ಹಾವೇರಿ: ಮಹಾತ್ಮಾ ಗಾಂಧೀಜಿಯವರ 150 ನೇ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರದಿಂದ ಸೋಮವಾರದವರೆಗೆ ಆಯೋಜಿಸಿದ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಚಾಲನೆ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ನಾಯಕ್ ಗಾಂಧೀಜಿಯವರ ಜೀವನ ಕುರಿತ ಛಾಯಾಚಿತ್ರಗಳನ್ನು ವೀಕ್ಷಿಸಿದರು. ವಾತರ್ಾಧಿಕಾರಿ ಡಾ. ಬಿ.ಆರ್. ರಂಗನಾಥ ಪರಿಚಯಿಸಿದರು.
ಮಹಾತ್ಮಾ ಗಾಂಧೀಜಿ ಅವರ ಜೀವನದ ಪ್ರಮುಖ ಘಟನೆಗಳ ಆಧಾರಿತ ಅಪರೂಪದ ಛಾಯಾಚಿತ್ರಗಳು ಹಾಗೂ ಹಾವೇರಿ ಸೇರಿದಂತೆ ಕನರ್ಾಟಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಹಾತ್ಮಾಗಾಂಧೀಜಿ ಅವರು ಭೇಟಿ ಅಪರೂಪದ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಛಾಯಾಚಿತ್ರ ಪ್ರದರ್ಶನವನ್ನು ಹೆಚ್ಚು ಆಕರ್ಷಗೊಳಿಸಲು ಕರಕುಶಲ ಪಾರಂಪರಿಕ ಕಂಬಗಳ ವಿನ್ಯಾಸಗೊಳಿಸಿ ಗೋಲ್ಡ್ ಲೇಪನದಿಂದ ಅಲಂಕೃತ ಕಂಬಗಳ ಫೋಟೋ ಫ್ರೇಮ್ನಲ್ಲಿ ಗಾಂಧೀಜಿ ಅವರ ಕಪ್ಪು ಬಿಳುಪಿನ ಪ್ರದಶರ್ಿತ ಚಿತ್ರಗಳು ಮಹಾತ್ಮಾ ಗಾಂಧೀಜಿ ಅವರ ಜೀವನ ಚರಿತ್ರೆಯ ಓದಿನ ಅನುಭವ ಹಾಗೂ ಭಾರತ ಸ್ವಾತಂತ್ರ್ಯ ಹೋರಾಟದ ಮಹತ್ವದ ಘಟ್ಟಗಳನ್ನು ಪರಿಚಯಿಸುತ್ತದೆ.
ಛಾಯಾಚಿತ್ರಕ್ಕೆ ವಿಶೇಷ ಮೆರಗನ್ನು ನೀಡಲು ವಿಶ್ರಾಂತ ಸ್ಥಿತಿಯ ಗಾಂಧೀಜಿ ಅವರ ಪುತ್ಥಳಿ ಹಾಗೂ ಚಳುವಳಿಯಲ್ಲಿ ಹೆಜ್ಜೆಹಾಕುವ ಶ್ವೇತ ವರ್ಣದ ಗಾಂಧೀಜಿ ಅವರ ಪ್ರತಿಮೆ ವಿಶೇಷ ಆಕರ್ಷಣೀಯವಾಗಿದೆ. ಮರದಿಂದ ತಯಾರಿಸಿದ ಚರಕ ಎಲ್ಲರ ಗಮನಸೆಳೆಯುತ್ತಿದೆ. ಮಕ್ಕಳಾದಿಯಾಗಿ ನೋಡುಗುರು ಗಾಂಧೀಜಿ ಅವರ ಪುತ್ಥಳಿಯ ಜೊತೆ ಸೆಲ್ಫಿ ತೆಗೆದು ಖುಷಿ ಪಡುತ್ತಿದ್ದಾರೆ.
ಛಾಯಾಚಿತ್ರದ ಜೊತೆಗೆ ಗಾಂಧೀಜಿ ಅವರ ಬದುಕು, ಹೋರಾಟದ ಕ್ಷಣಗಳ ಕುರಿತಾದ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ. ಗಾಂಧೀಜಿಯವರ ಬಾಲ್ಯ ಜೀವನ, ಶೈಕ್ಷಣಿಕ ಜೀವನ, ವಿದೇಶ ಪ್ರವಾಸ, ಸ್ವಾತಂತ್ರ್ಯದ ಹೋರಾಟ, ಉಪ್ಪಿನ ಸತ್ಯಾಗ್ರಹ, ಪತ್ರಿಕಾ ಜೀವನ, ಕೊನೆಯುಸಿರೆಳೆದ ಕ್ಷಣ ಸೇರಿದಂತೆ ಕನರ್ಾಟಕದ ವಿವಿಧ ಜಿಲ್ಲೆಗೆ ಭೇಟಿನೀಡಿದ ಮಾಹಿತಿ ಕುರಿತ ಛಾಯಾಚಿತ್ರಗಳ ಪ್ರದರ್ಶನ ಅತ್ಯಂತ ಆಕಷರ್ಿಣಿಯವಾಗಿದೆ. ಇದರೊಂದಿಗೆ ಗಾಂಧೀಜಿ ಅವರ ಜೀವನ ಕುರಿತಾದ ಕಿರುಹೊತ್ತಿಗೆಯನ್ನು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜನರಿಗೆ ಉಚಿತವಾಗಿ ವಿತರಿಸುತ್ತಿದೆ. ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳಿಗೆ ಗಾಂಧಿಯ ಕುರಿತಾದ ತಿಳುವಳಿಕೆಗೆ ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.