ಸ್ವಚ್ಛಮೇವ ಜಯತೆ ಸ್ವಚ್ಛತಾ ರಥಕ್ಕೆ ಡಿಸಿ ಭಾಜಪೇಯಿ ಚಾಲನೆ

ಹಾವೇರಿ13: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸ್ಚಚ್ಛಭಾರತ ಮಿಷನ್ ಅಡಿ ಆಯೋಜಿಸಿದ ಸ್ವಚ್ಛತಾ ಕಲಾಜಾಥಾ ಹಾಗೂ ಜಾಗೃತಿ ಪ್ರಚಾರ ವಾಹನಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೆಯಿ ಅವರು ಚಾಲನೆ ನೀಡಿದರು.

        ಇಂದಿನಿಂದ ಮೂವತ್ತೇಳು ದಿನಗಳಕಾಲ (ಅ.20-ರವರೆಗೆ) ಜಿಲ್ಲೆಯ ಆಯ್ದ 75 ಗ್ರಾಮಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ರಾಣೆಬೆನ್ನೂರ ತಾಲೂಕಿನ ಪರಶುರಾಮ ಬಣಕಾರ ನೇತೃತ್ವದ ಜನನಿ ಜಾನಪದ ಕಲಾ ತಂಡ ಬೀದಿನಟಕ ಪ್ರದರ್ಶನ ನೀಡಲಿದೆ.

     ಆಯಾ ಗ್ರಾಮಗಳಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ ತೆರಳಿ ಬೀದಿನಾಟಕ  ಸಂಗೀತದ ಮೂಲಕ  ಶೌಚಾಲಯ ಬಳಿಕೆ, ಕಸವಿಲೇವಾರಿ, ನೀರಿನ ಸಧ್ಭಳಕೆ. ಆರೋಗ್ಯ ಜಾಗೃತಿ ಒಳಗೊಂಡಂತೆ  ಹಲವು ವಿಷಯಗಳ ಕುರಿತಂತೆ  ಗ್ರಾಮೀಣ ಜನರಿಗೆ  ಅರಿವು ಮೂಡಿಸಲಿದೆ.

        ಚಾಲನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಗೋವಿಂದಸ್ವಾಮಿ  ವಾತರ್ಾಧಿಕಾರಿ ಡಾ. ಬಿ.ಆರ್.ರಂಗನಾಥ, ಜಿಲ್ಲಾ ಪಂಚಾಯತ್ ಕಾರ್ಯದಶರ್ಿ ಜಾಫರ್  ಸುತಾರ, ಜಿಲ್ಲಾ ಪಂಚಾಯತ ಸ್ವಚ್ಛತಾ ಆಂದೋಲನದ ಸಂಚಾಲಕ ಗೋವಿಂದರಾಜು, ಇತರ ಅಧಿಕಾರಿಗಳು ಭಾಗವಹಿಸಿದ್ದರು.