ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಡಿಸಿ ಸೂಚನೆ

ಬಾಗಲಕೋಟೆ೩೩: ಆಡಳಿತಕ್ಕೆ ಸಂಬಂಧಿಸಿದಂತೆ  ಪತ್ರ ವ್ಯವಹಾರ, ಕಡತಗಳ ನಿರ್ವಹಣೆ, ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ ನಡವಳಿಕೆಗಳೆಲ್ಲವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಇರತಕ್ಕದ್ದೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದ ಅವರು ನಮ್ಮ ನಾಡ-ನುಡಿ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪರ ಚಿಂತನೆಗಳನ್ನು ಬೆಳೆಸಬೇಕು. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಂತ್ರಾಂಶ ಅಳವಡಿಕೆ, ಅಂತಜರ್ಾಲ ತಾಣ, ಸಾಮಾಜಿಕ ಜಾಲತಾಣ, ಯೋಜನೆಗಳ ಪ್ರಚಾರ, ಜಾಹೀರಾತು ಇತ್ಯಾದಿಗಳು ಕಚೇರಿ ವ್ಯವಹಾರದಲ್ಲಿ ಕಡ್ಡಾಯವಾಗಿ ಕನ್ನಡ ಯುನಿಕೋಡ್ ತಂತ್ರಾಂಶವನ್ನೇ ಬಳಸತಕ್ಕದ್ದೆಂದು ತಿಳಿಸಿದರು.

ಎಲ್ಲ ಕಾಗದಗಳ ತಲೆಬರಹಗಳು, ವಿಸಿಟಿಂಗ್ ಕಾರ್ಡಗಳು, ಮೊಹರುಗಳು, ಲೆಕ್ಕಪತ್ರಗಳು ಮತ್ತು ಎಲ್ಲ ವಹಿಗಳು, ಇ-ಟೆಂಡರ್, ದರಪಟ್ಟಿಗಳೆಲ್ಲವೂ ಸಹ ಕನ್ನಡದಲ್ಲಿ ಇರತಕ್ಕದ್ದು. ಅಲ್ಲದೇ ಇಲಾಖೆಗಳ ಅಂತಜರ್ಾಲ ತಾಣದ ಪ್ರಧಾನ ಪುಟ ಹಾಗೂ ಒಳಪುಟಗಳ ಮಾಹಿತಿಗಳು ಕನ್ನಡದಲ್ಲಿಯೇ ಇರತಕ್ಕದ್ದು. ಈ ಕುರಿತು ಎನ್.ಐ.ಸಿ ಅಧಿಕಾರಿ ಗಿರಿಯಾಚಾರ ಅವರಿಗೆ ಕ್ರಮಕೈಗೊಳ್ಳಲು ಸೂಚಿಸಿದರು.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿ, ಮುಗ್ಗಟ್ಟುಗಳು, ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಶೇ.60 ರಷ್ಟು ಭಾಗವನ್ನು ಕನ್ನಡ ಬಳಸುವಂತೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಮಾಸಿಕ ಕೆ.ಡಿ.ಪಿ ಸಭೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. 

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಮಹಾಂತೇಶ ಹಟ್ಟಿ ಮಾತನಾಡಿ ಸಕ್ಕರೆ, ಸಿಮೆಂಟ್ ಪ್ಯಾಕ್ಟರಿಗಳಲ್ಲಿ ಹೊರಾಜ್ಯದವರೆ ಹೆಚ್ಚಾಗಿದ್ದಾರೆ. ಸ್ಥಳೀಯರಿಗೆ ಅವಕಾಶ ಕಲ್ಪಿಸಲು ಕ್ರಮವಾಗಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಕೈಗಾರಿಕೆಗಳಿಗೆ ಪತ್ರಬರೆಯುವಂತೆ ಜಿಲ್ಲಾಧಿಕಾರಿಗಳಲ್ಲಿ ಕೋರಿದರು. ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿಗಳ ಮುಖ್ಯ ರಸ್ತೆಗಳಲ್ಲಿ ನಾಮಫಲಕಗಳು, ಹೆದ್ದಾರಿ ಫಲಕಗಳು, ಮಾರ್ಗಸೂಚಿಗಳು ಹಾಗೂ ವಿಷಯ ಸೂಚಿಗಳು ಕನ್ನಡದಲ್ಲಿ ಇರುವಂತೆ ಆಗಬೇಕು. ಅಲ್ಲದೇ ಸೀಮಿಕೇರಿ ಹತ್ತಿರ ಬಿಟಿಡಿಎ ಫಲಕಗಳಿಲ್ಲದಿರುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ಕುರಿತು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪ್ರೋಬೇಷನರಿ ಐ.ಎಸ್.ಎಸ್ ಅಧಿಕಾರಿ ಗರಿಮಾ ಪಂವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಎಸ್.ಬಿ.ಕಳ್ಳಿ, ಎಚ್.ಬಿ.ಚೌದರಿ, ಪವಿತ್ರಾ ಜಕ್ಕನ್ನವರ ಉಪಸ್ಥಿತರಿದ್ದರು.