ಲೋಕದರ್ಶನ ವರದಿ
ಬೆಳಗಾವಿ\ಸಂಕೇಶ್ವರ : ಅಂತ್ಯಸಂಸ್ಕಾರಕ್ಕಾಗಿ ಜಾಗ ನೀಡದಿರುವ ಹಿನ್ನಲೆಯಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೋರ್ವನ ಶವವನ್ನು ಗ್ರಾಮ ಪಂಚಾಯತಿ ಮುಂದೆ ಇಟ್ಟು ದಲಿತ ಜನಾಂಗದ ನಾಗರಿಕರು ಪ್ರತಿಭಟನೆ ನಡೆಸಿರುವ ಘಟನೆ ರವಿವಾರ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಶಿವಲಿಂಗ ಶಿಂಗೆ(85) ಎನ್ನುವ ವೃದ್ಧನು ರವಿವಾರ ಮೃತ ಪಟ್ಟಿದ್ದು, ದಲಿತರು ಹಾಗೂ ಸವಣರ್ಿಯರ ಮಧ್ಯ ಜಾಗೆಯ ವಿವಾದ ಇದ್ದು, ಸವಣರ್ಿಯರು ದಲಿತರಿಗೆ ಅಂತ್ಯ ಸಂಸ್ಕಾರ ಮಾಡಲು ಜಾಗ ನೀಡದ ಕಾರಣ ಪ್ರತಿಭಟನೆ ನಡೆಸಲಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮ ಪಂಚಾಯಿತ ಎದುರು ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಅಂಬೇಡ್ಕರ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರಿಂದ ಈ ಪ್ರತಿಭಟನೆ ನಡೆಸಲಾಗಿದೆ.
ಸ್ಮಶಾನದ ಜಮೀನವು ತಮ್ಮ ಆಧೀನದಲ್ಲಿದೆ ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಸವಣರ್ಿಯರ ನಿರಾಕರಣೆಯ ಹಿನ್ನೆಲೆ ರವಿವಾರ ಬೆಳಿಗ್ಗೆ 6 ಘಂಟೆಯಿಂದ ಅಂತ್ಯಕ್ರಿಯೆಗೆ ಜಾಗ ಇಲ್ಲದ ಕಾರಣ ಮೃತ ವ್ಯಕ್ತಿಯ ಶವದ ಅಂತ್ಯಸಂಸ್ಕಾರ ಮಾಡದೇ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಗಿತ್ತು.
ವಿಷಯ ತಿಳಿದ