ಲೋಕದರ್ಶನವರದಿ
ಶಿಗ್ಗಾವಿ12: ಉದ್ಯೋಗದ ಹಕ್ಕು ಯುವಜನರ ಮೂಲಭೂತ ಹಕ್ಕು. ಉದ್ಯೋಗ ವಂಚಿತ ಯುವಜನರ ಜೀವನ ನರಕ ಸದೃಶವಾಗಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಸಿ ದೇಶದ ಬೃಹತ್ ಪ್ರಮಾಣದಲ್ಲಿರುವ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಉದ್ಯೋಗ ನೀಡಲು ಮುಂದಾಗಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಕಾರ್ಯದಶರ್ಿ ಬಸವರಾಜ ಪೂಜಾರ ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದ ಎದುರು ಡಿವೈಎಫ್ಐ ತಾಲೂಕಾ ಸಂಚಾಲನ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ನೆಮ್ಮದಿ, ಘನತೆಯ ಬದುಕು ಸಾಗಿಸಬಲ್ಲ ಉದ್ಯೋಗವನ್ನು ಪಡೆಯುವ ಯುವಜನರ ಕನಸು ಈಡೇರಲೇ ಇಲ್ಲ. ಉದ್ಯೋದ ಹಕ್ಕಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದರೂ 'ಸರ್ವರಿಗೂ ಉದ್ಯೋಗ' ಎಂಬ ಸಂವಿಧಾನದ ಆಶಯವನ್ನು ಜಾರಿಗೆ ತರಲು ನಮ್ಮನ್ನಾಳುವ ಸರಕಾರಗಳು ಗಂಭೀರ ಪ್ರಯತ್ನ ಮಾಡಲೇ ಇಲ್ಲ. ಇದು ದೇಶದ ಯುವಜನತೆಗೆ ಮಾಡಿದ ದ್ರೋಹವಾಗಿದೆ ಎಂದರು.
ನವ ಉದಾರೀಕರಣದ ನೀತಿಗಳು ಜಾರಿಗೆ ಬಂದ ನಂತರವಂತೂ ಇರುವ ಉದ್ಯೋಗಗಳನ್ನೂ ಕಸಿದು ಕೊಳ್ಳಲಾಗುತ್ತಿದೆ. ಅದರಲ್ಲೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರದ ಅವಧಿಯಲ್ಲಿ ಇರುವ ಉದ್ಯೋಗಗಳೂ ದೊಡ್ಡ ಪ್ರಮಾಣದಲ್ಲಿ ನಷ್ಟಗೊಂಡ ಯುವಜನರು ಬೀದಿಗೆ ಬೀಳುತ್ತಿದ್ದಾರೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕನರ್ಾಟಕ ರಾಜ್ಯ ಸರಕಾರದ ಅಧೀನದಲ್ಲಿ ಇರುವ ಇಲಾಖೆಗಳಲ್ಲಿ ಸರಿ ಸುಮಾರು ಎರಡು ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಕೇಂದ್ರ ಸರಕಾರ, ಸಾರ್ವಜನಿಕ ರಂಗದ ಉದ್ಯಮಗಳಲ್ಲಿಯೂ ಲಕ್ಷಾಂತರ ಉದ್ಯೋಗಗಳು ಖಾಲಿ ಬಿದ್ದಿವೆ.