ಕನಮಡಿಯಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ

ವಿಜಯಪುರ, 4 : ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಲು ವಿಜಯಪುರ ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಹಾಗೂ ಎ.ಪಿ.ಎಮ್.ಸಿ. ಅಧ್ಯಕ್ಷ ಸುರೇಶಗೌಡ ಬಿರಾದಾರ ಹೇಳಿದರು.

    ಅವರು ಕನಮಡಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ ನೂತನ 40 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು. 

ಬ್ಯಾಂಕು ಸ್ಥಾಪನೆಗೊಂಡು ಈಗ 100 ವರ್ಷಗಳು ಸಂದಿದ್ದು, ಶತನಮಾನೋತ್ಸವದ ಸಂಬ್ರಮದಲ್ಲಿದೆ.  ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಬ್ಯಾಂಕಿನ ಶಾಖೆಗಳನ್ನು ಆಧುನಿಕರಣಗೊಳಿಸಿ ಗ್ರಾಹಕರಿಗೆ ಉತ್ತಮ ತ್ವರಿತ ಸೇವೆ ನೀಡಲು ಬ್ಯಾಂಕ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಬ್ಯಾಂಕಿನ 40ನೇ ಶಾಖೆಯನ್ನು ಕನಮಡಿಯಲ್ಲಿ ಪ್ರಾರಂಭಿಸಲಾಗಿದೆ ಎಂದರು.

 ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ಯಾಂಕಿನ ನಿದರ್ೇಶಕರಾದ ಗುರುಶಾಂತ ನಿಡೋಣಿ, ಸೋಮನಗೌಡ ಬಿರಾದಾರ, ಸುಭಾಸಗೌಡ ಪಾಟೀಲ, ಸಂಜೀವಗೌಡ ಪಾಟೀಲ, ಅಣ್ಣಪ್ಪ ಪೂಜಾರಿ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಬಿ. ರಾಜಣ್ಣ ಮತ್ತು ಉಪಪ್ರಧಾನ ವ್ಯವಸ್ಥಾಪಕರಾದ ಸತೀಶ ಡಿ. ಪಾಟೀಲ ಮತ್ತು ಟಿ.ವಾಯ್. ಬರಕಡೆ ಭಾಗವಹಿಸಿದ್ದರು. ಶಾಖಾ ವ್ಯವಸ್ಥಾಪಕ ಎಸ್.ಜಿ. ಮಾಳಿ ಸ್ವಾಗತಿಸಿದರು. ತಿಕೋಟಾ ಶಾಖೆಯ ಕ್ಷೇತ್ರಾಧಿಕಾರಿ ಎಸ್.ಎ. ಪಾಟೀಲ ವಂದಿಸಿದರು.