ಧಾರವಾಡ/ಹುಬ್ಬಳ್ಳಿ 23: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿವೈಓ ಮತ್ತು ಎಐಡಿಎಸ್ಓ ಸಂಘಟಿತ 16ನೇ ಧಾರವಾಡ ಸಾಂಸ್ಕೃತಿಕ ಜನೋತ್ಸವದ ಎರಡನೇ ದಿನ ಸಿನಿಮಾಗಳ ಪ್ರದರ್ಶನ ನಡೆಯಿತು. ಮೊದಲಿಗೆ ಖ್ಯಾತ ಇರಾನಿ ಸಿನಿಮಾ ನಿದರ್ೇಶಕ ಮಜೀದ್ ಮಜೀದಿಯವರು ನಿದರ್ೇಶಿಸಿರುವ ಸಿನಿಮಾ 'ಬಿಯಾಂಡ್ ದ ಕ್ಲೌಡ್ಸ್' ಪ್ರದರ್ಶನಗೊಂಡಿತು. ಇದರಲ್ಲಿ ಭಾರತದಲ್ಲಿನ ಸ್ಲಂಗಳಲ್ಲಿನ ಬಡಮಕ್ಕಳ ಬದುಕಿನ ಬದುಕಿನ ಬವಣೆಯನ್ನು, ಸ್ಲಂಗಳಲ್ಲಿ ಹರಡಿರುವ ಡ್ರಗ್ಸ್ಗಳ ಮಾಫಿಯಾ ಮತ್ತು ಅದರ ವಿಷಜಾಲವನ್ನು ಅನಾವರಣಗೊಳಿಸಲಾಗಿದೆ. ಅದೇ ರೀತಿ ನವಿರಾದ ಮನುಷ್ಯ ಸಂಬಂಧಗಳ ಕುರಿತು ಮನೋಜ್ಞವಾಗಿ ಚಿತ್ರಿಸಲಾಗಿದೆ.
ನಂತರ ಅನುಭವ್ ಸಿನ್ಹಾ ನಿದರ್ೇಶಿಸಿರುವ ಹಿಂದಿ ಸಿನೆಮಾ 'ಮುಲ್ಕ್' ಪ್ರದರ್ಶನಗೊಂಡಿತು. ಯಾವರೀತಿ ಧರ್ಮವನ್ನು ಆತಂಕವಾದೊಂದಿಗೆ ಜೋಡಿಸಲಾಗಿದೆ ಮತ್ತು ಇಂತಹ ಸಂದರ್ಭದಲ್ಲಿ ಮುಸ್ಲಿಂ ಕುಟುಂಬವೊಂದು ತಮ್ಮ ದೇಶದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಬೇಕಾದ ಸಂದರ್ಭದಲ್ಲಿನ ತುಮುಲಗಳನ್ನು-ತಲ್ಲಣಗಳನ್ನು ಮನಕಲಕುವಂತೆ ಬಿಂಬಿಸಲಾಗಿದೆ. ನಾಗರಿಕರು, ವಿದ್ಯಾಥರ್ಿ-ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿನಿಮಾ ಪ್ರದರ್ಶನ ಯಶಸ್ವಿಯಾಯಿತು.