ವಿದ್ಯಾರ್ಥಿಗಳ ವಿಕಾಸ ತೆಗೆ ಸಾಂಸ್ಕೃತಿಕ ಕಲೆಗಳು ಸಹಕಾರ: ಬಳ್ಳಾರಿ

ಲೋಕದರ್ಶನ ವರದಿ                    

ರಾಣೇಬೆನ್ನೂರು22:  ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಜನಪದ ಸಾಂಸ್ಕೃತಿಕ ಕಲೆಗಳು ಮಾನವನ ಸಮಗ್ರ ವಿಕಾಸತೆಗೆ ಅತ್ಯಂತ ಸಹಕಾರಿಯಾಗಲಿದೆ, ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು, ಅವರಲ್ಲಿರುವ ನೈಜ ಜನಪದ ಕಲೆಗಳು ಭವಿಷ್ಯದ ಜನಾಂಗಕ್ಕೆ ಹಸ್ತಾಂತರಿಸಿರುವ ಕಾರ್ಯ ನಡೆಯಬೇಕಾಗಿದೆ ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

ಅವರು ಶನಿವಾರ ನಗರದ ಬಿ.ಕೆ.ಗುಪ್ತಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾಮಟ್ಟದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  

ವಿದ್ಯಾಥರ್ಿಗಳಲ್ಲಿ ಹಲವಾರು ಆಂತರಿಕ ಅಭಿವ್ಯಕ್ತಿ ಹೊರಸೂಸುವ ಅನೇಕ ಕಲೆಗಳು ಅಡಗಿರುತ್ತವೆ.  ಅದನ್ನು ಹೊರಸೂಸಬೇಕಾದರೆ, ಮಕ್ಕಳಿಗೆ ವೇದಿಕೆಗಳ ಅಗತ್ಯವಿದೆ.  ಅಂತಹ ವೇದಿಕೆ ಪ್ರತಿಭಾ ಕಾರಂಜಿ, ಕಲ್ಪಿಸಿಕೊಟ್ಟಿದೆ.  ಅದರ ಮುಖಾಂತರ ತಮ್ಮಲ್ಲಿರುವ ಎಲ್ಲ ಕಲೆಗಳನ್ನು ಪ್ರದಶರ್ಿಸಿ, ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಬೇಕು ಅದಕ್ಕೆ ಗುರುಗಳು ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು. 

ಮುಖ್ಯ ಅತಿಥಿಯಾಗಿದ್ದ, ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ,  ಅವರು ಕಲೆ ಮತ್ತು ಕಲಾವಿದರು ಭಾರತ ದೇಶದ ಮತ್ತು ನಾಡಿನ ಸಾಂಸ್ಕೃತಿಕ ರುವಾರಿಗಳು. 

       ನಮ್ಮ ನೆಲೆ ಸಂಸ್ಕೃತಿಯ ಜನಪದ ಕಲಾಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿವೆ.  ಹೊರದೇಶದವರು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಾರೆ.  ಅದು ಹೆಮ್ಮೆಯ ಸಂಗತಿ ಆದರೆ, ಇಂದು ಪಾಶ್ಚೀಮಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿರುವ ನಮ್ಮ ಯುವ ಜನಾಂಗದಿಂದ ನಮ್ಮತನವನ್ನೇ ನಾವು ಕಳೆದುಕೊಂಡಂತಾಗಿದೆ ಎಂದು ವಿಷಾಧಿಸಿದರು. 

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಏಕನಾಥ ಬಾನುವಳ್ಳಿ, ಎನ್.ಶ್ರೀಧರ, ಮಾರುತಿ ರಾಠೋಡ, ಕರಿಯಪ್ಪ ತೋಟಗೇರ, ಎಸ್.ವಿ.ಸೀಮಿಕೇರಿ, ಶ್ರೀನಿವಾಸ ಸಾಹುಕಾರ, ಎಂ.ಡಿ.ದ್ಯಾಮಣ್ಣನವರ, ಕಸ್ತೂರಮ್ಮ ಹೊನ್ನಾಳಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಚೈತ್ರಾ ಮಾಗನೂರ, ತಾಲೂಕಾ ಪಂಚಾಯತ್ ಸದಸ್ಯೆ ಗೀತಾ ವಸಂತ ಲಮಾಣಿ, ಎ.ಬಿ.ರತ್ನಮ್ಮ, ವ್ಹಿ.ವಿ.ಮಣ್ಣಬಸಣ್ಣನವರ, ಎಚ್.ಎಂ.ಚನ್ನಮಲ್ಲಯ್ಯ, ಎಸ್.ಎಸ್.ಮುದ್ದಪ್ಪಳವರ, ಲಿಂಗರಾಜ ಸುತ್ತಕೋಟಿ, ಸಿ.ಎಚ್.ಮೇಗಳಮನಿ, ಎ.ಎಂ.ಎಸ್.ಮಳಿಮಠ, ಎಫ್.ಸಿ.ಬಾಳಿಕಾಯಿ, ಸಿ.ಕೆ.ಅಕ್ಕಿ, ಜಗೀಶ ಹುಗ್ಗಿ, ಜಿ.ಎಚ್.ಹನುಮಂತರಡ್ಡಿ, ಎಂ.ಕೆ.ಸಾಲಿಮಠ, ಯು.ಚ್.ಶೇಖ್ ಸೇರಿದಂತೆ ಮತ್ತಿತರ ಗಣ್ಯರು, ವಿವಿಧ ಶಾಲಾ ಶಿಕ್ಷಕರು ಮತ್ತು ಪ್ರತಿಭಾ ಸಂಪನ್ನ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.