ಸಾಂಸ್ಕೃತಿಕ ಸ್ಪರ್ಧೆ: ವಿಭಾಗೀಯ ಮಟ್ಟಕ್ಕೆ ಆಯ್ಕೆ

ಸಂತೋಷಕುಮಾರ ಭೀ. ಕರ್ಜಗಿ, ಗೌರವಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್‌.ಬಿ. ಬಿರಾದಾರ, ಮಾರ್ಗದರ್ಶಕ ಕೆ.ಎ

ಸಾಂಸ್ಕೃತಿಕ ಸ್ಪರ್ಧೆ: ವಿಭಾಗೀಯ ಮಟ್ಟಕ್ಕೆ ಆಯ್ಕೆ 

ಸಿಂದಗಿ 25: ಇಲ್ಲಿನ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಜಯಪುರ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸ್ಥಳೀಯ ಪಿ.ಇ.ಎಸ್‌. ಗಂಗಾಧರ ಎನ್‌. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಪ್ರೀತಮ್ ಶಾಬಾದಿ (ಪ್ರಥಮ) ಚಿತ್ರಕಲೆ, ಭವಾನಿ ಪಾಟೀಲ (ಪ್ರಥಮ) ಪ್ರಬಂಧ ಸ್ಪರ್ಧೆ ಹಾಗೂ ಸೋಮರಾಯ ಪೂಜಾರಿ (ದ್ವಿತೀಯ) ಜನಪದ ಗೀತೆ ಸ್ಥಾನ ಪಡೆಯುವುದರ ಮೂಲಕ ವಿಭಾಗೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಂತೋಷಕುಮಾರ ಭೀ. ಕರ್ಜಗಿ, ಗೌರವಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್‌.ಬಿ. ಬಿರಾದಾರ, ಮಾರ್ಗದರ್ಶಕ ಕೆ.ಎಚ್‌. ಸೋಮಾಪೂರ, ಪ್ರಾಚಾರ್ಯರಾದ ಆರ್‌.ಬಿ. ಗೋಡಕರ, ಜಿ.ಎಸ್‌. ಕಡಣಿ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.