ಬೆಳೆ ವೈವಿಧ್ಯತೆ ತರಬೇತಿ ಕಾರ್ಯಕ್ರಮ
ಧಾಮಣೆ 21:ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ರಾಷ್ಟ್ರೀಯ ಮಣ್ಣು ಸಮೀಕ್ಷೆ ಹಾಗೂ ಭೂ ಬಳಕೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಧಾಮಣೆ ಗ್ರಾಮದಲ್ಲಿ ಬೆಳೆ ವೈವಿಧ್ಯತೆ ಯೋಜನೆಯ ಕಾರ್ಯಕ್ರಮದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ಇವರು ಅಧ್ಯಕ್ಷೀಯ ನುಡಿಯಲ್ಲಿ ಸಮಗ್ರ ಕೃಷಿ ಪದ್ಧತಿ, ಮಿಶ್ರ ಬೆಳೆ, ಸಮಗ್ರ ಪೀಡೆ ನಿರ್ವಹಣೆ, ಮಣ್ಣು ಫಲವತ್ತತೆ, ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಮಾಡಲು ಕರೆ ನೀಡಿದರು. ರಾಸಾಯನಿಕ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಲು ಕರೆ ನೀಡಿದರು. ಅದೇರೀತಿ, ಬೆಂಗಳೂರಿನ ಡಾ. ಚರಣ್‌ಕುಮಾರ ಜಿ. ಆರ್. ಇವರು ಮಣ್ಣಿನ ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆ ಪ್ರಯೋಜನಗಳ ಜೊತೆಗೆ ರಾಸಾಯನಿಕ ಗೊಬ್ಬರಗಳ ಸಮತೋಲನ ಬಳಕೆ ಮಾಡುವಂತೆ ಮನವಿ ಮಾಡಿದರು. ಡಾ. ಆರ್. ಶ್ರೀನಿವಾಸನ್ ಇವರು ವೈವಿಧ್ಯತೆ ಯೋಜನೆಯ ಕುರಿತು ಸವಿಸ್ತಾರ ಮಾತನಾಡಿ, ಬೆಳೆ ವೈವಿಧ್ಯತೆ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೀಟನಾಶಕಗಳು, ಶೀಲೀಂದ್ರನಾಶಕಗಳು ಮತ್ತು ಪೋಷಕಾಂಶಗಳ ವಿತರಣೆ ಮಾಡಲಾಯಿತು. ತದನಂತರ ಎಲ್ಲ ಶಿಬಿರಾರ್ಥಿಗಳು ಹಾಗೂ ವಿಜ್ಞಾನಿಗಳು ತಾಕುಗಳಿಗೆ ಭೇಟಿ ನೀಡಿ ಬೆಳೆಯ ಪರೀಕ್ಷೆ ನಡೆಸಿ ರೈತರೊಂದಿಗೆ ಚರ್ಚಿಸಿದರು.
ಕೊನೆಯಲ್ಲಿ ರಾಜೇಶ್ವರಿ ವಂದಿಸಿದರು. ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.