ಹಾವೇರಿ, 26: ಭಾರತೀಯ ಭಾಷೆ ಪ್ರಾಚೀನ ಕಾಲದಿಂದಲೂ ಭವ್ಯ ಪರಂಪರೆ ಹೊಂದಿರುವುದು ನಿಜ ಆದರೆ ಭಾಷೆ ಕಲಿಯುವುದು ಮುಖ್ಯವಲ್ಲ, ಭಾಷೆಯ ಅರ್ಥಗ್ರಹಿಕೆ ಮುಖ್ಯ. ಪ್ರತಿಯೊಬ್ಬರ ಮಾತೃ ಭಾಷೆಯು ಅವರವರ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ. ಪ್ರಜ್ಞಾವಂತ ಪಾಲಕರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ಕೊಡಬೇಕು. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಲುವಲ್ಲಿ ಮಾತೃಭಾಷೆಯು ಅಪೂರ್ವವಾದ ಪಾತ್ರ ನಿರ್ವಹಿಸುತ್ತದೆ. ಮಾತೃಭಾಷೆಯ ಅಧ್ಯಯನದ ಮೂಲಕವೇ ಸಂಸ್ಕಾರಯುಕ್ತ ಸಂಸ್ಕೃತಿ ಬೆಳೆಸಲು ಸಾಧ್ಯ ಎಂದು ಎಂದು ಧಾರವಾಡದ ಹಿರಿಯ ಸಾಹಿತಿ ಡಾ. ಹೇಮಾ ಸಿ. ಪಟ್ಟಣಶೆಟ್ಟಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಜಿ.ಎಚ್ ಮಹಾವಿದ್ಯಾಲಯದ ಕನ್ನಡ ಹಾಗೂ ಹಿಂದಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 'ಅಂತರರಾಷ್ಟ್ರೀಯ ಮಾತೃಭಾಷಾ ದಿನ' ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶವಾಗಿದ್ದು, ವೈವಿಧ್ಯಮಯ ಸಂಸ್ಕೃತಿಯ ಮಾತೃಭಾಷಾ ಪರಂಪರೆಯ ನಾಡಾಗಿದೆ. ಇಂದು ನಾನಾ ಕಾರಣಗಳಿಂದ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. ಪ್ರತಿಯೊಬ್ಬರು ಜಾಗೃತಿಯ ಮೂಲಕ ಮಾತೃಭಾಷೆಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಗುರುತರ ಜವಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಮ್. ಎಸ್. ಯರಗೊಪ್ಪ ವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾಥರ್ಿ-ವಿದ್ಯಾಥರ್ಿನಿಯರು ಹಾಜರಿದ್ದರು. ಡಾ. ವಾಸುದೇವ ನಾಯಕ್ ಗೋರ್ಮಠಿ, ಪ್ರೊ. ಡಿ. ಎ ಕೊಲ್ಹಾಪುರೆ ತೆಲಗು, ಪ್ರೊ. ಜಿ. ಎಮ್. ಯೆಣ್ಣಿ ಉದರ್ು, ಪ್ರೊ. ಜೆ. ಆರ್ ಶಿಂಧೆ ಮರಾಠಿ ಭಾಷೆಗಳಲ್ಲಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಎಫ್. ಹೊಸಮನಿ ಅತಿಥಿಗಳನ್ನು ಪರಿಚಯಿಸಿ, ಸರ್ವರನ್ನು ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಎಮ್. ಪಿ. ಕಣವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಶಮಂತ ಕೆ. ಎಸ್. ತುಳು ಭಾಷೆಯಲ್ಲಿ ವಂದಿಸಿದರು. ಪ್ರೊ. ಶ್ರೀದೇವಿ ದೊಡ್ಡಮನಿ ನಿರೂಪಿಸಿದರು.