ಹಾವೇರಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಷ್ಕರಣೆಗೆ ಭಾರತ ಚುನಾವಣಾ ಆಯೋಗದ ಹೊಸ ಆ್ಯಪ್ (ಗಿಠಣಜಡಿ ಊಜಟಠಿಟಟಿಜ'' ಒಠಛಟಜ ಂಠಿಠಿ) ಬಳಿಸಿ ಪರಿಷ್ಕರಣೆ ಮಾಡುವ ಇವಿಪಿ ಕಾರ್ಯಕ್ರಮದ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಕಾಲೇಜುಗಳು ಹಾಗೂ ವಿದ್ಯಾಥರ್ಿ ನಿಲಯಗಳು ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಇವಿಪಿ ಕಾರ್ಯಕ್ರಮ ಕುರಿತಂತೆ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕಾ ಆಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿದ ಕೃಷ್ಣ ಬಾಜಪೇಯಿ ಅವರು ಇ.ಎಲ್.ಸಿ. ಕ್ಲಬ್ಗಳನ್ನು ಸಕ್ರೀಯಗೊಳಿಸಿ ಮತದಾರರ ಪಟ್ಟಿಯಲ್ಲಿ ಹೆಸರುಗಳ ಪರಿಷ್ಕರಣೆ ಹಾಗೂ ಮತದಾನ ಜಾಗೃತಿ ಕುರಿತಂತೆ ಸ್ವೀಪ್ ಚಟವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಅಧಿಕಾರಿಗಳು ಇಲಾಖೆ ಸಿಬ್ಬಂದಿಗಳು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ದೃಢೀಕರಿಸಿ ಪರಿಶೀಲನೆಯನ್ನು ಇವಿಪಿ ಆಪ್ ಮೂಲಕ ಕೈಗೊಂಡು ಈ ಕುರಿತಂತೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಕಾಲೇಜುಗಳು ಹಾಗೂ ವಿದ್ಯಾಥರ್ಿ ನಿಲಯಗಳಲ್ಲಿ ''ಗಿಠಣಜಡಿ ಊಜಟಠಿಟಟಿಜ'' ಒಠಛಟಜ ಂಠಿಠಿ, ಬಳಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲನೆಮಾಡಿಕೊಳ್ಳಲು ಹಾಗೂ ತಮ್ಮ ಪಾಲಕರ ಹೆಸರುಗಳನ್ನು ಪರಿಶೀಲನೆಗೊಳಪಡಿಸಲು ಸೂಕ್ತ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಯಿತು.
ಜಿಲ್ಲೆಯ ಎಲ್ಲ ಶಿಕ್ಷಕರು ಹಾಗೂ ಅವರ ಕುಟುಂಬದವರ ಮತದಾರರ ಪಟ್ಟಿಯ ಹೆಸರಿನ ಪರಿಶೀಲನೆ ಕಾರ್ಯವನ್ನು ಕೈಗೊಂಡು ಈ ಕುರಿತಂತೆ ವರದಿ ಸಲ್ಲಿಸಲು ಸೂಚಿಸಲಾಯಿತು. ಬಿ.ಎಲ್.ಓಗಳ ಸಭೆ ಕರೆದು ಇವಿಪಿ ಕಾರ್ಯಕ್ರಮವನ್ನು ಚುರುಕುಗೊಳಿಸಿ ಸೆ. 15ರೊಳಗಾಗಿ ನಿಗಧಿತ ಗುರಿ ಸಾಧಿಸುವಂತೆ ತಾಕೀತು ಮಾಡಿದರು.
ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋದವರು, ವಿಳಾಸ ಬದಲಾವಣೆ, ಬೇರೆಡೆಗೆ ಮತದಾರರ ಹೆಸರು ಬದಲಾಯಿಸಲು ಇಚ್ಛಿಸುವವರು, ಪರಿಷ್ಕರಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ವತಃ ಮತದಾರರೇ ಮೊಬೈಲ್ ಆಪ್ ಬಳಸಿ ಪರಿಷ್ಕರಣೆ ಮಾಡಿಕೊಳ್ಳಬಹುದು. ಅಥವಾ ಸ್ಥಳೀಯ ಮತದಾರರು ತಮ್ಮ ದಾಖಲೆಗಳಾದ ಭಾರತೀಯ ಪಾಸಪೋಟರ್್, ಚಾಲನಾ ಪರವಾನಿಗೆ, ಆಧಾರ ಪತ್ರ, ಪಡಿತರ ಚೀಟಿ, ಸಕರ್ಾರಿ/ಅರೆ ಸಕರ್ಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ರೈತರ ಗುರುತಿನ ಚೀಟಿ ಮತ್ತು ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರೆ ದಾಖಲೆಗಳು ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ನಿಮ್ಮ ಹತ್ತಿರದ ಕೇಂದ್ರಗಳಾದ ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೊಂದಣಾಧಿಕಾರಿಗಳ ಕಛೇರಿ, ಬೆಂಗಳೂರು-1/ಕನರ್ಾಟಕ-1 ಕೇಂದ್ರ, ಅಟಲ್ ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ(ಗ್ರಾಮ ಪಂಚಾಯತಿ) ಮತ್ತು ಮತಗಟ್ಟೆ ಅಧಿಕಾರಿಗಳು (ಬಿಎಲ್ಓ)ರವರು ಮನೆಮನೆಗೆ ಭೇಟಿ ನೀಡುವವರಿದ್ದು ಅವರ ಭೇಟಿ ನೀಡಿದ ಸಮಯದಲ್ಲಿ ಹಾಜರಿಪಡಿಸಿ ಪರಿಷ್ಕರಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಾಗರಿಕರು ವೆಬ್ಸೈಟ್ ''ಗಿಠಣಜಡಿ ಊಜಟಠಿಟಟಿಜ'' ಒಠಛಟಜ ಂಠಿಠಿ, ಓಜತಿ ಓಗಿಖಕ ಕಠಡಿಣಚಿಟ (ತಿತಿತಿ.ಟಿತಠಿ.ಟಿ) ಅಥವಾ 1950 ಟೊಲ್ ಫ್ರೀ ಮತದಾರರ ಸಹಾಯ ಕೇಂದ್ರದ ಮೂಲಕವು ಪರಿಶೀಲಿಸಿ ಧೃಡೀಕರಿಸಿಕೊಳ್ಳಬಹುದು ಎಂದು ಹೇಳಿದರು.
ಸಾರ್ವಜನಿಕರು ನಿಮ್ಮ ಹೆಸರು ಮತ್ತು ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೇ, ಪರಿಶೀಲಿಸಿಕೊಳ್ಳಿ ಇರದಿದ್ದಲ್ಲಿ, ನಗದಿತ ನಮೂನೆ-6ರಲ್ಲಿ ಹೆಸರು ಸೇರ್ಪಡೆ, ನಮೂನೆ-7ರಲ್ಲಿ ತೆಗೆದುಹಾಕಲು, ನಮೂನೆ-8ರಲ್ಲಿ ತಿದ್ದುಪಡಿ ಮತ್ತು ನಮೂನೆ-8ಎ ರಲ್ಲಿ ಒಂದುಸ್ಥಳ ದಿಂದ ಬೇರೆ ಸ್ಥಳಕ್ಕೆ ವಗರ್ಾಯಿಸಿಕೊಳ್ಳ ಅಜರ್ಿಗಳನ್ನು ಸಲ್ಲಿಸಬಹುದು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯಕ್ಕೆ ಎಲ್ಲ ಕೈಜೋಡಿಸವಂತೆ ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಕೃಷಿ ಇಲಾಖೆ ಜಂಟಿ ನಿದರ್ೆಶಕ ಬಿ.ಮಂಜುನಾಥ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದರ್ೆಶಕ ಪೀರಜಾದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದಶರ್ಿ ಜಾಫರ ಸುತಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿದರ್ೆಶಕ ಪಡಗಣ್ಣನವರ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಮಖಾನೆ ಇತರರು ಉಪಸ್ಥಿತರಿದ್ದರು.