ಮಾಸ್ಕ್ ಹಾಕಿಲ್ಲ ಎಂದರೆ ಬೀಳುತ್ತೆ ಕ್ರಿಮಿನಲ್ ಕೇಸು ಜೋಕೆ..

ಬೆಂಗಳೂರು, ಜೂನ್ 29: ಬೆಂಗಳೂರು  ನಗರದಲ್ಲಿ ಇನ್ನು ಸಾರ್ವಜನಿಕವಾಗಿ  ಸಂಚಾರ ಮಾಡುವಾಗ ಕಡ್ಡಾಯವಾಗಿ  ಮಾಸ್ಕ್ ಹಾಕಬೇಕು ಇಲ್ಲವಾದರೆ  ಕ್ರಿಮಿನಲ್  ಪ್ರಕರಣ  ಎದುರಿಸಬೇಕಾಗುತ್ತದೆ ಜೋಕೆ..!!ಇದರ ಜಾರಿಗಾಗಿ  ಇನ್ನು ಮುಂದೆ ಮಾರ್ಷೆಲ್ ಗಳಿಗೆ ಸಾಥ್ ಕೊಡಲಿದ್ದಾರೆ ಪೊಲೀಸರು ಎಂದು ನಗರ  ಪೊಲೀಸ್ ಆಯುಕ್ತ  ಭಾಸ್ಕರ್ ರಾವ್  ಹೇಳಿದ್ದಾರೆ.  ಅಷ್ಟೆ ಅಲ್ಲ ಜೊತೆಗೆ  ಡಿಸಿಪಿಗಳು  ಸಹ   ಖುದ್ದಾಗಿ  ಫೀಲ್ಡಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು. ಒಂದು ವೇಳೆ ಮಾಸ್ಕ್ ಹಾಕದಿದ್ದರೆ ರೆ ಅಂತಹವರ ವಿರುದ್ದ  ಕ್ಕಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದೂ  ಎಚ್ಚರಿಸಿದ್ದಾರೆ.ಕರೋನ ನಿಯತ್ರಣ ಮಾಡಲು  ಬೆಂಗಳೂರು ಜನತೆ ಮಾಸ್ಕ್ ಧರಿಸಲೇ ಬೇಕು ಒಂದು ವೇಳೆ ಆ ವಿಚಾರವಾಗಿ ವಾದ ಮಾಡಿದರೆ  100 ಕಾಲ್ ಮಾಡಿ ದೂರು  ನೀಡಬಹುದಾಗಿದೆ ಎಂದು  ಸೂಚನೆ ಕೊಡಲಾಗಿದೆ ಎಂದರು. ಮಾಸ್ಕ್ ಇಲ್ಲ ದವರಿಗೆ ಮಾಸ್ಕ್ ವಿತರಕರು ಮಾಸ್ಕ್ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.