ಸಾಂಸ್ಕೃತಿಕ ಕಲಾ ಸಂಭ್ರ್ರಮ
Cultural Arts Festival
ಲೋಕದರ್ಶನ ವರದಿ
ಯಮಕನಮರಡಿ 25: ಸಮೀಪದ ಕೋಚರಿ ಗ್ರಾಮದಲ್ಲಿ ಜಾನಪದ ಸಾಂಸ್ಕೃತಿಕ ಕಲೆಗಳು ಹಳ್ಳಿ ಮನೆಯ ತವರೂರಿನ ಕಲೆಗಳು, ಅಂತಹ ಮೂಲ ಜಾನಪದ ಕಲಾ ಪರಂಪರೆಯನ್ನು ಉಳಿಸಲು ವಿವಿಧ ಕಲಾಪ್ರಕಾರಗಲನ್ನು ಒಂದೇ ವೇದಿಕೆ ತಂದು, ಕಲಾತಂಡಗಳಿಗೆ ಪ್ರೋತ್ಸಾಹ ನೀಡಿ ಕಲಾವಿದನಿಗೆ ಉತ್ತೇಜನ ನೀಡಿ ಬೆಳಸಬೇಕೆಂದು ಸಾಹಿತಿಗಳಾದ ಚಂದ್ರಶೇಖರ ಅರಭಾಂವಿ ಸಾಂಸ್ಕೃತಿಕ ಸಂಘಟಕರಿಗೆ ಕರೆ ನೀಡಿದರು.
ಅವರು ಕಳೆದ ಶುಕ್ರವಾರ 24 ರಂದು ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಶ್ರೀ ವಿರಭದ್ರೇಶ್ವರ ಸೇವಾ ಸಂಘ ಕೋಚರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನ ಆವರನದಲ್ಲಿ ಜರುಗಿದ ಹಳ್ಳಿ ಜಾನಪದ ಬಯಲಾಟ ಸೋಬಗು ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಬೆಳಗಾವಿ ಜಿಲ್ಲೆ ಸಣ್ಣಾಟದ ಕೊಡುಗೆ ನೀಡಿದ ಜಿಲ್ಲೆ ಬಯಲಾಟ ಸಣ್ಣಾಟ ಕಲೆ ಸೋಬಗನ್ನು ಸವಿಯಲು ಆಗಾಗ ಇಂತಹ ಕಲಾಮೇಳಗಳು ನಡೆಯಬೇಕೆಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ ಆಕಾಶವಾಣಿ ದೂರದರ್ಶನ ಕಲಾವಿದರಾದ ಈಶ್ವರಚಂದ್ರ ಬೇಟಗೇರಿ ಇವರು ಮಾತನಾಡಿ ರಂಗಕಲೆ, ಜಾನಪದ ಕಲೆ, ಸಣ್ಣಾಟ ಕಲೆ ತ್ರೀವೇಣಿ ಸಂಗಮದ ಕಲೆಗಳು. ಅನಕ್ಷರಸ್ಥರಿದ್ದರು ನೂರಾರು ಪದಗಳನ್ನು ಕಲಿತು ಹಾಡಿ ಕುಣಿದು ಕಲಾಪ್ರೇಕ್ಷಕರಿಗೆ ತಮ್ಮ ಕಲಾ ಪ್ರದರ್ಶನದಿಂದ ಮನಸ್ಸನ್ನು ಸೆಳೆಯುವ ನಮ್ಮ ಕಲೆ ಪ್ರತಿಯೊಬ್ಬರ ಉಸಿರಾಗಿರಬೇಕೆಂದರು.
ಹಿರಿಯ ಕಲಾವಿದ ಶಿವಮೊಗ್ಗಿ ಥರಕಾರ ವಾದ್ಯ ನುಡಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸೂರ್ಯಕಾಂತ ನಾಯಿಕ, ಕಾಳಪ್ಪಾ ಬಡಿಗೇರ ಕಲಾವಿದರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರಗಾಸೆ ಕುಣಿತ, ಸಂಗೀತ ಗಾಯನ, ಕರಡಿ ಮಜಲು, ಡೋಲ್ ಪಥಕ, ಭಜನಾ ಪದ, ಸಂಗ್ಯಾ-ಬಾಳ್ಯಾ ಸಣ್ಣಾಟ, ನಿಜಗುಣ ಶಿವಯೋಗಿ ಬಯಲಾಟ ಕಲಾಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮನರಂಜಿಸಿದರು. ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸುಜಾತಾ ಮಗದುಮ್ಮ ಸ್ವಾಗತಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 