ತಿರುವನಂತಪುರಂ, ನ ೨೭ -ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್‌ಎಸ್‌ಎಸ್ ಅಂಗಸಂಸ್ಥೆ ’ಪ್ರಜ್ಞಾ ಪ್ರವಾಹ’ದ ರಾಷ್ಟ್ರೀಯ ಸಂಚಾಲಕ ವಿರಚಿತ ’ಹಿಂದುತ್ವ ಫಾರ್ ದಿ ಚೇಂಜಿಂಗ್’ ಟೈಮ್’ ಪುಸ್ತಕ ಮುಂದಿನ ತಿಂಗಳು ಡಿಸೆಂಬರ್ ೧ ರಂದು ಬಿಡುಗಡೆಯಾಗಲಿದೆ
ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯಪ್ರಕಾಶ್ ಅವರು ಡಿ ೧ರಂದು ಕೊಚ್ಚಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ’ಹಿಂದುತ್ವ ಫಾರ್ ದಿ ಚೇಂಜಿಂಗ್’ ಟೈಮ್’ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಬುಧವಾರ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸೂರ್ಯಪ್ರಕಾಶ್, "ಈ ಪುಸ್ತಕ ಬಿಡುಗಡೆಯ ಭಾಗವಾಗುವುದು ಹೆಮ್ಮೆ ಎನಿಸುತ್ತದೆ. ಕಾರ್ಯಕ್ರಮದಲ್ಲಿ ರಂಗ ಹರಿ ಜಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಂದಕುಮಾರ್ ಅವರ ಪುಸ್ತಕ ಸಾಹಿತ್ಯ ಭಂಡಾರಕ್ಕೆ ಅಮೂಲ್ಯವಾದ ಸೇರ್ಪಡೆಯಾಗಲಿದೆ" ಎಂದು ಹೇಳಿದ್ದಾರೆ.
ನಂದಕುಮಾರ್ ತಮ್ಮ ಪುಸ್ತಕದಲ್ಲಿ, ಹಿಂದೂ ಧರ್ಮದ ವಿಭಿನ್ನ ತತ್ವ ಚಿಂತನೆಗಳ ವೈಫಲ್ಯ ಮತ್ತು ಯಶಸ್ಸಿನ ಸಾದೃಶ್ಯಗಳ ಬಗ್ಗೆ ಹೋಲಿಸಿದ್ದಾರೆ.
ಬದಲಾಗುತ್ತಿರುವ ಕಾಲದಲ್ಲಿ ಹಿಂದುತ್ವ ಎಷ್ಟು ಪ್ರಸ್ತುತ ಎಂಬುದನ್ನು ವಿವರಿಸುವ ಪುಸ್ತಕವು ಹಿಂದೂ ತತ್ವಶಾಸ್ತ್ರವು ಹಳೆಯದು ಎಂದು ಆರೋಪಿಸುವ ಎಡ ಬುದ್ಧಿಜೀವಿಗಳಿಗೆ ಉತ್ತರಿಸುತ್ತದೆ.
"ಜಾಗತಿಕವಾಗಿ ಹಳತಾಗಿರುವ, ವಿಶೇಷವಾಗಿ ಕೇರಳದ ಎಡಪಂಥೀಯ ಬುದ್ಧಿಜೀವಿಗಳು, ಹಿಂದೂ ತತ್ವಶಾಸ್ತ್ರವನ್ನು ಕುಗ್ಗಿಸಿ ಸಾಂತ್ವನ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಂಡಿದೆ ಎಂದು ನಂದಕುಮಾರ್ ಯುಎನ್‌ಐಗೆ ತಿಳಿಸಿದ್ದಾರೆ
ಸಿಂಧೂ ಸ್ಕ್ರಾಲ್ಸ್ ಪ್ರೆಸ್ ಪ್ರಕಟಿಸಿದ ಪುಸ್ತಕದ ಮೊದಲ ಪ್ರತಿಯನ್ನು ಆರ್ ಹರಿ ಸ್ವೀಕರಿಸಲಿದ್ದಾರೆ.