ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಭಾತೃತ್ವ ಬೆಳಿಸಿಕೊಳ್ಳಿ: ಪಲ್ಲವಿ ನಾಡಗೌಡ

ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಭಾತೃತ್ವ ಬೆಳಿಸಿಕೊಳ್ಳಿ: ಪಲ್ಲವಿ ನಾಡಗೌಡ  Cultivate brotherhood to avoid disturbing harmony in society: Pallavi Nadagowda

 ತಾಳಿಕೋಟಿ 11: ಸಮಾಜದಲ್ಲಿರುವ ಕೆಡುಕುಗಳನ್ನು ನಿರ್ಮೂಲನೆಗೊಳಿಸಿ ಎಲ್ಲ ವರ್ಗದ ಜನರ ಮಧ್ಯೆ ಪ್ರೀತಿ ವಿಶ್ವಾಸ ಹಾಗೂ ಭಾತೃತ್ವವನ್ನು ಸ್ಥಾಪಿಸುವುದು ಸಂಘಟನೆಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು. ಭಾನುವಾರ ತಾಲೂಕಿನ ಬಾವೂರ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡ ಟ್ರಸ್ಟ್‌ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದಲೇ ಸಾಧ್ಯ. ಹೆತ್ತವರು ಮಕ್ಕಳ ಶಿಕ್ಷಣ ಹಾಗೂ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು. ಗ್ರಾಮದಲ್ಲಿ ಯುವಕರು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ ಅವರನ್ನು ಸರಿದಾರಿಗೆ ತರುವ ಕೆಲಸ ಟ್ರಸ್ಟ್‌ ಸದಸ್ಯರು ಮಾಡಬೇಕು. ಗ್ರಾಮದ ಶಾಂತಿ ಕೆಡದಂತೆ ನೋಡಿಕೊಂಡು ನಾವೆಲ್ಲರೂ ಒಂದು ಎಂಬ ಭಾವನೆ ಯೊಂದಿಗೆ ಬದುಕಲು ಪ್ರಯತ್ನಿಸಿ ಎಂದರು.

ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿ ಬಾವೂರು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಗ್ರಾಮವಾಗಿದೆ. ಟ್ರಸ್ಟ್‌ ನ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಗ್ರಾಮವನ್ನು ಜಿಲ್ಲೆಯ ಒಂದು ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಿ. ಸಮುದಾಯ ಭವನದ ನಿರ್ಮಾಣಕ್ಕೆ ಅಸ್ಕಿ ಫೌಂಡೇಶನ್ ವತಿಯಿಂದ ಸಾಧ್ಯವಿದ್ದಷ್ಟು ಆರ್ಥಿಕ ಸಹಾಯ ನೀಡಲಾಗುವುದು ಎಂದರು. ಗ್ರಾಮದ ಗಣ್ಯರಾದ ಎಚ್‌.ಎಸ್‌.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟನ ಸದಸ್ಯರು ಗ್ರಾಮದ ಹಿರಿಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು.

ಟ್ರಸ್ಟ್‌ ಮೂಲಕ ಗ್ರಾಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಗ್ರಾಮದ ಕೀರ್ತಿ ತರಲು ಪ್ರಯತ್ನಿಸಬೇಕು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ತಾಳಿಕೋಟಿ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಮದ ಗಣ್ಯರಾದ ಆನಂದರಾಜ್ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣ್ಯರಾದ ಶಾಂತಗೌಡ ಪಾಟೀಲ, ನಿಂಗನಗೌಡ ಬಿರಾದಾರ, ಮಲ್ಲನಗೌಡ ಬಳಗಾನೂರ, ಬಾಪ್ ಢವಳಗಿ, ರೆಹಮಾನಸಾಬ ಅವಟಿ, ಶಿಕ್ಷಕಿ ಜಿ.ಜಿ. ತಾಳಿಕೋಟಿ,ಆಸೀಫ್ ತಾರಘರ, ಟ್ರಸ್ಟ್‌ ಅಧ್ಯಕ್ಷ ಬಸೀರ ಅಹ್ಮದ್ ಕಾಳಗಿ, ಉಪಾಧ್ಯಕ್ಷ ಬಸೀರ ಅಹ್ಮದ್ ಕಮತಗಿ, ಪ್ರಧಾನ ಕಾರ್ಯದರ್ಶಿ ಲಾಲಸಾಬ ನಿಡಗುಂದಿ,ಸಹ ಕಾರ್ಯದರ್ಶಿ ಮಹೆಬೂಬ ಕಮತಗಿ, ಖಜಾಂಚಿ ರಾಜಣ್ಣ ನಿಡಗುಂದಿ, ಸದಸ್ಯರಾದ ಇಬ್ರಾಹಿಂ ನಿಡಗುಂದಿ, ದಾವಲಸಾಬ ಕಾಳಗಿ,ಹಸನ್ ಖಾದ್ರಿ,ಬಂದೇನವಾಜ್ ನಿಡಗುಂದಿ, ಮುಸ್ತಫಾ ನಿಡಗುಂದಿ, ಹುಸೇನ್ ಜಮಾದಾರ, ನಬಿಸಾಬ ಕಮತಗಿ, ಸಾಧೀಕ ನಿಡಗುಂದಿ,ಮೋದಿನಸಾಬ,ರಿಯಾಜ, ಹಾಗೂ ಗ್ರಾಮಸ್ಥರು ಇದ್ದರು.