂ ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ ಮುಧೋಳ ನೂಪುರ ನೃತ್ಯ ವಿದ್ಯಾಮಂದಿರದ ವಿದ್ಯಾಥರ್ಿನಿಯರು ವಿದುಷಿ ಶ್ರೀಮತಿ ಜಯೇಶ್ವರಿ ನಾಯಕ ಅವರನ್ನು ಶಾಲು ಹೊದಿಸಿ ಕಾಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಪರವಾಗಿ ಸಾಗರದ ವಿದ್ವಾನ್ ಅಶೋಕಕುಮಾರ ಹೆಗ್ಗೋಡ್, ಬೆಂಗಳುರಿನ ವಿದ್ವಾನ್ ಶ್ರೀಪಾದ ಭಟ್,ಧಾರವಾಡದ ವಿದ್ವಾನ್ರಾದ ಶಂಕರ ಕಬಾಡಿ ಹಾಗೂ ವೈಭವ ಭಟ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾಥರ್ಿನಿಗಳಾದ ದಿಶಾ ಶೆಟ್ಟಿ, ಚೈತನ್ಯ ಶಿಂಧೆ, ಸುಪ್ರೀಯಾ ಕೊರಡ್ಡಿ, ಕೀರ್ತನಾ ಅಮ್ಮಣಗಿ, ವಿನಯಾ ದೇವಾಡಿಗಾ, ನಂದನಿ ಹೊಸಮನಿ, ಪ್ರಜ್ಞಾ ಚಿಕ್ಕೂಡ, ಸಂಜನಾ ಬೋಸಲೆ, ಸಲೋನಿ ಪೂಜಾರಿ, ಸ್ಪಂದನಾ ಪರೀಟ,ಬಿಂದುಶ್ರೀ ಹೆಗಡೆ,ವೈಷ್ಣವಿ ದೇವರಮನಿ, ದೀಕ್ಷಾ ಮಿಜರ್ಿ, ಸ್ಪೂತರ್ಿ ರಾಯ್ಕರ, ನಂದನಿ ಬೋಸಲೆ,ಅನನ್ಯಾ ಚಿಕ್ಕೂರ, ಸ್ನೇಹಾ ಬಸವನಾಳ,ಕೀತರ್ಿ ಪಾಟೀಲ,ಸುಚಿತ್ರಾ ಪಾಟೀಲ,ಲಾವಣ್ಯ ರಂಗಣ್ಣವರ ಹಾಗೂ ಉಷಾ ಆರ್.ಮುತ್ತಿನಮಠ ಅವರನ್ನು ಗಣ್ಯರು ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಬಳಿಕ ನೂಪುರ ಸಂಸ್ಥೆಯ ವಿದ್ಯಾಥರ್ಿನಿಯರು ಮನಸ್ಸಿಗೆ ಮುದ ನೀಡುವ ಹಾರಇ ನೃತ್ಯ ಪ್ರದರ್ಶನ ನೀಡಿ, ಜನರ ಮೆಚ್ಚಿಗೆ ಪಾತ್ರರಾದರು