ಕಾಗವಾಡ 19: ಹೃದಯ ಕಾಯಿಲೆ ಮತ್ತು ಹಾಟರ್್ ಬ್ಲಾಕೇಜ್ ಇದ್ದರೆ, ನಿರಂತರವಾಗಿ 30 ದಿನಗಳಲ್ಲಿ 700 ಗ್ರ್ಯಾಮ್ ದೇಶಿ ಹಸುಗಳ ತುಪ್ಪವನ್ನು ದಿನನಿತ್ಯ ಸೇವಿಸಿದರೆ, ಹೃದಯ ಕಾಯಿಲೆ ವಾಸಿಯಾಗುವುದು ನಿಶ್ಚಿತ. ಇದು ಸಂಶೋಧನದಿಂದ ಖಚಿತ ಪಡಿಸಿದ್ದೇವೆ ಎಂದು ಕೃಷಿ ತಜ್ಞ ಗವ್ಯಷರ್ಿ ನಿತೇಶ್ ಓಝಾ ಹೇಳಿದರು.
ಬುಧವಾರ ಸಂಜೆ ಶಿರೋಳದ ದತ್ತ ಸಹಕಾರಿ ಸಕ್ಕರೆ ಕಾಖರ್ಾನೆ ಮತ್ತು ಉಗಾರ ಲಾಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಕಾಗವಾಡದ ಮಲ್ಲಿಕಾಜರ್ುನ ವಿದ್ಯಾಲಯದ ಸಭಾಭವನದಲ್ಲಿ "ಭೂಮಿ ಮತ್ತು ಮನುಷ್ಯನ ಆರೋಗ್ಯದಲ್ಲಿ ದೇಶಿ ಹಸುಗಳ ಮಹತ್ವ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕನರ್ಾಟಕದ ನಾರಾಯಣ ಆಸ್ಪತ್ರೆಯಲ್ಲಿ ಹಾಟರ್್ ಬ್ಯಾಕೇಜ್ ಇದ್ದಂತ ರೋಗಿಗೆ, ಹಸುವಿನ ತುಪ್ಪ ನಿರಂತರ 3 ತಿಂಗಳು ಸೇವಿಸಿದಾಗ, ಆತನ ಹೃದಯದ ಎಲ್ಲ ಬ್ಯಾಕೇಜ್ಸ್ ಮಾಯವಾಗಿದ್ದ ಬಗ್ಗೆ ನಾನು ಕಂಡಿದ್ದೇನೆ. ದೇಶಿ ಹಸುವಿನ ತುಪ್ಪ, ಹಾಲು, ಮುತ್ರ ನಿರಂತರವಾಗಿ ಸೇವಿಸಿದರೆ ಮತ್ತು ತಮ್ಮ ಮಕ್ಕಳಿಗೆ ನೀಡಿದರೆ, ಅವರ ಬುದ್ಧಿ ಮಟ್ಟದಲ್ಲಿ ಗಣನಿಯ ಏರಿಕೆಯಾಗುವುದು ಖಚಿತ ಎಂದು ನಿತೇಶ್ ಓಝಾ ಹೇಳಿದರು.
ರೈತರು ದಿನನಿತ್ಯ ಬೆಳೆಗಳಿಗೆ ಅವಶಕ್ಕತೆಕ್ಕಿಂತ ಹೆಚ್ಚಿನ ನೀರು ಬಳಸಿ, ರಾಸಾಯನಿಕ ಗೊಬ್ಬರಗಳನ್ನು ಹಾಕಿ, ಬೆಳೆಯುತ್ತಿರುವ ಎಲ್ಲ ಬೆಳೆಗಳು ವಿಷಭರಿತವಾಗುತ್ತಿವೆ. ಇದರ ಪರಿಣಾಮ ಗಂಭೀರವಾಗುತ್ತಿದ್ದು, 100 ಜನರಲ್ಲಿ, 30 ಜನರಿಗೆ ಕ್ಯಾನ್ಸರ್ ಕಾಯಿಲೆ ಕಂಡು ಬರುತ್ತಿದ್ದು. ಕುಡಲೆ ಎಲ್ಲರು ಎಚ್ಚರಿಕೆ ಆಗಿರಿ. ಬರುವ ದಿನಗಳಲ್ಲಿ ಇದರ ಪರಿಣಾಮ ಗಂಭೀರವಾಗಲಿದೆ ಎಂದು ಶಿರೋಳದ ದತ್ತ ಸಕ್ಕರೆ ಕಾಖರ್ಾನೆ ಆಧ್ಯಕ್ಷರು, ಕೃಷಿ ಪಂಡಿತ ಗಣಪತರಾವ್ ಪಾಟೀಲ ಹೇಳಿದರು.
