ಬೆಂಗಳೂರು, ನ 2: ಬೆಂಗಳೂರಿನ ಶ್ವಾಸ ಕೇಂದ್ರ ಎಂದೇ ಗುರುತಿಸಿಕೊಂಡಿರುವ ಕಬ್ಬನ್ ಪಾರ್ಕ್ ಗೆ ಸರ್ಕಾರ ಕೊಡಲಿ
ಹಾಕಲು ಮುಂದಾಗಿರುವ ಹಾಗೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ‘ವಕೀಲರ ಪರಿಷತ್ ಕಟ್ಟಡವನ್ನು’ ಕೆಡವಿ,
ಬಹು ಅಂತಸ್ತಿನ ಹೊಸ ಕಟ್ಟಡ ಕಟ್ಟಲು ಅನುಮತಿ ನೀಡಿರುವುದನ್ನು ಖಂಡಿಸಿ ಆಮ್ ಆದ್ಮಿ( ಅಪ್) ಪಕ್ಷ ಹೋರಾಟ
ನಡೆಸಲಿದೆ.
ಬೆಂಗಳೂರಿನ ಕಗ್ಗದಾಸಪುರ,
ಗೊಟ್ಟಿಗೆರೆ, ಬೊಮ್ಮಸಂದ್ರ ಕೆರೆ ಉಳಿಸಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿ ಹೋರಾಟ ನಡೆಸಿದ್ದ ಆಪ್
ಈಗ ಅಂತಹದ್ದೇ ಹೋರಾಟಕ್ಕೆ ಸಜ್ಜಾಗುವಂತಹ ಅನಿವಾರ್ಯತೆಯನ್ನು ರಾಜ್ಯ ಸರ್ಕಾರವೇ ಸೃಷ್ಟಿಸಿದೆ.
ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್ ಸುತ್ತ
ಸುತ್ತಮುತ್ತ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ನಿಮಯಗಳಿವೆ. ಈ ಪಾರಂಪರಿಕ ಕಟ್ಟಡ
ಮತ್ತು ಬೆಂಗಳೂರಿನ ಬಹುಭಾಗಕ್ಕೆ ಜೀವವಾಯುವಾಗಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟ ನಡೆಸಲು ನಾಗರಿಕರು
ಮುಂದಾಗಿದ್ದಾರೆ.
ನವೆಂಬರ್ 3 ರ ಭಾನುವಾರ ಸಂಘಟನೆಯು ನಡೆಸುತ್ತಿರುವ *ಕಬ್ಬನ್ ಪಾರ್ಕ್ ಉಳಿವಿಗಾಗಿ
ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಜ್ಜಾಗಿದೆ ಎಂದು ಬೆಂಗಳೂರು ಆಪ್ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ದೆಹಲಿಯಲ್ಲಿ ಎಎಪಿ
ಸರ್ಕಾರವು ಕಳೆದ 5 ವರ್ಷಗಳಲ್ಲಿ ಪರಿಸರ ರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸಲು ಹೆಚ್ಚಿನ ಆಧ್ಯತೆ
ನೀಡಿ ಶೇ 19 ರಷ್ಟು ಹಸಿರು ಹೊದಿಕೆ(ಗ್ರೀನ್ ಕವರ್)ಯನ್ನು ಹೆಚ್ಚಿಸಿದೆ. ಅಲ್ಲದೆ ಮುಂಬೈನ ಆರೇ ಕಾಲೊನಿಯಲ್ಲಿರುವ
ಅರಣ್ಯ ಪ್ರದೇಶದಲ್ಲಿ ಮೆಟ್ರೋ ಡಿಪೋ ನಿರ್ಮಾಣಕ್ಕಾಗಿ 2141 ಮರಗಳನ್ನು ಕಡಿಯಲು ಮುಂದಾಗಿದ್ದ ರಾಜ್ಯ
ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸ್ಥಳೀಯ ನಾಗರಿಕರ ಜೊತೆಗೂಡಿ ಹೋರಾಟ ನಡೆಸಿ, ಅರಣ್ಯ
ಪ್ರದೇಶವನ್ನು ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಮುಂಚೂಣಿ ಪಾತ್ರವಹಿಸಿದೆ. ಪರಿಸರ ಸಂರಕ್ಷಣೆಯ
ವಿಷಯದಲ್ಲಿ ರಾಜಿಯಿಲ್ಲದೆ ನೆಲ-ಜಲ ಸಂರಕ್ಷಣೆಗೆ ಆಮ್ ಆದ್ಮಿ ಪಕ್ಷವು ಕಟಿಬದ್ಧವಾಗಿದೆ. ದೇಶದ ಯಾವುದೇ
ಮೂಲೆಯಲ್ಲೂ ಅನವಶ್ಯಕವಾಗಿ ಪರಿಸರವನ್ನು ನಾಶ ಮಾಡುವುದರ ವಿರುದ್ಧ ಹೋರಾಟ ನಡೆಸಲು ಪಕ್ಷ ಸಿದ್ಧವಾಗಿದೆ
ಎಂದರು.