ಸ್ವಚ್ಛ ಹಾವೇರಿ ಅಭಿವೃದ್ಧಿ ಪರ ಹಾವೇರಿ ಜಿಲ್ಲೆ ನಿರ್ಮಾಣಕ್ಕೆ ಡಿಸಿ ಕರೆ

ಹಾವೇರಿ: ಸ್ವಚ್ಛ ಅಭಿವೃದ್ಧಿ ಪರ ಕನ್ನಡ ನಾಡು ನಿಮರ್ಾಣದ ಕನಸು ಕಂಡ ಮಹನೀಯರ ಕನಸುಗಳನ್ನು ನನಸಾಗಿಸಲು ಸ್ವಚ್ಛ ಹಾವೇರಿ ಹಾಗೂ ಅಭಿವೃದ್ಧಿಪರ ಹಾವೇರಿ ಜಿಲ್ಲೆ ನಿಮರ್ಾಣಕ್ಕೆ  ನಾವೆಲ್ಲ ಪಣತೋಡೋಣ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕರೆ ನೀಡಿದರು.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಸಾರ್ವಜನಿಕರನ್ನುದ್ದೇಶಿಸಿ ರಾಜ್ಯೋತ್ಸವ ಸಂದೇಶ ವಾಚಿಸಿದರು.

ನೂತನ ವೈದ್ಯಕೀಯ ಕಾಲೇಜು ಸ್ಥಾಪಿಸುವ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರ ನೂತನ ವೈದ್ಯಕೀಯ ಕಾಲೇಜು ಆರಂಭಕ್ಕೆ ಮಂಜೂರಾತಿ ನೀಡಿದೆ. 325 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್ ಆರಂಭಿಸಲು ಮಂಜೂರಾತಿ ದೊರೆತಿದೆ.  ಕೇಂದ್ರ ಸಕರ್ಾರದ ಶೇ.60ರ ಪಾಲು ಹಾಗೂ ರಾಜ್ಯ ಸಕರ್ಾರದ ಶೇ.40ರ ಅನುದಾನ ಒದಗಿಸಲು ಒಪ್ಪಿವೆ. ಕೇಂದ್ರ ಸಕರ್ಾರ 195 ಕೋಟಿ ರೂ. ಹಾಗೂ ರಾಜ್ಯ ಸಕರ್ಾರ 135 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ.   ವೈದ್ಯಕೀಯ ಕಾಲೇಜು ಆರಂಭದ ಸಿದ್ಧತೆಗಾಗಿ ಈಗಾಗಲೇ ಉಸ್ತುವಾರಿ ಅಧಿಕಾರಿಯನ್ನು ನೇಮಕ ಮಾಡಿದೆ. ಶೀಘ್ರದಲ್ಲೇ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆಗಳು ನಡೆಯುತ್ತಿವೆ.

 ಜಿಲ್ಲೆಯ ರೈತರ ಬಹುದಿನದ ಕನಸಾದ ಆಣೂರು ಮತ್ತು ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ 112 ಕೋಟಿ ರೂ. ವೆಚ್ಚದ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದೆ.  ಬುಡಪನಹಳ್ಳಿ ಹಾಗೂ ಸುತ್ತಲಿನ 17 ಕೆರೆಗಳನ್ನು ತುಂಬಿಸಲು 157 ಕೋಟಿ ರೂ.ಗಳ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದೆ. ಹಾನಗಲ್ ತಾಲೂಕಿನ  ಬಾಳಂಬೀಡ ಮತ್ತು ಸುತ್ತಮುತ್ತಲಿನ 162 ಕೆರೆಗಳ ತುಂಬಿಸುವ 386.55 ಕೋಟಿ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದೆ. ಹಿರೇಕಾಂಶಿ ಮತ್ತು ಸುತ್ತಮುತ್ತಲಿನ 162 ಕೆರೆಗಳನ್ನು ತುಂಬಿಸಲು 117.55 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ದೊರೆತಿದೆ. 

       ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ 1,33,532 ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಈ 1,19,090 ಫಲಾನುಭವಿಗಳಿಗೆ ಎರಡು ಕಂತಿನ ಹಣ ಹಾಗೂ 9,727 ಫಲಾನುಭವಿಗಳಿಗೆ  ಮೂರು ಕಂತಿನ ಹಣ ಪಾವತಿಯಾಗಿದೆ. ಈ ವರ್ಷ 544.34 ರೂ. ಲಕ್ಷ ಸಹಾಯಧನದಲ್ಲಿ 93,893 ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಪರಿಶಿಷ್ಟ ಜನಾಂಗದವರು ಹೆಚ್ಚಾಗಿ ವಾಸಿಸುವ ಜಿಲ್ಲೆಯ 20 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ತಲಾ 40 ಲಕ್ಷ ರೂ. ವೆಚ್ಚದಲ್ಲಿ  ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. 21,674 ರೈತರ ಒಂದು ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಬಡವರ ಬಂಧು ಯೋಜನೆಯಡಿ 374 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಿಸಲಾಗಿದೆ.

