ಲೋಕದರ್ಶನ ವರದಿ
ಶಿರಹಟ್ಟಿ 16: ಇತ್ತೀಚೆಗೆ ಸುರಿದ ಅತೀಯಾದ ಮಳೆಗೆ ಸೂರುಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ನಿರಾಶ್ರಿತರ ಕುಟುಂಬಗಳಲ್ಲಿನ ಜಾನುವಾರುಗಳಿಗೆ ಸ್ಥಳಿಯ ಶಾಸಕ ರಾಮಣ್ಣ ಲಮಾಣಿ ಮೇವು ಹಂಚಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಾಲೂಕ ಪಂಚಾಯಿತಿ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟೀಹಳ್ಳಿ, ಗೂಳಪ್ಪ ಕರಿಗಾರ, ಸ್ಥಳಿಯ ಕುಂದುಕೊರತೆ ಸಮಿತಿಯ ಎಸ್ಪಿ ಹಾವೇರಿಮಠ, ಥಾವರೆಪ್ಪ ಲಮಾಣಿ, ಪರಶುರಾಮ ಡೊಂಕಬಳ್ಳಿ, ಶಿನೂ ಬಾರಬಾರ, ಜಗದೀಶ ತೇಲಿ, ಈರಣ್ಣ ಕೋಟಿ ಇನ್ನೂ ಅನೇಕರು ಉಪಸ್ಥಿತರಿದ್ದರು.