ಆಶಾ‌ ಕಾರ್ಯಕರ್ತೆ ನಿವಾಸಕ್ಕೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಭೇಟಿ: ದೂರು ಸ್ವೀಕರಿಸದ‌ ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು,   ಏ‌. 2,ಬೆಂಗಳೂರಿನ ಹೆಗಡೆ ನಗರ ಸಮೀಪ ಬರುವ ಸಾರಾಯಿಪಾಳ್ಯದ ಸಾದಿಕ್ ನಗರದಲ್ಲಿ  ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ‌ ಗುಂಪೊಂದು ದಾಳಿ ನಡೆಸಿದ ಎನ್ನಲಾದ‌ ಘಟನಾ  ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಹೆಗಡೆ ನಗರದ ಕೃಷ್ಣ ವೇಣಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದರು.ಡಿಸಿಪಿ ಜತೆ ಮಾತನಾಡಿದ ಅಶ್ವತ್ಥ ನಾರಾಯಣ್, ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚನೆ‌ ನೀಡಿದರು. ಬಳಿಕ  ಮಾತನಾಡಿದ ಅವರು, ಯಾರೇ‌ ಹಲ್ಲೆ ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ   ಕ್ರಮಕೈಗೊಳ್ಳಬೇಕು. ಇಲ್ಲಿ ಜಾತಿ ಧರ್ಮ ಮುಖ್ಯವಲ್ಲ. ಅಗತ್ಯ ಭದ್ರತೆ  ನೀಡುತ್ತೇವೆ. ಹೆದರುವುದು ಬೇಡ ಎಂದು ಅಭಯ ನೀಡಿದರು.