           ಕನ್ನಡ ನಾಡಿನ ನುಡಿಯ ಸೊಬಗನ್ನು ಶ್ರೀಮಂತಗೊಳಿಸಿದ ಶಂಕರಾಚಾರ್ಯ, ರಾಮಾನುಜಾಚಾರ್ಯ, ವಿದ್ಯಾರಣ್ಯ, ಬಸವಣ್ಣ, ಕನಕದಾಸರು, ಪುರಂದರ ದಾಸರು, ಪಂಪ, ರನ್ನ, ಜನ್ನ, ಪೊನ್ನ, ಹರಿಹರ, ಕುಮಾರವ್ಯಾಸ, ಕುವೆಂಪು ಅವರಂತಹ ಮಹಾನ್ ಕವಿಗಳು, ಸಾಹಿತಿಗಳು, ದಾರ್ಶನಿಕರು ನಮ್ಮ ನಾಡು-ನುಡಿಯ ಮೌಲ್ಯಗಳನ್ನು ಮಾನವೀಯಗೊಳಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಹಾವೇರಿ ಜಿಲ್ಲೆಯ  ವಿ.ಕೃ.ಗೋಕಾಕ  ಅವರಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಗರಿಮೆ. ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠರಾದ ಕನಕದಾಸರು, ವಚನಕಾರರಾದ ಅಂಬಿಗರ ಚೌಡಯ್ಯ, ತತ್ವಪದಕಾರರಾದ ಶಿಶುನಾಳ ಷರೀಫರು, ಗಾನಯೋಗಿ ಪುಟ್ಟರಾಜ ಗವಾಯಿಗಳು, ಕಾದಂಬರಿ ಪಿತಾಮಹ ಗಳಗನಾಥರು, ಆಧುನಿಕ ವಚನಕಾರರಾದ ಮಹಾದೇವ ಬಣಕಾರ, ನಾಟಕಕಾರರಾದ ಶಾಂತಕವಿ, ಅಂತರಾಷ್ಟ್ರೀಯ ಖ್ಯಾತ ಲೇಖಕರಾದ ಹಿರೇಮಲ್ಲೂರ ಈಶ್ವರ, ಪ್ರಗತಿಶೀಲ ಸಾಹಿತಿಗಳಾದ ಸುರಂ, ಯಕ್ಕುಂಡಿ, ಲಲಿತ ಪ್ರಬಂಧಕರಾದ ರಾಕು, ಕನ್ನಡ ಕಟ್ಟಾಳು ಪಾಟೀಲ ಪುಟ್ಟಪ್ಪ, ಖ್ಯಾತ ಕವಿ ಚಂದ್ರಶೇಖರ ಪಾಟೀಲರ ಕೊಡುಗೆ ಅನನ್ಯವಾಗಿದೆ. ಇಂದಿಗೂ ನೂರಾರು ಪ್ರತಿಭಾನ್ವಿತ ಕವಿಗಳು, ಸಾಹಿತಿಗಳು, ನಾಟಕಕಾರರು, ವಿಮರ್ಶಕರು, ಚಿಂತಕರು ಕನ್ನಡ ಕಟ್ಟುವ ಕೆಲಸದಲ್ಲಿ ಈ ನೆಲದ ಸತ್ವವನ್ನು ಹೆಚ್ಚಿಸಿದ್ದಾರೆ ಎಂದು ನೆನಪಿಸಿಕೊಂಡರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾವೇರಿಯ ಪೌರಕಾಮರ್ಿರಾದ ದುರ್ಗವ್ವ ಎತ್ತಿನಹಳ್ಳಿ, ಸಾಹಿತ್ಯ ಕ್ಷೇತ್ರದಿಂದ  ಶಿಗ್ಗಾಂವ ತಾಲೂಕು ರಂಜಾನ್ ಕಿಲ್ಲೇದಾರ,  ಮಡ್ಲೇರಿಯ ಭಾಗ್ಯವತಿ ಕೋಡಬಾಳ, ಬ್ಯಾಡಗಿಯ ಜಾನಪದ ಕ್ಷೇತ್ರದಿಂದ ವೀರಭದ್ರಗೌಡ ಶೇಖರಗೌಡ ಹೊಮ್ಮರಡಿ, ರಂಗಭೂಮಿಯಿಂದ  ಶೀಗಿಹಳ್ಳಿಯ ತಿಪ್ಪಣ್ಣ ಗುರುನಂಜಪ್ಪ ಕೋರಿ ಹಾಗೂ  ದೇವಗಿರಿಯ ನೀಲಪ್ಪ ಪುಟ್ಟಪ್ಪ ಕೋಣನತಂಬಗಿ, ಲಲಿತ ಕಲೆಯ ಕ್ಷೇತ್ರದಿಂದ ನೇಸ್ವಿಯ ಪಿ.