ಬಾಗಲಕೋಟೆ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ನವನಗರದ ಸೆಕ್ಟರ ನಂ.46ರ ಆಶ್ರಯ ಕಾಲೋನಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕುದುರೆ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.
ಚಾಲನೆ ನೀಡಿದ ಹಿನ್ನಲೆಯಲ್ಲಿಯೇ ಕಾಯರ್ಾಚರಣೆ ಕೈಗೊಂಡ ತಮ್ಮ ನೇತೃತ್ವದ ತಂಡ ರಸುಲ್ಲಾ ಚೌದರಿ ಎಂಬ ಬಾಲಕಿಯ ಮನೆಗೆ ಭೇಟಿ ನೀಡಿ ಅವಳ ತಂದೆ-ತಾಯಿಯ ವನವೊಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 684 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಆ ಮಕ್ಕಳೆಲ್ಲ ಶಿಕ್ಷಣದಿಂದ ವಂಚಿತರಾಗಬಾದು ಎಂಬ ಉದ್ದೇಶದಿಂದ ಈ ಕಾಯರ್ಾಚರಣೆ ಕೈಗೊಳ್ಳಲಾಗಿದೆ ಎಂದರು.
ಸರಕಾರದ ಗುರಿ 14 ವರ್ಷದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದಾಗಿದ್ದು, ಇದಕ್ಕಾಗಿ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಅನ್ವಯ ಪಾಲಕರು ತಮ್ಮ ಮಗುವಿಗೆ 14 ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿಯೊಂದು ಮಗುವನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ ಒಂದು ಮಗುವನ್ನಾದರೂ ಸಹ ಮರಳಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ತಾವು ಸಹ ತಿಂಗಳಿಗೆ ಒಂದು ಮಗುವನ್ನು ಸೇರಿಸುವ ಕಾರ್ಯ ಮಾಡುತ್ತಿದ್ದು, ಶುಕ್ರವಾರ ಎರಡು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ ಎಂದರು. ಅಲ್ಲದೇ ಗುರುವಾರ ಜಮಖಂಡಿ ನಗರದಲ್ಲಿ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ತಂಡ 3 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ ಎಂದರು.
ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ನೇತೃತ್ವದ ತಂಡವು ಸಹ ಮರಳಿ ಶಾಲೆಗೆ ಸೇರಿಸುವ ಕಾರ್ಯವನ್ನು ಚುರುಕಾಗಿ ಮಾಡುತ್ತಿದ್ದು, ಈ ವರೆಗೆ 8 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ.
ಅಲ್ಲದೇ ಸೀಮಿಕೇರಿ ಹತ್ತಿರವಿರುವ ವೀರಾಪೂರದಲ್ಲಿ ಜಿಲ್ಲಾಡಳಿತ ಕಣ್ಣು ತಪ್ಪಿಸಿ ಬಾಲ್ಯವಿವಾಹವಾಗಿದ್ದು, ಮದುವೆಯಾದ ಬಾಲಕಿಯ ಮನೆಗೆ ಸಿಇಓ ಭೇಟಿ ನೀಡಿ ಮನೆಯ ಪಾಲಕರನ್ನು ಮನವೊಲಿಸಿ ಪುನಃ 8ನೇ ತರಗತಿಗೆ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ದುರಗವ್ವ ಯಲ್ಲಪ್ಪ ಭೋವಿ ಎಂಬ ಬಾಲಕಿ ವೀರಾಪೂರ ಆರ್.ಸಿ ಕೇಂದ್ರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿತು ಶಿಕ್ಷಣ ಮುಂದುವರಿಸದೇ ಅವರ ಮನೆಯವರು ಮದುವೆ ಮಾಡಿದ್ದಾರೆ. ಈಗ ಆ ಬಾಲಕಿ ಗಭರ್ಾವಸ್ಥೆಯಲ್ಲಿದ್ದ ಬಗ್ಗೆ ಭೇಟಿ ಸಮಯದಲ್ಲಿ ತಿಳಿದು ಬಂದಿತು. ಇದನ್ನು ಅರಿತ ಸಿಇಓ ಅವರು ಗಭರ್ಾವಸ್ಥೆಯಲ್ಲಿರುವ ಬಾಲಕಿ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹತ್ತಿರದ ಸೀಮಿಕೇರಿ ಸರಕಾರಿ ಪ್ರೌಢಶಾಲೆಗೆ 8ನೇ ತರಗತಿಗೆ ದಾಖಲು ಮಾಡಿಸಿದ್ದಾರೆ ಎಂದರು.
ಕಾಯರ್ಾಚರಣೆಯಲ್ಲಿ ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಎಚ್.ಗೋನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಗುಡೂರ, ಜಿಲ್ಲಾ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಶಿಕ್ಷಣಾಧಿಕಾರಿ ಎಂ.ಐ.ಬಾಳಿಕಾಯಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಪಿ.ಜಿ.ಖಾಡೆ, ಮುಖ್ಯಗುರುಗಳಾದ ಜಿ.ಬಿ.ಚಲವಾದಿ, ಎ.ಎಸ್.ಪವಾರ ಸೇರಿದಂತೆ ಇತರರು ಇದ್ದರು.