ಲೋಕದರ್ಶನ ವರದಿ
ಮಹಾಲಿಂಗಪುರ : ಕೇಂದ್ರ ಸರಕಾರ ಮತ್ತೊಂದು ಸುತ್ತಿನಲ್ಲಿ ಕೈಗೊಂಡ ಬ್ಯಾಂಕ್ಗಳ ವಿಲೀನ ನಿಧರ್ಾರದಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ತೇರದಾಳ ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಿರುವ ಶಾಖೆಗಳಲ್ಲಿಯೇ ಸಕಾಲಕ್ಕೆ ಸಮರ್ಪಕ ಸೇವೆ ಸಿಗದೇ ಗ್ರಾಹಕರು ಪರದಾಡುತ್ತಿದ್ದಾರೆ. ಇನ್ನು ವಿಲೀನದಿಂದ ಶಾಖೆಗಳ ಸಂಖ್ಯೆ ಮತ್ತಷ್ಟು ಕುಗ್ಗುವುದರಿಂದ, ಗ್ರಾಹಕರ ಸಂಖ್ಯೆ ಹೆಚ್ಚಾಗಿ ಕಾರ್ಯ ಒತ್ತಡವಾಗಲಿದ್ದು, ಇದು ಕೇಂದ್ರ ಸರಕಾರದ ಅವೈಜ್ಞಾನಿಕ ದ್ವಿಮುಖ ನೀತಿಯಾಗಿದೆ ಎಂದು ಆರೋಪಿಸಿದ್ದಾರೆ.
ದ್ವಿಮುಖ ನೀತಿ ಸಲ್ಲದು:
ಪ್ರಧಾನಿ ನರೇಂದ್ರ ಮೋದಿಯವರು ಒಂದು ಕಡೆ ಜನ್ಧನ್ ಯೋಜನೆ ಪರಿಚಯಿಸಿ ಕೋಟ್ಯಂತರ ಬ್ಯಾಂಕ್ ಖಾತೆ ಮಾಡಿಸಿದ್ದಾರೆ. ಎಲ್ಲ ಸಾಮಾನ್ಯರಿಗೆ ಬ್ಯಾಂಕ್ ಮೂಲಕ ವ್ಯವಹಾರ ಮಾಡುವಂತೆ ಕರೆ ನೀಡಿದ್ದಾರೆ. ಮತ್ತೊಂದು ಕಡೆ ಬ್ಯಾಂಕ್ಗಳ ವಿಲೀನಗೊಳಿಸುವ ಭರಾಟೆಯಲ್ಲಿ ಶಾಖೆಗಳ ಸಂಖ್ಯೆ ಕಡಿಮೆಗೊಳಿಸುತ್ತಿದ್ದಾರೆ. ಇದರಿಂದ ದುಪ್ಪಟ್ಟಾದ ಗ್ರಾಹಕರು ಇಕ್ಕಟ್ಟಾದ ಶಾಖೆಗಳಲ್ಲಿ ವ್ಯವಹರಿಸುವಿದೇ ದೊಡ್ಡ ದುರ್ಲಭವಾಗಿದೆ. ಮೊದಲು ಎಸ್ಬಿಎಂ ಬ್ಯಾಂಕನ್ನು ಎಸ್ಬಿಐನೊಂದಿಗೆ ವಿಲೀನಗೊಳಿಸಿದಾಗ ಎರಡೂ ಶಾಖೆಗಳ ಸಾವಿರಾರು ಗ್ರಾಹಕರು ಒಂದೇ ಶಾಖೆಯಲ್ಲಿ ಕಡಿಮೆ ಸಿಬ್ಬಂದಿಯೊಂದಿಗೆ ವ್ಯವಹರಿಸಲು ಪರದಾಡುತ್ತಿದ್ದಾರೆ.
ಎಲ್ಲ ಶಾಖೆಗಳು ಕಿಕ್ಕಿರಿದು ತುಂಬಿರುತ್ತವೆ. ಒಬ್ಬ ಗ್ರಾಹಕ ಸಾಮಾನ್ಯ ವ್ಯವಹಾರಕ್ಕೂ ಬ್ಯಾಂಕ್ ಶಾಖೆಯಲ್ಲಿ ಕನಿಷ್ಟ 5 ತಾಸು ಕಳೆಯಬೇಕಾಗುತ್ತದೆ. ಕಡಿಮೆ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಬಿದ್ದು, ತಾಳ್ಮೆ ಕಳೆದುಕೊಂಡು ಗ್ರಾಹಕರೊಂದಿಗೆ ಒರಟಾಗಿ ವತರ್ಿಸುವುದೂ ಕಂಡು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಲೀನಗೊಳಿಸಿದರೂ ಶಾಖೆಗಳನ್ನು ಹೆಚ್ಚಿಸಲಿ:
ಕೇಂದ್ರ ಸರಕಾರ ಕನರ್ಾಟಕ ರಾಜ್ಯದ 4 ಬ್ಯಾಂಕ್ಗಳ ವಿಲೀನಗೊಳಿಸುವ ನಿಧರ್ಾರಕ್ಕೆ ಬಂದಿದ್ದು, ಬ್ಯಾಂಕ್ ವಿಲೀನದಿಂದ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ ಹೊರತು ಶಾಖೆ ಮತ್ತು ಸಿಬ್ಬಂದಿ ಸಂಖ್ಯೆ ಕುಗ್ಗುತ್ತದೆ.
4 ಶಾಖೆಯ ಗ್ರಾಹಕರು ಕಡಿಮೆ ಸಿಬ್ಬಂದಿ ಇರುವ 2 ಶಾಖೆಯಲ್ಲಿ ವ್ಯವಹರಿಸಬೇಕಾಗುತ್ತದೆ. ಈಗಲೇ ಎಲ್ಲ ಶಾಖೆಗಳಲ್ಲಿ ಸಮರ್ಪಕ ಸೇವೆ ಇಲ್ಲದೇ ಗ್ರಾಹಕರು ಪರದಾಡುತ್ತಿರುವಾಗ ಮತ್ತೊಂದು ಸುತ್ತಿನ ವಿಲೀನ ಕಾರ್ಯ ಅವೈಜ್ಞಾನಿಕವಾಗಿದೆ.
ಒಂದು ವೇಳೆ ವಿಲೀನಗೊಳಿಸಿದರೂ ಶಾಖೆಗಳ ಸಂಖ್ಯೆ ಹೆಚ್ಚಿಸಲಿ, ಕೇವಲ ಶಾಖೆಯ ನಾಮ ಫಲಕ ಮಾತ್ರ ಬದಲಿಸಿ ಯಥಾ ಪ್ರಕಾರ ಅಲ್ಲಿಯೇ ವ್ಯವಹಾರ ಮುಂದುವರೆಸುವಂತಾಗಲಿ. ಈ ಬಗ್ಗೆ ರಾಜ್ಯ ಸರಕಾರವೂ ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು ಎಂದು ನಿಂಗಪ್ಪ ಬಳಿಕಾಯಿ, ಮಹಾದೇವ ಕೊಳಿಗುಡ್ಡ, ಮಹಾಲಿಂಗ ಕಲ್ಯಾಣಿ, ಚಿದಾನಂದ ಧರ್ಮಟ್ಟಿ, ಸುರೇಶ ಮಡಿವಾಳರ, ವೀರೇಶ ನ್ಯಾಮಗೌಡ, ಬಸವರಾಜ ಕೊಪ್ಪದ, ಸಂಜು ಅಂಗಡಿ ಸೇರಿದಂತೆ ಗ್ರಾಹಕರು ಆಗ್ರಹಿಸಿದ್ದಾರೆ