ಉತ್ತರ ಕರ್ನಾಟಕದ ದಕ್ಷಿಣ ಕಾಶಿ : ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗಂಗೀಭಾವಿ ಕ್ಷೇತ್ರ

ಸುಧಾಕರ ದೈವಜ್ಞ

ಶಿಗ್ಗಾವಿ 14:  ಪುರಾಣ ಪ್ರವಚನದಲ್ಲಿ ಪ್ರಸಿದ್ದವಾದ ಈ ಭಾಗದ ಪುಣ್ಯಸ್ಥಳ ಗಂಗೀಭಾವಿ ಸುಕ್ಷೇತ್ರ ಸಿದ್ಧಸಾದರು, ಋಷಿಮುನಿಗಳು, ಮಹಾಸ್ವಾಮಿಗಳು ತಪೋಸಕ್ತಿಯಿಂದ ಪಾವನ ಕ್ಷೇತ್ರವಾಗಿದೆ, ಇಲ್ಲಿ ರಾಮಲಿಂಗೇಶ್ವರ ಲಿಂಗವು ಭೂಗರ್ಭದಿಂದ ಉದ್ಬವಿಸಿದೆ ಗಂಗಾಮಾತೆಯು ಇಲ್ಲಿಗೆ ಕಾಶಿ ಕ್ಷೇತ್ರದಿಂದ ಆಗಮಿಸಿದ್ದಾಳೆ ಎಂಬ ಪ್ರತೀತಿಯು ಇದೆ.

ಕಾಶಿ-ರಾಮೇಶ್ವರದ ಎರಡೂ ಕ್ಷೇತ್ರದಲ್ಲಿ ದರ್ಶನದ ಫಲ ಏಕಕಾಲದಲ್ಲಿ ಈ ಸುಕ್ಷೇತ್ರದಲ್ಲಿ ಎಂಬುದು ಭಕ್ತರ ನಂಬಿಕೆ ಮುನಿಸರೋವರ, ರಂಭಾಸರೋವರ, ನಾಗಸರೋವರ, ಮತ್ತು ಅಗಸ್ತೈ ಸರೋವರ ಪುಣ್ಯ ಕ್ಷೇತ್ರದಲ್ಲಿ ವಿರಾಜಮಾನವಾಗಿ ಒಂದು ಕಡೆ ಸೇರಿ ತೀರ್ಥ ಸಾಗರ ಎಂದು ವಿಶಾಲ ಕೆರೆ ರೂಪ ಹೊಂದಿದೆ.ಇದು ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕಾಶಿಯೆಂದು ಪ್ರಸಿದ್ಧಿಗೊಂಡಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಂಗೀಭಾವಿ ಇತಿಹಾಸ ಪುರಾಣದಲ್ಲಿದೆ, ಮಹಾನ್ ತಪೋನಿಧಿ ಜಾಹ್ನವಿ ಋಷಿಗಳ ತಪೋಶಕ್ತಿಯಿಂದ ಕಾಶಿ ಕ್ಷೇತ್ರಕ್ಕೆ ಗಂಗಾ ಸ್ಥಾನಕ್ಕೆ ಹೋಗಿ ಪುನಃ ಬೆಳಗಾಗುವವರೆಗೆ ಬರುತ್ತಿದ್ದರಂತೆ ಪ್ರತ್ಯೆಕ್ಷಳಾಗಿ ನಾನೇ ನೀನು ಇದ್ದಲ್ಲಿಗೆ ಬರುತ್ತೇನೆ, ನಿನ್ನ ಆವಿಗೆ, ಬೆತ್ತ, ಬಿಟ್ಟು ಹೋಗು ಮುಂಜಾನೆ 4 ಗಂಟೆಗೆ ನಿನ್ನ ಆಶ್ರಮದ ಮುಂದೆ ಕೌಪಿನ ಬೆತ್ತ ಆವಿಗೆ ಸಮೇತ ಪ್ರತ್ಯಕ್ಷಕಳಾಗುತ್ತೇನೆ ಎಂದು ವರವನ್ನು ನೀಡಿದಳಂತೆ ಅದೇ ರೀತಿ ಋಷಿಗಳಾದ ಜಾಹ್ನವಿಗೆ ಒಲಿದ ಈಶ್ವರ ಕೂಡಾ ಬ್ರಹ್ಮೀ ಮುಹೋರ್ತದಲ್ಲಿ ಮೂತರ್ಿಲಿಂಗ ರೂಪಿಸಿತವಾಗಿ ಪ್ರತ್ಯೆಕ್ಷನಾಗಿದ್ದಾನೆ. ಅದಕ್ಕಾಗಿ ಸುಕ್ಷೇತ್ರದ ದರ್ಶನದಿಂದ ಕಾಶಿ, ರಾಮೇಶ್ವರ ಫಲ ಏಕಕಾಲಕ್ಕೆ ಪ್ರಸ್ತಾಪವಾಗುತ್ತದೆ ಎಂಬುವದು ಹಿರಿಯರು ಹೇಳುವ ಕಥೆ ಇದಾಗಿದೆ.

