ಬೆಳೆ ವಿಮೆ ಪ್ರಕರಣ: ರಾಜ್ಯ ಗ್ರಾಹಕರ ಆಯೋಗಕ್ಕೆ ಮೊರೆ

ಲೋಕದರ್ಶನ ವರದಿ

ಕೊಪ್ಪಳ: ಬೆಳೆ ವಿಮೆ ಪ್ರಕರಣ ಗ್ರಾಹಕರ ವೇದಿಕೆಯಲ್ಲಿ ತಿರಸ್ಕೃತಗೊಂಡಿದ್ದು, ಇದರಿಂದ ಬೆಳೆ ವಿಮೆ ಪರಿಹಾರ ಇಲ್ಲದೇ ತೀವ್ರ ತೋಂದರೆಯಾಗಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿ ಮತ್ತೊಮ್ಮೆ ರಾಜ್ಯ ಗ್ರಾಹಕರ ಆಯೋಗಕ್ಕೆ ಮೊರೆ ಹೋಗುವುದಾಗಿ ರೈತರ ತಂಡದ ಮುಖ್ಯಸ್ಥ ಕೃಷ್ಣರೆಡ್ಡಿ ಗಲಬಿ ಹೇಳಿದರು. 

ಅವರು ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ತೋಟಗಳಲ್ಲಿ ಬೆಳೆದ ಬೆಳೆಗಳಾದ ಬಾಳೆ, ದ್ರಾಕ್ಷಿ, ಹಸಿ ಮೆಣಸಿನಕಾಯಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗಿದ್ದು, ಸದರಿ ಬೆಳೆಗಳಿಗೆ ಬ್ಯಾಂಕಿನಿಂದ ಆಥರ್ಿಕ ಸಹಾಯ ಪಡೆಯಲಾಗಿತ್ತು.  ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿಯಲ್ಲಿ ಬ್ಯಾಂಕ್ ಮುಖಾಂತರ ವಿಮೆ ಮಾಡಿಸಲಾಗಿದೆ.  ಆದರೆ ಸರಿಯಾದ ಹವಮಾನ, ಮಳೆಯಿಲ್ಲದೇ ಕೆಲವು ಕಡೆ ಅತೀಯಾದ ಮಳೆಯಿಂದ ಬೆಳೆಗಳು ಹಾನಿಯಾಗಿವೆ ಎಂದರು.  

ಮುಂದುವರೆದು ಮಾತನಾಡಿ ಹಾನಿಗೊಳಗಾದ ಬೆಳೆಗಳಿಗೆ ವಿಮಾ ಕಂಪನಿಯವರು ಪರಿಹಾರ ನೀಡಲಿಲ್ಲ.  ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಲಿಲ್ಲ.  ಇದರ ಬಗ್ಗೆ ಗ್ರಾಹಕರ ವೇದಿಕೆಗೆ ಮೊರೆ ಹೋಗಿ ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರೂ ಸಹ ನಮ್ಮ ಪ್ರಕರಣಗಳು ವೇದಿಕೆಯಲ್ಲಿ ತಿರಸ್ಕೃತಗೊಂಡಿವೆ.  ಗ್ರಾಹಕರ ವಿರುದ್ಧವೇ ತೀಪರ್ು ಬಂದಿರುವುದರಿಂದ ಸದರಿ ತೀರ್ಪನ್ನು ಪ್ರಶ್ನಿಸಿ ರಾಜ್ಯ ಗ್ರಾಹಕರ ಆಯೋಗಕ್ಕೆ ನ್ಯಾಯಕ್ಕಾಗಿ ಮೊರೆಹೋಗಲು ಸಜ್ಜಾಗಿದ್ದೇವೆ ಎಂದು ರೈತರ ತಂಡದ ಮುಖ್ಯಸ್ಥ ಕೃಷ್ಣರೆಡ್ಡಿ ಗಲಬಿ ಹೇಳಿದರು. 

ನ್ಯಾಯಾವಾದಿ ಎಂ.ಎಂ. ಮುದಗಲ್, ರೈತರಾದ ಶಂಕ್ರಪ್ಪ ಮಟ್ರಿ, ಸಂಗನಗೌಡ, ದ್ಯಾಮಣ್ಣ ಕನಕಗಿರಿ, ಶಿವರೆಡ್ಡಿ ಮೈನಳ್ಳಿ, ಭೀಮರೆಡ್ಡಿ, ಬಸರೆಡ್ಡಿ, ದೇವರೆಡ್ಡಿ, ಶೇಖರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.