ಸಂಸ್ಕೃತಿ ವಿಕಾರಗೊಳ್ಳುವದಲ್ಲ, ವಿಕಾಸಗೊಳ್ಳುವುದುಃ ಡಾ.ಬಳಿಗಾರ

ಬಾಗಲಕೋಟೆ: ವಿದ್ಯಾಥರ್ಿಗಳು ಕೇವಲ ಅಂಕ ಗಳಿಸಿಕೊಂಡು ಪಾಸಾಗುವದೇ ನಮ್ಮ ಮುಂದಿರುವ ದೊಡ್ಡ ಗುರಿ ಎಂದು ಕೊಳ್ಳಬಾರದು, ವಿದ್ಯೆಯ ಜೊತೆಗೆ ಒಳ್ಳೆಯ ಸಂಸ್ಕೃತಿ ರೂಢಿಸಿಕೊಂಡಿರಬೇಕೆಂದು ಸಾಹಿತಿ, ಇಲಕಲ್ಲದ ಡಾ. ಶಂಭು ಬಳಿಗಾರ ಹೇಳಿದ್ದಾರೆ.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಡಿ. ಹೆರಂಜಲ್ ಕಲಾ, ಎಸ್. ಸಕ್ರಿ ವಾಣಿಜ್ಯ ಹಾಗೂ ಆರ್. ದೊಡ್ಡಿಹಾಳ ವಿಜ್ಞಾನ ಪದವಿಪೂರ್ವ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು, ಪ್ರತಿಭಾವಂತ ವಿದ್ಯಾಥರ್ಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶೃದ್ಧೆ ಸಮಾಜವನ್ನು ಆಳುತ್ತದೆ.

  ನಿಮ್ಮ ಶೃದ್ಧೆ ಇನ್ನೊಬ್ಬರಿಗೆ ಹಿಡಿಸುವಂತಿರಬೇಕು ಆವಾಗ ಸಮಾಜವನ್ನು ನೀವು ಆಳಬಲ್ಲಿರಿ, ಸಮಯಪಾಲನೆ, ನಿಯಮ ಪಾಲನೆ, ಶೃದ್ಧಾ ಮನೋಭಾವನೆ, ನಾಯಕತ್ವದ ಗುಣ ವಿದ್ಯಾಥರ್ಿಗಳಲ್ಲಿ ಇರಬೇಕೆಂದರು.

ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದಶರ್ಿ ಸಂದೀಪ ಕುಲಕಣರ್ಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ವಿದ್ಯಾಥರ್ಿಗಳ ಭವಿಷ್ಯವನ್ನು ನಿಮರ್ಿಸಬಲ್ಲ ಪ್ರಬಲ ಮಾಧ್ಯಮವಾಗಿದೆ ಎಂದರು.

    ಸಂಸ್ಥೆಯ ಕಾಯರ್ಾಧ್ಯಕ್ಷೆ ಶ್ರೀಲತಾ ಹೆರಂಜಲ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜಕ್ಕೆ ಕಾಣಿಕೆ ಕೊಡುವದೆಂದರೆ ಅದು ಅರಿವಿನ ಸಂಕೇತ, ಅರಿವು ಕಣ್ಣು ತೆರೆಯಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಅಶೋಕ ಕಂದಗಲ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಎಂ.ಎಸ್. ಬಡಿಗೇರ ಪರಿಚಯಿಸಿದ ಕಾರ್ಯಕ್ರಮವನ್ನು ಜಿ.ಬಿ. ಕುಲಕಣರ್ಿ ವಂದಿಸಿದರು. ಪಿ.ವೈ. ಕವಟೇಕರ, ಜಿ.ಬಿ. ಕುಲಕಣರ್ಿ, ಉಮೇಶ ತಿಮ್ಮಾಪೂರ ಉಪಸ್ಥಿತರಿದ್ದರು.