ಲೋಕದರ್ಶನ ವರದಿ
ಬೈಲಹೊಂಗಲ 04: ತಾಲೂಕಿನ ಸಂಪಗಾಂವ- ಭಾಂವಿಹಾಳ ಮಧ್ಯೆ ರಸ್ತೆ (ಜರಿಹಳ್ಳ) ಇತ್ತಿಚೆಗೆ ಸುರಿದ ಭಾರಿ ಮಳೆಗೆ ಕಿರು ಸೇತುವೆ ಕೊಚ್ಚಿ ಹೋಗಿದ್ದು ಸಾರಿಗೆ ಸಂಚಾರವಿಲ್ಲದೇ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಗ್ರಾಮಸ್ಥರಿಗೆ ತೀವೃ ತೊಂದರೆಯಾಗಿದೆ.
ಇತ್ತಿಚೆಗೆ ಸುರಿದ ಮಳೆಯ ಆವಾಂತರಕ್ಕೆ ಕಿರು ಸೇತುವೆ ಒಂದು ಬದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಸಂಭಂದಪಟ್ಟ ಅಧಿಕಾರಿಗಳು ತಿಂಗಳು ಕಳೆದರೂ ಕಿರು ಸೇತುವೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ತಕ್ಷಣ ಅಧಿಕಾರಿಗಳು ಕೆಲಸ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಭಾಂವಿಹಾಳ, ಯರಗೋಪ್ಪ, ಯರಗುದ್ದಿ, ಹಣ್ಣಿಕೇರಿ, ಜಕ್ಕನಾಯ್ಕನಕೊಪ್ಪ ಗ್ರಾಮಸ್ಥರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ನವ ನಿರ್ಮಾಪಡೆಯ ಮಂಜುನಾಥ ಉಳವಿ, ಅಜ್ಮಿರ ನದಾಫ, ಚನ್ನಪ್ಪ ಕಳ್ಳಸನ್ನವರ, ಈರಣ್ಣ ಬಡಿಗೇರ ಎಚ್ಚರಿಸಿದ್ದಾರೆ.