ಮೆಲ್ಬೋರ್ನ್,ಡಿ 26, ದಕ್ಷಿಣ
ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೇನ್ ಹಾಗೂ ಆಸ್ಟ್ರೇಲಿಯಾದ ನಥಾನ್ ಕೌಲ್ಟರ್ ನೈಲ್ ಅವರು ಪ್ರಸ್ತುತ
ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ನ ಮುಂದಿನ ಪಂದ್ಯಕ್ಕೆ 13 ಸದಸ್ಯರ ಮೆಲ್ಬೋರ್ನ್ ಸ್ಟಾರ್ಸ್ ತಂಡದಲ್ಲಿ
ಸ್ಥಾನ ಪಡೆದಿದ್ದಾರೆ.ಕಳೆದ ಆಗಸ್ಟ್ ತಿಂಗಳಲ್ಲಿ ಸ್ಟೇನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ
ಜೀವನಕ್ಕೆ ವಿದಾಯ ಘೋಷಿಸಿದ್ದರು. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನ ಚೊಚ್ಚಲ ಆವೃತ್ತಿಯ ಆರು
ಪಂದ್ಯಗಳಾಡಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ಕಳೆದ ಅಕ್ಟೋಬರ್ ನಲ್ಲಿ ಸಮ್ಮತಿ ನೀಡಿತ್ತು. ಫೆಬ್ರುವರಿಯಲ್ಲಿ
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಆಯ್ಕೆಯಾಗದೇ ಇದ್ದಲ್ಲಿ ಅವರ ಅವಧಿಯನ್ನು ವಿಸ್ತರಿಸುವ
ಸಾಧ್ಯತೆ ಇದೆ.ಬಲಗೈ ಹಿರಿಯ ವೇಗಿಯನ್ನು ಇತ್ತೇಚೆಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್
ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತ್ತು. ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್
ಖರೀದಿಸಿತ್ತು.ಮೆಲ್ಬೋರ್ನ್ ಸ್ಟಾರ್ಸ್ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಶುಕ್ರವಾರ ರಾತ್ರಿ
ಮೆಟ್ರಿಕನ್ ಕ್ರೀಡಾಂಗಣದಲ್ಲಿ ಸ್ಟ್ರೈಕರ್ ವಿರುದ್ಧ ಸೆಣಸಲಿದೆ.ಮೆಲ್ಬೋರ್ನ್ ಸ್ಟಾರ್ಸ್: ಗ್ಲೆನ್
ಮ್ಯಾಕ್ಸ್ ವೆಲ್ (ನಾಯಕ), ಹಿಲ್ಟನ್ ಕಾರ್ಟ್ ರೈಟ್, ಕೌಲ್ಟರ್ ನೈಲ್, ಬೆನ್ ಡಂಕ್, ಪೀಟರ್ ಹ್ಯಾಂಡ್ಸ್
ಕೊಂಬ್, ಕ್ಲಿಂಟ್ ಹಿಂಚ್ಲಿಫ್, ಸಂದೀಪ್ ಲ್ಯಾಮಿಚೆನ್, ನಿಕ್ ಲಾರ್ಕಿನ್, ನಿಕ್ ಮ್ಯಾಡಿಸನ್, ಡೇಲ್
ಸ್ಟೇನ್, ಮಾರ್ಕಸ್ ಸ್ಟೋಯಿನಿಸ್, ಡೇನಿಯಲ್ ವೊರೆಲ್, ಆ್ಯಡಂ ಝಂಪಾಯು