ಬಾಗಲಕೋಟೆ25: ಮುಧೋಳ ತಾಲೂಕಿನ ಮಾಲಾಪೂರ ಗ್ರಾಮದಿಂದ ಮಂಟೂರ ಮಾರ್ಗವಾಗಿ ಜೀರಗಾಳ ಗ್ರಾಮದವರೆಗೆ ಒಟ್ಟು 10.20 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿರುವ ಬೈಪಾಸ್ ರಸ್ತೆ ಕಾಮಗಾರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಶನಿವಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಜೀರಗಾಳ ಗ್ರಾಮದ ಹತ್ತಿರ ಹಮ್ಮಿಕೊಂಡ ಬೈಪಾಸ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬೈಪಾಸ್ ರಸ್ತೆ ನಿಮರ್ಾಣಕ್ಕೆ ಒಟ್ಟು 110.17 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕಾಗಿ 25.50 ಕೋಟಿ ರೂ.ಗಳ ಪರಿಹಾರ ನೀಡಲಾಗುತ್ತಿದೆ ಎಂದರು. ಬೈಪಾಸ್ ರಸ್ತೆಗೆ ಭೂಸ್ವಾಧೀನದ ಪರಿಹಾರ ಸೇರಿ ಒಟ್ಟು 71 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದು ಕಾರಜೋಳ ತಿಳಿಸಿದರು.
ಕಳೆದ 2013 ರಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ ಬದಲಾದ ಭೂಸ್ವಾಧೀನ ಕಾಯ್ದೆಯಿಂದ ಕಾನೂನು ಅಡತಡೆ ಉಂಟಾಗಿ ವಿಳಂಬಕ್ಕೆ ಕಾರಣವಾಯಿತು. ಅಂದಿನ ಭೂಸ್ವಾಧೀನದ ವೆಚ್ಚ 3.65 ಕೋಟಿ ಇದ್ದರೆ ಅದೂ ಈಗ 25 ಕೋಟಿ ರೂ.ಗಳಿಗೆ ಆಗಿದೆ ಎಂದರು. ಲೋಕೋಪಯೋಗಿ ಇಲಾಖೆ ಸಚಿವನಾದ ಮೇಲೆ ಜಿಲ್ಲೆಯಲ್ಲಿ 515 ಕಿ.ಮೀ ರಸ್ತೆ ಅಭಿವೃದ್ದಿ ಹಾಗೂ ನಿಮರ್ಾಣಕ್ಕಾಗಿ ಒಟ್ಟು 456 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಪ್ರವಾಹದಿಂದ ಜಿಲ್ಲೆಯಲ್ಲಿ 9 ಬ್ರಿಜ್ಡ್ಗಳ ದುರಸ್ತಿ ಕೆಲಸ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ರತ್ನಾ ತಳೇವಾಡ, ಧಾರವಾಡದ ಸಂಪರ್ಕ ಮತ್ತು ಕಟ್ಟಡ (ಉತ್ತರ)ದ ಮುಖ್ಯ ಅಭಿಯಂತರ ಕೆ.ರಾಜೇಶ, ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕರ ಅಭಿಯಂತರರಾದ ಬಿ.ವಾಯ್.ಪವಾರ, ಶಿವಾನಂದ ನಾಯಕ, ಲೋಕೋಪಯೋಗಿ ಇಲಾಖೆಯ ಪ್ರಶಾಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.