ಹೊಸ ಉದ್ಯೋಗಗಳನ್ನು ಸೃಷ್ಟಿಮಾಡಲಾಗದ ಸರಕಾರಗಳು ಖಾಲಿ ಬಿದ್ದಿರುವ ಉದ್ಯೋಗಗಳನ್ನೂ ಭತರ್ಿ ಮಾಡುತ್ತಿಲ್ಲ. ಬದಲಿಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿರುವ ರೈಲ್ವೆ, ಟೆಲಿಕಾಂ, ಬ್ಯಾಂಕಿಂಗ್ ಸಹಿತ ತನ್ನ ಅಧೀನದ ಇಲಾಖೆಗಳ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಮತ್ತೊಂದೆಡೆ ಸರಕಾರಗಳ ತಪ್ಪಾದ ಆಥರ್ಿಕ ನೀತಿಗಳಿಂದಾಗಿ ಖಾಸಗಿ ರಂಗದ ಉದ್ಯಮಗಳು ಲಕ್ಷಗಟ್ಟಲೆ ಸಂಖ್ಯೆಯ ಕಾಮರ್ಿಕರನ್ನು ಹೊರದಬ್ಬುತ್ತಿವೆ. ಗುತ್ತಿಗೆ, ಹೊರಗುತ್ತಿಗೆ ಪದ್ದತಿಯಲ್ಲಿ ಅರೆ ಉದ್ಯೋಗ, ಅರೆ ಸಂಬಳ ಪದ್ದತಿ ಮೂಲಕ ಕಾಮರ್ಿಕರ ಬದುಕನ್ನು ಅತಂತ್ರವಾಗುತ್ತಿರುವುದನ್ನು ಕೂಡಲೇ ನಿಲ್ಲಿಸಲು ಸರಕಾರಗಳು ಮುಂದಾಗಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಮುಕ್ತಾನಂದ ಹೀರೆಮನಿ ಮಾತನಾಡಿ, ಇದಲ್ಲದೆ ಖಾಸಗಿ ಉದ್ದಿಮೆಗಳು ತಮ್ಮ ಕೈಗಾರಿಕೆ, ಉದ್ಯಮಗಳಲ್ಲಿ ಕನ್ನಡಿಗರನ್ನು, ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳದೆ ಹೊರ ರಾಜ್ಯದ ಕಾಮರ್ಿಕರನ್ನು ತಂದು ತುಂಬಿಕೊಳ್ಳುತ್ತವೆ. ಬ್ಯಾಂಕ್, ರೈಲ್ವೆಯಂತಹ ಕ್ಷೇತ್ರದಲ್ಲಿ ಹಿಂದಿ ಭಾಷಿಕರೇ ತುಂಬಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರಕಾರದ ವೈಫಲ್ಯವನ್ನು ಖಂಡಿಸಿ, ಸ್ಥಳೀಯವಾಗಿ ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರನ್ನೇ ಆದ್ಯತೆಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕು, ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳನ್ನು ತಕ್ಷಣ ಭತರ್ಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್ಎಫ್ಐ ತಾಲೂಕಾಧ್ಯಕ್ಷ ಜೋತಿ ದೊಡ್ಮನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ನಷ್ಟವನ್ನು ತಡೆಗಟ್ಟಬೇಕು.
ಸ್ಥಳೀಯ ಸಂಪನ್ಮೂಲ ಬಳಸಿ ಉದ್ಯೋಗಗಳನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಉದ್ಯೋಗದಲ್ಲಿ ಸಿಂಹಪಾಲು ನೀಡಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಚಾಲನ ಸಮಿತಿ ಮುಖಂಡರಾದ ಪ್ರಕಾಶ ಹೊಟ್ಟೂರು, ಲಕ್ಷ್ಮಣ ಪವಾರ, ಮಂಜುನಾಥ ಕಾಳೆ, ವಿರೇಶ ಬಡಿಗೇರ, ರಮೇಶ ಹಳೆಕೋಟಿ, ಅಭಿಷೇಕ ರಜಪೂತ, ನಾಗರಾಜ ಮೆಣಸಿನಕಾಯಿ, ಗಣೇಶ ಕೌದಿ, ಫಕ್ಕಿರೇಶ ಹಿರೇಮಠ, ವಿನಾಯಕ ಗುಳೇದ, ಪುಟ್ಟರಾಜ ಸುರಗೊಂಡ, ಮದನ್ ಬಡಿಗೇರ ವಹಿಸಿದ್ದರು.