ವಾಷಿಂಗ್ಟನ್, ಮೇ 18, ದೇಶವನ್ನೆ ಗಡಗಡ ನಡುಗಿಸಿದ್ದ ಅಮೆರಿಕದಲ್ಲಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ."ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಕೆಳಮುಖವಾಗುತ್ತಿರುವುದು ನಿಜಕ್ಕೂ ಬಹಳ ಒಳ್ಳೆಯ, ಸಂತಸದ ಸುದ್ದಿ, ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 1,486,423 ಕೋವಿಡ್ -19 ಪ್ರಕರಣಗಳು ದೃಡಪಟ್ಟಿದ್ದು . ಸಾವಿನ ಸಂಖ್ಯೆ 89,550 ಹೆಚ್ಚು ಜನರು ಮೃತಪಟ್ಟಿದ್ದಾರೆ. ಮತ್ತು ಈವರಗೆ 268,000 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ.
ಏಪ್ರಿಲ್ ಅಂತ್ಯದಲ್ಲಿ, ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ದೈನಂದಿನ ಹೆಚ್ಚಳವು ಸುಮಾರು 36,ಸಾವಿರದಷ್ಟಿತ್ತು ಆದರೆ ಮೇ ತಿಂಗಳಿನಿಂದ ಸೋಂಕಿನ ಹೊಸ ಪ್ರಕರಣಗಳ ದೈನಂದಿನ ಸಂಖ್ಯೆ 18,000 ಮತ್ತು 27,000 ರ ನಡುವೆ ಏರಿಳಿತವಾಗಿದೆ ಎಮದು ಅವರು ಹೇಳಿದ್ದಾರೆ. ಇದುವರೆಗೆ ದೃಡಪಡಿಸಿದ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಜಗತ್ತಿನಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ವಿಶ್ವಾದ್ಯಂತ 4.7 ದಶಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಈವರೆಗೆ 315,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.