ಈ ಮುಂದೆ ರೈತರು ದೇಶಿ ಹಸುಗಳ ಪಾಲನ-ಪೋಷನ ಮಾಡಿ, ಅವುಗಳ ಶಗಣಿ, ಮುತ್ರ ಬಳಿಸಿ, ಸಾವಯವ ಕೃಷಿ ಮಾಡಲೆಬೇಕು. ಮೊದಲು ನಾವು ಬದುಲಕಲು ಇದು ಅವಶಕ್ಕ ಎಂದು ಹೇಳಿ, ಈಗಾಗಲೇ 500 ಎಕರ ಕ್ಷೇತ್ರದಲ್ಲಿ ಈ ಪ್ರಯೋಗ ಮಾಡಿದ್ದೇವೆ ಎಂದು ಗಣಪತರಾವ್ ಪಾಟೀಲ ಹೇಳಿದರು.
ಓಂ ಶಾಂತಿ ಶಿರೋಳ ಶಾಖೆಯ ಬ್ರಹ್ಮಕುಮಾರಿ ಮನಿಷಾ ಸಹೋದರಿ ಇವರು ಯೋಗ ಬೇಸಾಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಸಮಾರಂಭದ ಉದ್ಘಾಟನೆ ಉಗಾರ ಸಕ್ಕರೆ ಕಾಖರ್ಾನೆಯ ಆಧ್ಯಕ್ಷರು ಉದ್ದೇಮಿ ರಾಜಾಭಾವು ಶಿರಗಾಂವಕರ್ ನೆರವೇರಿಸಿದರು.
ದತ್ತ ಸಕ್ಕರೆ ಕಾಖರ್ಾನೆ ಉಪಾಧ್ಯಕ್ಷ ಸಿದ್ದಗೌಡಾ ಪಾಟೀಲ, ಕೃಷಿ ಅಧಿಕಾರಿ ಶ್ರೀಶೈಲ್ ಹೇಗಣ್ಣಾ, ಸಕ್ಕರೆ ಕಾಖರ್ಾನೆ ಎಂ.ಡಿ-ಎಂ.ವಿ ಪಾಟೀಲ, ಉಗಾರ ಲಾಯನ್ಸ್ ಕ್ಲಬ್ ಆಧ್ಯಕ್ಷ ಸುಭಾಷ ಹೇಬ್ಬಾಳೆ, ಕಬ್ಬು ಬೆಳೆ ಅಭಿವೃದ್ಧಿ ಅಧಿಕಾರಿ ದೀಲಿಪ್ ಜಾಧವ್, ಜಿ.ಪಂ ಸದಸ್ಯ ಅಜೀತ ಚೌಗುಲೆ, ಸುಭಾಷ ಕಠಾರೆ, ಜೋತಗೌಡಾ ಪಾಟೀಲ, ಜಗದೀಶ ಕುಲಕಣರ್ಿ,ಉಗಾರ ಲಾಯನ್ಸ್ ಕ್ಲಬ್ ಕಾರ್ಯದಶರ್ಿ ಜ್ಯೋತಿಕುಮಾರ ಸಿದ್ದಗೌಡಾ ಪಾಟೀಲ, ದೀಪಚಂದ್ ಶಹಾ ಸೇರಿದಂತೆ ಉಗಾರ, ಶಿರಗುಪ್ಪಿ, ಐನಾಪುರ, ಶೇಡಬಾಳ, ಮಂಗಸೂಳಿ ಕೃಷಿ ತಜ್ಞರು, ರೈತರು ಪಾಲ್ಗೊಂಡಿದ್ದರು.