ಕೊಪ್ಪಳ 04: ಮೂಲ ಕಾರ್ಯಕರ್ತರೇ ಬೆಳೆ ಸಮೀಕ್ಷೆಯನ್ನು ಕೈಗೊಂಡು ಇಳುವರಿ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ಮೂಲ ಕಾರ್ಯಕರ್ತರಿಗೆ ಬೆಳೆ ಕಟಾವು ಪ್ರಯೋಗಗಳ ತರಬೇತಿ ಕುರಿತ ಎರಡನೇ ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾಗುವಳಿದಾರನ ಸಮಕ್ಷಮದಲ್ಲಿಯೇ ಬೆಳೆ ಕಟಾವು ಮಾಡಬೇಕು. ಸಿಸಿಇ ನಿಯಮಾನುಸಾರ ಎಲ್ಲಾ ನಿಯಮವನ್ನು ಪಾಲಿಸಬೇಕು. ತಪ್ಪದೇ ಶಿಸ್ತುಕ್ರಮ ಬದ್ಧವಾಗಿ ನಿಗದಿತ ಅವಧಿಯೊಳಗಾಗಿ ಬೆಳೆ ಕಟಾವು ಕೈಗೊಳ್ಳಬೇಕು. ಮೂಲಕಾರ್ಯಕರ್ತರು ಕಡ್ಡಾಯವಾಗಿ ವಿಮಾಕಂಪನಿಯ ಪ್ರತಿನಿಧಿಗೆ ಒಂದು ದಿನ ಮುಂಚೆ ತಿಳಿಸುವುದು ಹಾಗೂ ನಿಯಮಾನುಸಾರ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು. ಮೂಲಕಾರ್ಯಕರ್ತರು ಪ್ರತಿ ಪ್ರಯೋಗಕ್ಕೆ ಮೂಲ ಸವರ್ೇ ನಂಬರ ಸೇರಿದಂತೆ ಹೆಚ್ಚುವರಿಯಾಗಿ 4ಸರ್ವೇ ನಂಬರಗಳನ್ನು ಅಳವಡಿಸುವುದು ಕಡ್ಡಾಯವಿದೆ. ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿರುವ ವಿವಿಧ ಇಲಾಖೆಯ ಅಧಿಕಾರಿಗಳು ಕಟಾವು ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಯೋಜನಾ ಪಟ್ಟಿಯನ್ನು ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಾಡಬೇಕು. ಯಾವುದೇ ಕಾರಣಕ್ಕೂ ಬೆಳೆ ಬದಲಾವಣೆಯನ್ನು ಮಾಡಬಾರದು. ಸಮೀಕ್ಷೆ ಕೈಗೊಳ್ಳುವ ಮೊದಲು ಸವರ್ೇ ನಂಬರಿನಲ್ಲಿ ಕಡ್ಡಾಯವಾಗಿ ನೀರಾವರಿ ಇದ್ದರೆ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆ ಎಂದು ನಮೂದಿಸಬೇಕು ಎಂದು ತಿಳಿಸಿದರು.
ನಮೂನೆ-1ನ್ನು ಅಪಲೋಡ್ ಮಾಡುವಾಗ ಒಂದು ಪ್ರಯೋಗಕ್ಕೆ ಕಡ್ಡಾಯವಾಗಿ 5 ಸರ್ವೇ ನಂಬರಗಳನ್ನು ಅಳವಡಿಸಿ ಅಪಲೋಡ್ ಮಾಡಬೇಕು. ನಮೂನೆ-1ರ ಛಾಯಾಚಿತ್ರದಲ್ಲಿ ಕಡ್ಡಾಯವಾಗಿ ಮೂಲ ಕಾರ್ಯಕರ್ತರು ಇರಬೇಕು. ನಮೂನೆ-1ರ ಛಾಯಾಚಿತ್ರ ಸೆರೆ ಹಿಡಿದ ಸ್ಥಳದಲ್ಲಿಯೇ ಮಾಹಿತಿಯನ್ನು ಸಂಪೂರ್ಣವಾಗಿ ಭತರ್ಿ ಮಾಡಿ ಸಂಬಂಧಿಸಿದ ಸವರ್ೇ ನಂಬರನಲ್ಲಿಯೇ ಕಡ್ಡಾಯವಾಗಿ ಮಾಹಿತಿಯನ್ನು ಉಳಿಸಬೇಕು. ಒಂದು ವೇಳೆ ಬೇರೆ ಸ್ಥಳದಲ್ಲಿ ಮಾಹಿತಿಯನ್ನು ಉಳಿಸಿ ಅಪಲೋಡ್ ಮಾಡಿದರೆ ನಮೂನೆ-2ನ್ನು ಕೈಗೊಳ್ಳುವ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆ ಉಂಟಾಗುತ್ತವೆ. ಮೂಲ ಕಾರ್ಯಕರ್ತರು, ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯಾವುದೇ ಕಾರಣಕ್ಕೂ ಪ್ರಯೋಗಗಳು ನಷ್ಟಗೊಳ್ಳದಂತೆ ಮುಂಜಾಗ್ರತೆಯನ್ನು ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣ ಮೂತರ್ಿ ದೇಸಾಯಿ ಅವರು ಬೆಳೆ ಕಟಾವು ಕುರಿತು ಸಮಗ್ರ ಮಾಹಿತಿ ನೀಡಿದರು. ಕಾಯರ್ಾಗಾರದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ಕೆ ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬೆಳೆ ಕಟಾವು ಮೂಲ ಕಾರ್ಯಕರ್ತರು, ತರಬೇತಿದಾರರು ಉಪಸ್ಥಿತರಿದ್ದರು. ಮೆಕ್ಕೆಜೋಳ, ಜೋಳ, ಶೇಂಗಾ, ಹುರಳಿ, ಹುರಿಕಡಲೆ, ಸೂರ್ಯಕಾಂತಿ, ತೊಗರಿ, ಸಜ್ಜೆ, ಹತ್ತಿ ಹಾಗೂ ಇತರೆ ಬೆಳೆಗಳ ಕಟಾವು ಕುರಿತು ಪ್ರಯೋಗಿಕವಾಗಿ ಮಾಹಿತಿಯನ್ನು ನೀಡಲಾಯಿತು.