ಕೆ.ಕಟಾರಿ ಹಾಗೂ ಹಂಸಭಾವಿಯ ಪಿ.ಕೆ.ಕಟಾರಿ, ಸಮಾಜ ಸೇವೆ ಕ್ಷೇತ್ರದಿಂದ ಹಾನಗಲ್ ತಾಲೂಕು ಗುರಣ್ಣ ಸೀಮಿಕೇರಿ, ಕೃಷಿ ಕ್ಷೇತ್ರದಲ್ಲಿ  ಶಿರಗೋಡ ಗ್ರಾಮದ ಮಾಲತೇಶ ಪರಪ್ಪನವರ, ವೈದ್ಯಕೀಯ ಕ್ಷೇತ್ರದಿಂದ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಎಚ್., ಸಂಕೀರ್ಣ(ಯೋಗ) ಕ್ಷೇತ್ರದಿಂದ ಹಾನಗಲ್ನ ರಾಜು ಶಂಕ್ರಪ್ಪ ಪೇಟಕರ ಹಾಗೂ ನೃತ್ಯ ಕ್ಷೇತ್ರದಿಂದ ಹಾವೇರಿ ತಾಲೂಕಿನ ಮಾಲತೇಶ ಶಿವಪ್ಪ ಗಾಣಿಗೇರ  ಅವರನ್ನು ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸನ್ಮಾನಿಸಿದರು. ಸಂಗೀತ ಕ್ಷೇತ್ರದಿಂದ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿಯ ಹನುಮಂತ ಲಮಾಣಿ ಅವರ  ಅನುಪಸ್ಥಿತಿಯಲ್ಲಿ ಹನುಮಂತಪ್ಪ ಅವರ ತಂದೆಯನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶಾಸಕರಾದ ನೆಹರು ಓಲೇಕಾರ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕರಾದ ಶಶಿಕಲಾ ಹುಡೇದ  ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳ್ಳಿ ಪದಕ ವಿತರಣೆ: ಇದೇ ಸಂದರ್ಭದಲ್ಲಿ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದಲ್ಲಿ ಐದು ವರ್ಷ ಅಪಘಾತ ಅಪರಾಧ ರಹಿತ ಸುರಕ್ಷಿತ ಚಾಲನೆಗಾಗಿ 12 ಚಾಲಕರಿಗೆ ಸಾಂಕೇತಿಕವಾಗಿ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. (105 ಜನರಿಗೆ ಬೆಳ್ಳಿ ಪದಕ ವಿತರಿಸಲಾಗಿದೆ).

ಆಕರ್ಷಕ ಪಥಸಂಚಲನ: ಜಿಲ್ಲಾ ಸಶಸ್ತ್ರ ಮೀಸಲುಪಡೆ, ನಾಗರಿಕ ಪೊಲೀಸ್ ಪಡೆ, ಜಿಲ್ಲಾ ಅಬಕಾರಿ, ಗೃಹ ರಕ್ಷಕದಳ, ಕೆ.ಎಲ್.ಇ., ಜೆ.ಪಿ.ರೋಟರಿ, ಹುಕ್ಕೇರಿಮಠ, ಕಳಿದಾಸ ಪ್ರೌಢಶಾಲೆ, ಗೆಳೆಯರಬಳಗ ಆಂಗ್ಲಮಾಧ್ಯಮ ಶಾಲೆ, ಲಯನ್ಸ್ ಇಂಗ್ಲೀಷ್ ಮಿಡಿಯಂ, ಕೆ.ಪಿ.ಎಸ್. ಹಾಗೂ ಸರ್. ಎಂ.ವಿಶ್ವೇರಯ್ಯ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಜರುಗಿತು.