ಹದಗೆಟ್ಟ ರಸ್ತೆಗಳು, ಸಂಕಷ್ಟದಲ್ಲಿ ವಾಹನ ಸವಾರರು

ಲೋಕದರ್ಶನವರದಿ

ರಾಣೇಬೆನ್ನೂರು: ಜೂ.3: ತಾಲೂಕಿನ ಕೆರೆಮಲ್ಲಾಪುರ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದಾಗಿ ವಾಹನಗಳ ಸಂಚಾರಕ್ಕೆ ಹಾಗೂ ದ್ವಿಚಕ್ರಸವಾರರಿಗೆ ಸಂಕಷ್ಟದ ವಾತಾವರಣ ಕಂಡು ಬರುತ್ತಿದೆ. ಇದು ಪದೆಪದೆ ಹೀಗೆ ಮುಂದುವರೆದರೆ ರಸ್ತೆ ಸಂಪೂರ್ಣ ಬಂದ್ಗೊಳಿಸಿ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

  ಗುತ್ತಲ ಮಾಸೂರ ರೋಡ್ ಬಿಳಿಗಿರಿರಂಗನ ತಿಪ್ಟು ರಾಜ್ಯ ಹೆದ್ದಾರಿಗೆ ಕಲ್ಪಿಸುವ ಈ ರಸ್ತೆ ತೆಗ್ಗು ಗುಂಡಿಗಳಿಂದ ಇದೀಗ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಸಾವಿರಕ್ಕೂ ಅಧಿಕ ವಾಹನಗಳು ಈ ರಸ್ತೆಯ ಮೇಲೆ ಸಂಚರಿಸುತ್ತಿದ್ದು, ಜೀವದ ಹಂಗು ತೊರೆದು ಚಾಲಕರು ಮತ್ತು ಪ್ರಯಾಣಿಕರು ಪ್ರಯಾಣಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

  ತಾಲೂಕಿನ ಪುಣ್ಯಕ್ಷೇತ್ರಗಳಾದ ಸುಕ್ಷೇತ್ರ ದೇವರಗುಡ್ಡ, ಹೊನ್ನತ್ತಿ, ಚೌಡಯ್ಯದಾನಪುರ, ಮೈಲಾರ, ಕುರವತ್ತಿ, ಗಳಗನಾಥ, ಹರಳಹಳ್ಳಿ ಕ್ಷೇತ್ರಗಳಿಗೆ ಈ ಗ್ರಾಮದ ರಸ್ತೆಯ ಮಾರ್ಗದಲ್ಲಿಯೇ ಸಂಚರಿಸಬೇಕಾಗಿದೆ. ಆದರೆ ರಸ್ತೆ ಮಾತ್ರ ಹದಗೆಟ್ಟಿದ್ದು, ದ್ವಿಚಕ್ರ ಸವಾರರು ಅಪಘಾತಕ್ಕೀಡಾಗಿ ಸಾವು ಬದುಕಿನ ಮಧ್ಯ ಹೋರಾಡುವ ದುಸ್ಥಿತಿಯ ನಿದರ್ಶನಗಳ ಹಲವಾರಿವೆ ಎಂದು ದೂರಿದರು.

  ಈ ಬಗ್ಗೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಮತ್ತು ಶಾಸಕರಿಗೆ ತಿಳಿಸಿದರೂ ಸಹ ಬೇಜವಾಬ್ದಾರಿತನದ ಉತ್ತರವನ್ನು ನೀಡುತ್ತಾರೆ. ಇವರಿಂದ ಏನೂ ಪ್ರಯೋಜನವಾಗಿಲ್ಲ. 

     ಕೆಸ್ಎಸ್ಆರ್ಟಿಸಿ ಬಸ್ಗಳ ಚಾಲಕರು ಈ ರಸ್ತೆಯ ವ್ಯವಸ್ಥೆಯನ್ನು ಕಂಡು ಕೆಲಸವೇ ಬೇಡ ಎಂಬ ಗೋಜಿನಲ್ಲಿದ್ದಾರೆ. ಇದೀಗ ಮಳೆಯು ಆಗಮಿಸುತ್ತಿರುವುದರಿಂದ  ಈ ರಸ್ತೆಯಲ್ಲಿ ಸಂಚರಿಸುವುದು ಇನ್ನೂ ಕಷ್ಟಕರವಾಗುವುದು. 

  ಇದು ಹೀಗೆ ಮುಂದುವರೆದು ಹೆಚ್ಚಿನ ಅನಾಹುತ ಸಂಭವಿಸುವ ಮಧ್ಯದರಲ್ಲಿಯೇ ಕೂಡಲೇ ಗುತ್ತಲ ಮಾಸೂರ ರಸ್ತೆಯನ್ನು ತಡೆದು ಪ್ರತಿಭಟಿಸುತ್ತೇವೆ ಎಂದು ಗ್ರಾಮಸ್ಥರಾದ ಗುಡ್ಡಪ್ಪ ಚಿಕ್ಕಣ್ಣನವರ, ರುದ್ರಗೌಡ ಗಂಗನೌಡ್ರ, ಮಂಜು ಅಡ್ಡಂಗಡಿ, ವಿನಾಯಕ ಅರಬಗೊಂಡ, ಶಿವು ಶಿವಲಿಂಗಣಣನವರ, ಕೊಟ್ರೇಶ್ ಬೇತೂರ, ಗುಡ್ಡಪ್ಪ ಮಡಿವಾಳರ, ಪಕ್ಕೀರಗೌಡ ಪಾಟೀಲ ಎಚ್ಚರಿಸಿದ್ದಾರೆ.