ಪದ್ಮಶಾಲಿ ಸಮಾಜದಿಂದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ


ಲೋಕದರ್ಶನ ವರದಿ

ಹೋಸಪೇಟೆ 01: ಇಂದು ನಗರದ ಬಳ್ಳಾರಿ ರಸ್ತೆಯಲ್ಲಿರುವ ಮುನೀರ್ ಶೋರೂಂ ಎದುರುಗಡೆ ಮೈದಾನದಲ್ಲಿ  ಪದ್ಮಶಾಲಿ ಸಮಾಜದವತಿಯಿಂದ ಒಟ್ಟು 08 ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಯಿತು.

ಕ್ರಿಕೆಟ್ ಪಂದ್ಯಾವಳಿಗೆ ಟಾಸ್ ತೂರುವ ಮೂಲಕ ಉಧ್ಘಾಟನೆ ಮಾಡಿದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಮೊಟ್ಟಮೊದಲನೆಯದಾಗಿ ಈ ಟೂನರ್ಿಮೆಂಟ್ ಆಯೋಜಿಸಿರುವ ಪದ್ಮಶಾಲಿ ಸಮಾಜದ ಹಿರಿಯ ಎಲ್ಲಾ ಮುಖಂಡರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ನಂತರ ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಕ್ರೀಡಾ ಪಟುಗಳಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯ ಅತ್ಯಂತ ಉತ್ಕೃಷ್ಟವಾಗಿರುತ್ತದೆ. ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ  ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಹಾಗು ಕ್ರೀಡೆಗಳಿಂದ ಪರಸ್ಪರ ಪ್ರೀತಿ ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ. ಅಲ್ಲದೇ ಕ್ರಿಕೆಟ್ ಅಂತರ್ ರಾಷ್ಟ್ರೀಯ ಆಟವಾಗಿರುವುದರಿಂದ ಉತ್ತಮ ಪ್ರತಿಭೆ ಪ್ರದಶರ್ಿಸಿದ್ದೇ ಆದರೆ  ಅಂತರ್ ರಾಷ್ಟ್ರೀಯ ಮಟ್ಟದಲ್ಲಿ  ಆಡುವ ಅವಕಾಶ ನಿಮ್ಮದಾಗಿರುತ್ತದೆ. ಕೊನೆಯಲ್ಲಿ ಕ್ರೀಡೆ ಎಂದಮೇಲೆ ಸೋಲು ಗೆಲುವು ನಿಶ್ಚಿತ, ಹಂಪೈರ್ಗಳ ತೀಮರ್ಾನಕ್ಕೆ ಗೌರವ ನೀಡಿ ಶಾಂತಿಯನ್ನು ಕಾಪಾಡಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದರು.

ಈ ಒಂದು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪದ್ಮಶಾಲಿ ಸಮಾಜದ ಹಿರಿಯ ಮುಖಂಡರುಗಳಾದ ಜೈರಾಮ್, ಬೋಡಾ ರಂಗಪ್ಪ, ಗಂಗಾಧರ್, ವೆಂಕಟೇಶ್, ಯರಿಸ್ವಾಮಿ, ತಾಯಪ್ಪ, ಕಾಪರ್ುಡಿ ಮಹೇಶ್, ಕುಮಾರ್,  ರಮೇಶ್, ನಾಗರಾಜ್, ರಾಘವೇಂದ್ರ, ಜಫ್ರುಲ್ಲಾ ಕಾನ್ ಹಾಗು ಟೂನರ್ಿಮೆಂಟ್ ತಂಡಗಳಾದ ಪಿ.ಬಿ.ಸಿ.ಸಿ. 1, & ಪಿ.ಬಿ.ಸಿ.ಸಿ. 2,   ಲಿಟ್ಲ್ ಹಾರ್ಟ್ಸ್,   ನ್ಯಾಷ್ 11,   ಹಾಡರ್್ ಹಿಟ್ಟರ್ಸ್,    ವಿಟಿ ಬಾಯ್ಸ್,   ಕೆ.ವೈ.ಸಿ.ಸಿ,  ರಾಯಲ್ ಮುಖಂಡರುಗಳು ಮುಂತಾದವರು ಉಪಸ್ಥಿತರಿದ್ದರು.