ಮುಂಬೈ ಫೆ,19 ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯ, ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಉದ್ದವಠಾಕ್ರೆ ಅಭಯ ನೀಡಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್ಪಿಆರ್) ಅಜರ್ಿ ಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ. ಸಿಂಧೂದುರ್ಗದಲ್ಲಿ ಮಾತನಾಡಿದ ಅವರು, ಸಿಎಎ, ಎನ್ಆಸರ್ಿ ಎರಡು ಪ್ರತ್ಯೇಕ ವಿಚಾರಗಳು. ಎನ್ಪಿಆರ್ ಮೂರನೇ ವಿಚಾರ. ಎನ್ಪಿಆರ್ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ.
ಆದರೆ ಎನ್ಆಸರ್ಿಗೆ ಮಾತ್ರ ಅವಕಾಶವಿ ಕೊಡುವುದಿಲ್ಲ ಆದರಿಂದ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲರಿಗೂ ತೊಂದರೆಯಾಗಲಿದೆ ಎಂದರು. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಹಿಂದಿನ ದೇವೇಂದ್ರ ಫಡ್ನವಿಸ್ ಸರಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂದು ಶರದ್ ಪವಾರ್ ಆರೋಪಿಸಿದ್ದಾರೆ.