ಸೈಬರ ಅಪರಾಧ ಹಾಗೂ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ

Cybercrime and traffic rules awareness program

ಸೈಬರ ಅಪರಾಧ ಹಾಗೂ ಸಂಚಾರ ನಿಯಮಗಳ  ಜಾಗೃತಿ ಕಾರ್ಯಕ್ರಮ  

ಹಾವೇರಿ 16: ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗಾಂಧಿಪುರದಲ್ಲಿ ಮಾದಕ ವಸ್ತು ಮತ್ತು ಓಷಧಗಳ ದರೂಪಯೋಗ ತಡೆ, ಸೈಬರ ಅಪರಾಧ ಹಾಗೂ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. ಜಿಲ್ಲಾ ಓಷಧ ನಿಯಂತ್ರಕರಾದ ಸಂಗಣ್ಣ ಶೀಳಿ ಮಾದಕ ವಸ್ತು ಮತ್ತು ಓಷಧಗಳ ದುರೂಪಯೋಗದ ಪರಿಣಾಮವನ್ನು ಕುರಿತು ಮಾತನಾಡಿ,ಸಾಮಾಜಿಕ್ ಸ್ವಾಸ್ಥ್ಯ ನಿರ್ಮಾಣದ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವ ಮಾರ್ಗಗಳನ್ನು ಸೂಚಿಸಿದರು.  ಜಿಲ್ಲಾ ಉಪ ಪೊಲೀಶ ವರಿಷ್ಠಾಧಿಕಾರಗಳಾದ ಎಲ್‌. ವಾಯ್‌. ಶಿರಾಕಲ್ ಮತ್ತು ಕ್ರೈಂ ವಿಭಾಗದ ಇನ್ಸೆ-್ಪಕ್ಟರ್ ಎಸ್‌. ಆರ್‌. ಗಣಾಚಾರಿ ಅವರು ಸಂಚಾರಿ ನಿಯಮಗಳ ಕುರಿತು ಮಾತನಾಡಿ ನಿಯಮ ಪರಿಪಾಲನೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇಯಾದರೆ, ಸಮಾಜದಲ್ಲಿ ದುರ್ಘಟನೆಗಳ ಸಂಖ್ಯೆ ಕಡಿಮೆ ಮಾಡಿ, ಆಗುವಂತಹ ಅನಾಹುತಗಳಿಂದ ದೂರವಿರಬಹುದೆಂದು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಹಾವೇರಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷರಾದ ಸುಭಾಸ ಹುಲ್ಯಾಳದ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಸಮಾನತೆ, ಸ್ವಾಸ್ಥತೆ, ಜಾಗೃತಿ, ಆರೋಗ್ಯಕರವಾತಾವರಣ ನಿರ್ಮಾಣ ಮಾಡಲು ಈ ನಮ್ಮ ಸಂಸ್ಥೆಯು ಸದಾ ಸಿದ್ಧವಾಗಿದೆ.ಇಂತಹ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯು ಮಾಡುತ್ತಲೇ ಬಂದಿದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿಗಳಾದ ವ್ಹಿ.ಆರ್  ಗೀರೀಶ ಬಣಕಾರ,ಆರ್‌.ಎಸ್‌. ಮಾಗನೂರ, ಪ್ರೊ.ಪಿ.ಸಿ. ಹಿರೇಮಠ,ಎಸ್‌.ಎಚ್‌. ಕಬ್ಬಿಣಕಂತಿಮಠ, ಎನ್‌.ಬಿ. ತಾಂಡೂರ, ಎ.ಎಚ್‌. ಕಬ್ಬಿಣಕಂತಿಮಠ, ರಮೇಶ ಪಾಟೀಲ, ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪರ್ಝಾನ್ ಬಿ. ಪಠಾಣ ಮತ್ತು ಜೆ.ಸಿ. ಇಂಟಿಮಠ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಇದ್ದರು.