ಬಾಗಲಕೋಟೆ: ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗೆ 780 ಅಡುಗೆ ಪಾತ್ರೆಗಳ ಕಿಟ್ಗಳನ್ನು ನೀಡಿ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ನೆರವಾದ ಮೈಸೂರಿನ ದಿ ಕಾಸ್ಮೋಪಾಲಿಟನ್ ಕ್ಲಬ್, ಒಚಿಟಿ ಕೊಪ್ಪಲ್ ಕ್ಲಬ್, ವಿಜಯನಗರ ಸ್ಪೋಟ್ರ್ಸ ಕ್ಲಬ್ ಹಾಗೂ ದಿ ಹೆರಿಟೇಜ್ ಕ್ಲಬ್ ಸಂಸ್ಥೆಗಳಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ಅವರು ಅಭಿನಂಧನಾ ಪತ್ರವನ್ನು ನೀಡಿದ್ದಾರೆ.