ಜಗದ್ಗುರು ಲಿಂಗೈಕ್ಯ ವೀರಗಂಗಾಧರ ಶಿವಾಚಾರ್ಯರು 1930 ರಲ್ಲಿ ಗಂಗಿಭಾವಿ ಸುಕ್ಷೇತ್ರದಲ್ಲಿ ಅಘೋರವಾದ ತಪಸ್ಸನ್ನು ಆಚರಿಸಿದರು, ಅಲ್ಲಿಂದಲೆ ಈ ಕ್ಷೇತ್ರದ ಮಹಿಮೆ ಜಗಜ್ಜಾಹಿರಾಯಿತು, ಕಾರಣ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವವು ಇದೇ ಉತ್ತರಾಯಣ ಪುಷ್ಯಮಾಸ, ಕೃಷ್ಣ ಪಕ್ಷ ಪಂಚಮಿ ತಿಥಿ ಜನೆವರಿ 15 ರಂದು ಬುಧವಾರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗುವದು.

15 ರ ಬುಧವಾರ ಮಕರ ಸಂಕ್ರಾಂತಿಯಂದು ಪ್ರಾಂತಕಾಲ ಶ್ರೀ ಉಮಾ ರಾಮಲಿಂಗೇಶ್ವರ ದೇವರಿಗೆ ಹಾಗೂ ಪಂಚಾರ್ಯರ ದೇವಸ್ಥಾನದ ಮೂರ್ತಿ ಗಳಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾರುದ್ರಾಭಿಷೇಕ ಜರುಗುವದು, ನಂತರ ಸಕಲ ವಾದ್ಯವೈಭವಗಳೋಂದಿಗೆ ಶ್ರೀ ರಾಮಿಂಗೇಶ್ವರ ಉತ್ಸವ ಮೂತರ್ಿಯ ಮೆರವಣಿಗೆಯು ಹೊಸೂರ ಗ್ರಾಮದ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗೆಬಾವಿವರೆಗೆ ಮೆರವಣಿಗೆಯು ಜರುಗುವದು. ಮಧ್ಯಾಹ್ನ 4 ಗಂಟೆಗೆ ರಾಮಲಿಂಗೇಶ್ವರ ರಥೋತ್ಸವವು ಜರುಗುವದು.

ಶ್ರೀ ಜಾಹ್ನವಿ ಋಷಿಗಳು, ಶ್ರೀ ಕ್ಷೇತ್ರ ಗಂಗೇಭಾವಿ ಹಾಗೂ ಬಾಳೆಹೊನ್ನೂರ ಜಗದ್ಗುರು ವೀರಸೋಮೇಶ್ವರ ಭಗತ್ಫಾದಂಗಳವರ ಹಾಗೂ ಲಿಂ ರಾಜಯೋಗೇಂದ್ರ ಮಹಾಸ್ವಾಮಿಗಳ ಕೃಪಾಶೀವರ್ಾದದಿಂದ ಬಂಕಾಪೂರ ಅರಳೆಲೆಹಿರೇಮಠದ ರೇವಣಶಿದ್ದೇಶ್ವರ ಮಹಾಸ್ವಾಮಿಗಳು, ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮನಿ ಶಿವಾಚಾರ್ಯ ಮಹಾಸ್ವಾಮಿಗಳು, ಗಂಗಿಭಾಂವಿ ಸುಕ್ಷೇತ್ರದ ಗೂಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಗಂಗೀಭಾಂವಿಯ ಗವಿಮಠದ ಗುರುಶಿದ್ದೇಶ್ವರ ಸ್ವಾಮಿಗಳು ಇವರ ದಿವ್ಯ ಸಾನಿದ್ಯದಲ್ಲಿ ಜರುಗುವದು. 

ಕಾರ್ಯಕ್ರಮದ ವಿಶೇಷ ಅವ್ಹಾನಿತರಾಗಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವರಾದ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಹುರಳಿಕೊಪ್ಪಿಯ ಶಶಿಧರ ಯಲಿಗಾರ, ಜಿ.ಪಂ.ತಾ.ಪಂ.ಗ್ರಾ.ಪಂ, ಹಾಗೂ ಎಪಿಎಂಸಿ ಸದಸ್ಯರುಗಳು ಆಗಮಿಸುವರು..

ತಾಲೂಕು ಹಾಗೂ ಜಿಲ್ಲೆಯ ಪಕ್ಕದ ಜಿಲ್ಲೆಗಳ ಭಕ್ತ ಸಮೂಹವು ಆಗಮಿಸಲಿದೆ ಎಂದು ಜಾತ್ರಾ ಸಮಿತಿಯು ಅಲ್ಲದೆ ಶ್ರೀ ಉಮಾ ರಾಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ ಪಧಾದಿಕಾರಿಗಳು ಪ್ರಕಟನೆಯಲ್ಲಿ ಕೋರಿದ್ದಾರೆ.