ಬೆಳಗಾವಿ 19- ನಗರದ ಸೃಜನ ಕಲಾ ಬೇಸಿಗೆ ಶಿಬೀರದವರು ತಿಳಕವಾಡಿಯ ವಾರೇಕರ ನಾಟ್ಯಸಂಘ ಸಭಾಗೃಹದಲ್ಲಿ ಕಳೆದ ಒಂದು ತಿಂಗಳುಗಳಿಂದ ಸೃಜನ ಕಲಾ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದರು. 50 ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ತಾವು ಕಲಿತ ಪ್ರತಿಭೆಯನ್ನು ತೋರಿಸಿಕೊಳ್ಳಲು ಇದೇ ದಿ. 18 ರಂದು ಕೋನವಾಳ ಬೀದಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಯೋಗ ಹಾಗೂ ನಾಟಕ ಹೀಗೆ ವೈವಿಧ್ಯಮಯ ಪ್ರತಿಭೆಯನ್ನು ಮಕ್ಕಳು ತೋರಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. 'ವಕ್ರತುಂಡ ಮಹಾಕಾಯ..' ಸರಸ್ವತಿ ವಂದನಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಣೇಶ ಆಹ್ವಾನ ಪೂಜಾ ನೃತ್ಯವನ್ನು ಗಾಯತ್ರಿ, ಸಾಧನಾ ಹಾಗೂ ಸಂಜನಾ ಮಾಡಿದರು. ಮನಿಕಣರ್ಿಕಾ, ಕೃಷ್ಣಾ ಗುಂಪು ನೃತ್ಯಗಳಿದ್ದವು.
ಶಿರೀಶ ಜೋಷಿಯವರ ರಚಿಸಿದ ಗಾಂಧೀಜಿ ಜೀವನ ಚರಿತ್ರೆಯನ್ನಾಧರಿಸಿದ 'ಪಶ್ಚಾತಾಪ' ನಾಟಕವನ್ನು ಹಾಗೂ 'ಏಜ ದಿವಸಾ ಚಿ ಪಾಂಡುರಂಗ' ನಾಟಕ ಎಲ್ಲರ ಗಮನ ಸೆಳೆದವು.
ಶಿರೀಷ ಜೋಶಿ(ನಾಟಕ) ವಿನಾಯಕ ಮೊರೆ(ಸಂಗೀತ), ಗಾಯತ್ರಿ ಜೈನಾಪೂರ(ನೃತ್ಯ ನಿದರ್ೇಶನ), ಜಯಾ ಜೋಶಿ(ನಾಟಕ), ಕವಿತಾ ಗಂಗೂರ(ಯೋಗ), ರಾಹಿ ಕುಲಕಣರ್ಿ(ಕ್ರಾಫ್ಟ್), ವಂದನಾ ಮಾಳಗಿ(ಕ್ರಾಫ್ಟರ್), ಯಶಶ್ರೀ ರಾಯಕರ(ನಾಟಕ), ಜಿತೆಂದ್ರ ರೇಡೆಕರ(ಮರಾಠಿ ನಾಟಕ). ಮುಕುಂದ ನಿಂಗಣ್ಣವರ(ನಾಟಕ) ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಶ್ರೀಮತಿ ಪದ್ಮಾ ಕುಲಕಣರ್ಿ ನಿರೂಪಸಿದರು. ಡಾ. ಅರವಿಂದ ಕುಲಕಣರ್ಿ ಸ್ವಾಗತಿಸಿದರು. ಗುರುನಾಥ ಕುಲಕಣರ್ಿ, ಡಾ. ಸಮಿರ ನಾಯಕ, ವಿಜಯೀಂದ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.