ಚಂಡಮಾರುತದ ಆತಂಕ : ಹವಾಮಾನ ಇಲಾಖೆಯ ಸೂಚನೆ ಜಲಸಾಹಸ ಕ್ರೀಡೆ ಸ್ಥಗಿತಕ್ಕೆ ಆದೇಶ ನೀಡಿದ ಪ್ರವಾಸೋದ್ಯಮ ಇಲಾಖೆ
Cyclone threat: Meteorological Department issues advisory; Tourism Department orders suspension of w
ಕಾರವಾರ 19 : ಇಂಡಿಯನ್ ಮೆಟ್ರಾಲಾಜಿಕಲ್ ಇಲಾಖೆಯ ಚಂಡಮಾರುತದ ಮುನ್ಸೂಚನೆ ನೀಡಿದೆ. ಪರಿಣಾಮ ಭಾರೀ ಗಾಳಿ ಮಳೆ ಮುನ್ಸೂಚನೆಯನ್ನು ಮಂಗಳವಾರ ನೀಡಿದೆ . ಈ ಹಿನ್ನೆಲೆಯಲ್ಲಿ ಜಲ ಸಾಹಸ ಕ್ರೀಡೆ ನಡೆಸದಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಆದೇಶಿಸಿದ್ದಾರೆ . ಪ್ರಸಕ್ತ ವರ್ಷದ ಮಳೆಗಾಲದ ಆರಂಭದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಹಾಗೂ ನದೀತೀರಗಳಲ್ಲಿ ಪ್ರವಾಸಿಗರಿಗೆ ಬೋಟಿಂಗ್, ಜಲ ಸಾಹಸ ಕ್ರೀಡೆ ನಡೆಸದಂತೆ ಸೂಚನೆ ನೀಡಿದೆ.
ಹೊನ್ನಾವರದ ಅಪ್ಸರಕೊಂಡ ಬೀಚ್ ನಲ್ಲಿ ಪ್ರಿವೆಡ್ಡಿಂಗ್ ಸೆಟ್ ಅಳವಡಿಕೆಗಳನ್ನು ಸ್ಥಗಿತಗೊಳಿಸಿ ಎಂದು ಉತ್ತರಕನ್ನಡ ರಿವರ್ ರಾಫ್ಟಿಂಗ್ ಮತ್ತು ಜಲ ಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆದೇಶಿಸಿದೆ.ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೇನ್ ಬೀಚ್, ಓಂ ಬೀಚ್, ಕೂಡ್ಲೆ ಬೀಚ್, ಹಾಫ್ನ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬೀಚ್, ಕಾರವಾರ ಬೀಚ್ ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆ, ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್ ಚಟುವಟಿಕೆ, ಕುಮಟಾ ತಾಲ್ಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಮತ್ತು ಅಪ್ಸರಕೊಂಡ ಬೀಚ್ ನಲ್ಲಿ ಪ್ರೀವೆಡ್ಡಿಂಗ್ ಸೆಟ್ ಅಳವಡಿಕೆ ಸ್ಥಗಿತಕ್ಕೆ ಸಮಿತಿ ಸೂಚನೆ ನೀಡಿದೆ.
ರಾಫ್ಟಿಂಗ್ ಅನುಮತಿ ಮುಗಿದಿದೆ : ಕಾಳಿ ನದಿಯಲ್ಲಿ ರಾಫ್ಟಿಂಗ್ ಗೆ ಪ್ರವಾಸೋದ್ಯಮ ಇಲಾಖೆ ನೀಡಿದ ಅನುಮತಿ ಇದೇ ಮಾರ್ಚಗೆ ಮುಗಿದಿದೆ. ಈಗ ಅವರು ಮರು ಅನುಮತಿ ಪಡೆಯಬೇಕಿದೆ. ಕಾಳಿ ನದಿಯಲ್ಲಿ ರಾಫ್ಟಿಂಗ್ ಚಟುವಟಿಕೆ ನಡೆಸುವವರು ಕಾರವಾರ ಸಹಾಯಕ ಕಮಿಷನರ್ ಮತ್ತು ತಹಶಿಲ್ದಾರರ ದಾಂಡೇಲಿ ,ಜೊಯಿಡಾ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ . ಒಟ್ಟು ಹದಿನೆಂಟು ಜನ ಮತ್ತು ಏಜೆನ್ಸಿ ಗಳು ರಾಫ್ಟಿಂಗ್ ಚಟುವಟಿಕೆ ಮಾಡುತ್ತಿದ್ದು ಇವರಲ್ಲಿ ಐವರು ಮರು ಅನುಮತಿ ಗೆ ಅರ್ಜಿ ದಾಖಲೆ ಸಲ್ಲಿಸಿದ ಮಾಹಿತಿ ಇದೆ. ಉಳಿದವರ ಅರ್ಜಿ ಬಂದ ಮೇಲೆ ಸಭೆ ನಡೆಸಿ, ಅರ್ಹ ಅರ್ಜಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಕಳಿಸುವುದಾಗಿ ತಾಲ್ಲೂಕು ಆಡಳಿತಗಳು ಹೇಳಿವೆ . ಈಗಿನ ಚಟುವಟಿಕೆ ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ತಿಳಿಸಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 