ವರ್ತಮಾನದ ವೃತ್ತಿಗೆ ಪೂರಕ ಜ್ಞಾನಾರ್ಜನೆ ಅಗತ್ಯ: ಪಟ್ಟಣಶೆಟ್ಟಿ

ಹಾವೇರಿ, 26: ಪ್ರಗತಿಶೀಲ ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆಯುತ್ತಿದ್ದು, ವರ್ತಮಾನದ ವೃತ್ತಿಕ್ಷೇತ್ರಕ್ಕೆ ಅನುಕೂಲವಾಗುವಂತೆ ವಿದ್ಯಾಥರ್ಿಗಳಾದವರು ಪೂರಕ ಜ್ಞಾನಾರ್ಜನೆ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ದಾವಣಗೆರೆ ಎಮ್. ಎಮ್. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಮ್. ಎಮ್. ಪಟ್ಟಣಶೆಟ್ಟಿ ಹೇಳಿದರು. 

ಅವರು ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ್ದ 'ಯುಜಿಸಿ ನೆಟ್-ಕೆಸೆಟ್ ಪರೀಕ್ಷಾ ತಯಾರಿ ಹಾಗೂ ಸ್ಪಧರ್ಾತ್ಮಕ ಪರೀಕ್ಷಾ ಸಿದ್ಧತೆ' ಕುರಿತಾದ ಕಾಯರ್ಾಗಾರದಲ್ಲಿ ಮಾತನಾಡುತ್ತಿದ್ದರು. 

    ವೃತ್ತಿ ಆಯ್ಕೆ ಮೊದಲೇ ನಿರ್ಧರಿಸಬೇಕಾಗಿರುವುದು ಅಗತ್ಯವಿದ್ದು, ವಿದ್ಯಾಥರ್ಿ ದೆಸೆಯಲ್ಲೇ ಸ್ಪಧರ್ಾತ್ಮಕ ಪರೀಕ್ಷೆಗಳ ಕುರಿತಾದ ಸಂಪೂರ್ಣ ಮಾಹಿತಿ ಮತ್ತು ಪರಿಕರಗಳ ಅಗತ್ಯತೆ ಇದೆ. ವರ್ತಮಾನದ ಸನ್ನಿವೇಶಕ್ಕೆ ತಕ್ಕಂತೆ ಸಾಮಾನ್ಯ ಜ್ಞಾನ, ವಿಷಯದ ಪರಿಜ್ಞಾನ, ಮಾಹಿತಿಗಳ ಸಮಗ್ರತೆಯನ್ನು ಪ್ರತಿಯೊಬ್ಬರೂ ಅರಿತು ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಇದಕ್ಕಾಗಿ ಅನೇಕ ಮಾಹಿತಿ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. 

        ಈ ನಿಟ್ಟಿನಲ್ಲಿ ಜಿ. ಎಚ್. ಕಾಲೇಜಿನಲ್ಲಿ ಪ್ರತಿ ವರ್ಷ ಎಮ್.ಕಾಂ. ವಿದ್ಯಾಥರ್ಿಗಳಿಗೆ ಸ್ಪಧರ್ಾತ್ಮಕ ಪರೀಕ್ಷೆ ತಯಾರಿ ಕುರಿತು ಕಾಯರ್ಾಗಾರ ಏರ್ಪಡಿಸಿ ಉತ್ತಮ ಮಾರ್ಗದರ್ಶನ ಮಾಡುತ್ತಿರುವುದು ಸಂತೋಷ ತಂದಿದೆ. ಇದು ನಿರಂತರವಾಗಿ ಮುಂದುವರೆಯಲಿ ಎಂದರು. 

 ಕಾಯರ್ಾಗಾರದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಮ್. ಎಸ್. ಯರಗೊಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಂಯೋಜಕ ಪ್ರೊ. ಗುರುರಾಜ ಬಾಕರ್ಿ, ಡಾ. ಗುರುಪಾದಯ್ಯ ವೀ. ಸಾಲಿಮಠ, ಪ್ರೊ. ಸುಮಾ ಹಿರೇಮಠ, ಪ್ರೊ. ಪವನ ಡೊಂಕಣ್ಣವರ, ಪ್ರೊ. ರಿಷಿಕಾ ಡಿ. ಉಪಸ್ಥಿತರಿದ್ದರು. ಆರಂಭದಲ್ಲಿ ಉಮ್ಮಿಹಬೀಬಾ ಸ್ವಾಗತಿಸಿದರು. ಶೃತಿ ಮತ್ತು ನಂದಿನಿ ನಿರ್ವಹಿಸಿದರು. ವಿದ್ಯಾಥರ್ಿ ಪ್ರತಿನಿಧಿ ಶೃತಿ ಹೆಸರೂರ ವಂದಿಸಿದರು.