ಲೋಕದರ್ಶನ ವರದಿ
ಕಾಗವಾಡ 13: ಸ್ವಾತಂತ್ರ್ಯ ಪೂರ್ವದಲ್ಲಿ ಸನ್ 1924ರಲ್ಲಿ ಶಿಕ್ಷಣಪ್ರೇಮಿ ಜಿ.ಎಂ.ದೇಶಪಾಂಡೆ ಇವರ ಮುಂದಾಳತೆಯಲ್ಲಿ ಸ್ಥಾಪಿಸಿದ ಐನಾಪೂರದ ಕೆ.ಆರ್.ಇ.ಎಸ್. ಶಿಕ್ಷಣ ಸಂಸ್ಥೆಯ ಚೇರಮನ್ರಾಗಿ ಸಂಸ್ಥೆಯ ಸಂಚಾಲಕ ದಾದಾಗೌಡಾ ಪಾಟೀಲ ಇವರು ಅವಿರೋಧವಾಗಿ ಆಯ್ಕೆಗೊಂಡರು.
ಬುಧವಾರರಂದು ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಸಂಚಾಲಕರ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವೈಸ್-ಚೇರಮನ್ ಮೋಹನ ಕಾಚರ್ಿ ವಹಿಸಿದ್ದರು. ಶಿಕ್ಷಣಪ್ರೇಮಿಗಳು ಮತ್ತು ಸಂಸ್ಥೆಯ ಚೇರಮನ್ ಶಿವಗೌಡಾ ಪಾರಶೆಟ್ಟಿ ಇವರ ನಿಧನ ಬಳಿಕ ಖಾಲಿಯಾದ ಚೇರಮನ್ ಸ್ಥಾನಕ್ಕಾಗಿ ಸಂಚಾಲಕರ ಸಭೆ ಜರುಗಿತು. ಇದರಲ್ಲಿ ದಾದಾಗೌಡಾ ಪಾಟೀಲಇವರನ್ನು ಅವಿರೋಧವಾಗಿ ಆಯ್ಕೆಮಾಡಿದರು.
ಕನರ್ಾಟಕ ರೂರಲ್ ಎಜ್ಯೂಕೇಶನ ಸಂಸ್ಥೆಗೆ ಚೇರಮನ್ರಾಗಿ ದಾದಾಗೌಡಾ ಪಾಟೀಲ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದ್ದು, ಇವರು ಸಂಸ್ಥೆಯ ಪದಗ್ರಹಣ ಮಾಡಲು ನಾವು ಶುಭ ಹಾರೈಸುತ್ತೇವೆ.ಇಲ್ಲಿಗೆ ಅಂಗಶಾಲೆಗಳಲ್ಲಿ ಸುಮಾರು 2 ಸಾವಿರ ವಿದ್ಯಾಥರ್ಿಗಳು ಅಧ್ಯಯನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೆಂದು ಖ್ಯಾತಿ ಪಡೆದಿದೆ ಎಂದು ಹಿರಿಯ ಸಂಚಾಲಕ ಗೋಪಾಳ ಕಟ್ಟಿ ತಿಳಿಸಿದರು. ಸಭೆಯಲ್ಲಿ ಸಂಸ್ಥೆಯ ಕಾರ್ಯದಶರ್ಿ ವಿಶ್ವನಾಥ ಕಾಚರ್ಿ, ಖಜಾಂಚಿ ಉದಯ ನಿಡಗುಂದಿ ಉಪಸ್ಥಿತರಿದ್ದರು. ನೂತನ ಚೇರಮನ್ ದಾದಾಗೌಡಾ ಪಾಟೀಲ ಇವರನ್ನು ಸಂಸ್ಥೆಯ ಸಂಚಾಲಕರು, ಪ್ರಾಚಾರ್ಯ ಕೆ.ಜಿ.ಮಾಲಗಾಂವೆ, ಉಪಪ್ರಾಚಾರ್ಯ ಎ.ಎನ್.ಹುಲ್ಲೆನ್ನವರ, ಎಲ್ಲ ಸಿಬ್ಬಂದಿದವರು ಅಭಿನಂದಿಸಿದರು.