ಅಂಫಾನ್ ಚಂಡಮಾರುತ : ಕೋಲ್ಕತ್ತಾದಲ್ಲಿ ವಿಮಾನಗಳ ಸಂಚಾರ ಸ್ಥಗಿತ

ಕೊಲ್ಕತ್ತಾ , ಮೇ, 20,ಅಂಫಾನ್ ಚಂಡಮಾರುತ ಮತ್ತಷ್ಟು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ  ವಿಶೇಷ ವಿಮಾನಗಳು ಸೇರಿದಂತೆ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ   ಸ್ಥಗಿತಗೊಳಿಸಲಾಗಿದೆ. ಚಂಡಮಾರುತ ಇಂದು ಮಧ್ಯಾಹ್ನ ಅಥವಾ ಸಂಜೆ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ, ಪರಿಣಾಮ  ರಾಜ್ಯದ ಅನೇಕ ಕಡೆ  ಈಗಾಗಲೇ  ಭಾರಿ ಗಾಳಿ, ಮಳೆಯಾಗುತ್ತಿದೆ ಎಂದು ವರದಿಯಾಗಿದೆ.
ಮುಂದಿನ ಕೆಲವು ಗಂಟೆಗಳಲ್ಲಿ ಯಾವುದೆ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ,ಪರಿಹಾರ ಕಾರ್ಯಕ್ಕಾಗಿ ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ವಿಮಾನಗಳನ್ನು ಸಿದ್ಧಗೊಳಿಸಲಾಗಿದೆ. ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಜೆನಾ ಮಾತನಾಡಿ, 'ಆಂಫಾನ್ ಚಂಡಮಾರುತವು ಪ್ಯಾರಡೀಪ್ನಿಂದ 110 ಕಿ.ಮೀ ದೂರದಲ್ಲಿದೆ ಮತ್ತು 18-19 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಒಂದು ಗಂಟೆಯ ಹಿಂದೆ, ಪ್ಯಾರಡೀಪ್ನಲ್ಲಿ 102 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ . ಪಶ್ಚಿಮ ಬಂಗಾಳದ ಸುಂದರ್ಬನ್ಸ್ ಗೆ ಚಂಡಮಾರುತ  ಸಂಜೆ   ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದೆ  ಎಂದೂ  ಹೇಳಲಾಗಿದೆ.