ನವದೆಹಲಿ, ಫೆಬ್ರವರಿ 15,ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪ ಮಾಡಿರುವ ಎಲ್ಲ ಅಂಶಗಳನ್ನು ಭಾರತ ತಿರಸ್ಕರಿಸಿದೆ, ದೇಶದ ಆಂತರಿಕ ವ್ಯವಹಾರಗಳಲ್ಲಿ ಮುಂದೆ ಎಂದೂ ಹಸ್ತಕ್ಷೇಪ ಮಾಡದಂತೆ ಖಡಕ್ ಎಚ್ಚರಿಕೆ ಸಂದೇಶ ರವಾನೆ ನೀಡಿದೆ. ಟರ್ಕಿಶ್ ಅಧ್ಯಕ್ಷರು ಮತ್ತು ಟರ್ಕಿ-ಪಾಕಿಸ್ತಾನ ಜಂಟಿ ಘೋಷಣೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರದ ಎಲ್ಲ ಉಲ್ಲೇಖಗಳನ್ನು ಭಾರತ ತಿರಸ್ಕರಿಸಿದೆ ಎಂದರು.
ಇದು ಭಾರತದ ಅವಿಭಾಜ್ಯ ಮತ್ತು ಪಾಕಿಸ್ತಾನದಿಂದ ಭಾರತ ಮತ್ತು ಪ್ರದೇಶಕ್ಕೆ ಹೊರಹೊಮ್ಮುತ್ತಿರುವ ಭಯೋತ್ಪಾದನೆಯಿಂದ ಉಂಟಾಗುವ ಗಂಭೀರ ಬೆದರಿಕೆ ಸೇರಿದಂತೆ ಭಾರತದ ಆಂತರಿಕ ವ್ಯವಹಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡದಂತೆ ಮತ್ತು ಸತ್ಯದ ಬಗ್ಗೆ ಸರಿಯಾದ ತಿಳುವಳಿಕೆ ಬೆಳೆಸಿಕೊಂಡು ಪ್ರತಿಕ್ರಿಯೆ ನೀಡುವಂತೆ ಟರ್ಕಿಶ್ ನಾಯಕರಿಗೆ ಖಡಕ್ ಸೂಚನೆ ನೀಡಿದೆ. ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ನಿಲುವನ್ನು ಅಂಕಾರಾ ಬೆಂಬಲಿಸಲಿದೆ ಎಂದು ಟರ್ಕಿ ಅಧ್ಯಕ್ಷ ಎರ್ಡೊಗನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.