ಲೋಕದರ್ಶನ ವರದಿ
ಬೈಲಹೊಂಗಲ: ಕಬ್ಬು ಹೊತ್ತು ಸಾಗಿಸುತ್ತಿರುವ ಟ್ರ್ಯಾಕ್ಟರ್ ಟ್ರ್ಯಾಲಿಯ ಹುಕ್ಕು ಕಳಚಿಕೊಂಡ ಪರಿಣಾಮ ಟ್ರ್ಯಾಲಿಗಳು ಮುಗುಚಿಕೊಂಡು ರಸ್ತೆ ಪಕ್ಕದಲ್ಲಿರುವ ಲಕ್ಷ್ಮೀ ದ್ವಿಚಕ್ರ ವಾಹನ ಏಕ್ಸಚೆಂಜ ಮೇಳದಲ್ಲಿರುವ 9 ಬೈಕ್ಗಳ ಮೇಲೆ ಕಬ್ಬು ಬಿದ್ದ ಪರಿಣಾಮ ಆರು ಬೈಕ್ಗಳು ಸಂಪೂರ್ಣ ಜಖಂಗೊಂಡು ಮೂರು ಬೈಕಗಳು ಅಲ್ಪಸ್ವಲ್ಪ ಹಾನಿಗೊಳಗಾದ ಘಟನೆ ಸಮೀಪದ ಜಾಲಿಕೊಪ್ಪ-ಅರವಳ್ಳಿ ರಸ್ತೆ ಮಧ್ಯೆ ಸೋಮವಾರ ಜರುಗಿದೆ.
ರಸ್ತೆ ಪಕ್ಕದಲ್ಲಿರುವ ಮನೆಯ ಚಾವಣಿಗೆ ಅಲ್ಪ ಪ್ರಮಾಣದ ಹಾಣಿಯಾಗಿದೆ. ಸುಮಾರು 2 ಲಕ್ಷ 80 ಸಾವಿರ ಮೌಲ್ಯದ ದ್ವೀಚಕ್ರ ವಾಹನಗಳು ಹಾನಿಯಾಗಿದೆ ಎಂದು ಮಾಲೀಕ ಸುರೇಶ ಜಳಕದ ಪತ್ರಿಕೆಗೆ ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ .