ಲೋಕದರ್ಶನ ವರದಿ
ಕೊಪ್ಪಳ : ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿ ವರ್ಷದಂತೆ 16ನೇ ಬಾರಿಗೆ ಇಟಗಿ ಉತ್ಸವವ ಆಚರಣೆ ಬರುವ ಡಿಸೆಂಬರ್ 21ರಿಂದ 25 ರವರೆಗೆ 5ದಿನಗಳ ಕಾಲ ಸಂಭ್ರಮದಿಂದ ಇಟಗಿ ಉತ್ಸವನ್ನು ಜಿಲ್ಲೆಯ ಕುಕನೂರು ತಾಲೂಕಿನ ಇಟಿಗಿ ಗ್ರಾಮದ ಐತಿಹಾಸಿಕ ದೇವಾಲಯಗಳ ಚಕ್ರವತರ್ಿ ಮಹೇಶ್ವರ ದೇವಾಸ್ಥಾನದ ಮಹಾದೇವ ದಂಡನಾಯಕ ವೇದಿಕೆಯಲ್ಲಿ ಉತ್ಸವ, ಕವಿ ಸಮ್ಮೇಳನ, ಇಟಗಿ ಜಾನಪದ ಜಾತ್ರೆ, ವಿಚಾರ ಸಂಕಿರಣ ಮತ್ತು ಗೋಷ್ಠಿ ಸೇರಿದಂತೆ ಧಾಮರ್ಿಕ ಹಾಗೂ ಸಾಂಸೃತಿಕ ಕಾರ್ಯಕ್ರಮ ನೆರೆವೆರಿಸಲು ನಿರ್ಧರಿಸಲಾಗಿದೆ.
ಮಂಗಳವಾರ ಸಂಜೆ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಕಾರ್ಯಲಯದಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಬೆಯಲ್ಲಿ ಈ ವಿಷಯ ಕುರಿತು ಸುದೀರ್ಘವಾಗಿ ಚಚರ್ಿಸಿ ನಿರ್ಣಯ ಕೈಗೊಳ್ಳಲಾಯಿತು. ಸಂಘಟಕ ವೇದಿಕೆಯ ಅಧ್ಯಕ್ಷ ಮಹೇಶಬಾಬು ಸುರ್ವೇ ಮತಾನಾಡಿ, ಉತ್ಸವದ ಸಂಪೂರ್ಣ ಮಾಹಿತಿ ಸಭೆೆಗೆ ತಿಳಿಸಿದರು. ಅಧ್ಯಕ್ಷತೆವಹಿಸಿದ ತಿರುಳುಗನ್ನಡ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ. ಸಾದಿಕ್ ಅಲಿ ಮಾತನಾಡಿ, ಸಭೆಯಲ್ಲಿ ಸಲಹೆ ಸೂಚನೆ ಮಂಡಿಸಿದಂತೆ ಕಾರ್ಯಕ್ರಮ ಯಶಸ್ವಿ ಮತ್ತು ಅರ್ಥಪೂರ್ಣ ಆಚರಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದೆಂದರು.
ಸಭೆಯಲ್ಲಿ ಸಾಹಿತಿ ಹನುಮಂತಪ್ಪ ಅಂಡಗಿ, ಪತ್ರಕರ್ತರಾದ ಶಿವರಾಜ ನುಗಡೊಣಿ, ಶಿವಕುಮಾರ್ ಹಿರೇಮಠ, ಜಗದೀಶ್ ಹುಯಿಲಗೊಳ, ಗೋವಿಂದರಾಜ ಸೇರಿದಂತೆ ಇತರರು ಸಭೆಯಲ್ಲಿ ಉಪ್ಪಸ್ಥಿರಿದ್ದು ತಮ್ಮ ಸಲಹೆ ಸೂಚನೆ ನೀಡಿ ಜಿಲ್ಲಾಯ ಸಾಹಿತಿಗಳು, ಪ್ರಗತಿಪರ ಸಂಘಟನೆಗಳು ಭಾಗವಹಿಸಿ ಇಟಗಿ ಉತ್ಸವ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡರು.